ತಕ್ಷಶಿಲಾ ಸ್ಪರ್ಧಾತ್ಮಕ ಕೇಂದ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

0
30

ಕಲಬುರಗಿ: ರಾಷ್ಟ್ರೀಯ ಹಬ್ಬ ಹಾಗೂ ನಾಡಹಬ್ಬ ಆಚರಣೆ ಮಾಡುವದು ಕೇವಲ ಒ೦ದು ದಿನಕ್ಕೆ ಸೀಮಿತವಾಗದೆ  ಜೀವನದುದ್ದಕ್ಕೂ ಕನ್ನಡ ಬಿತ್ತುವ ಕಾರ್ಯ ನಿರಂತರವಾಗಿ ಸಾಗಬೇಕೆ೦ದು ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಅಟ್ಟೂರ ಹೇಳಿದರು.

ಇ೦ದು ನಗರದ ತಕ್ಷಶಿಲಾ ಸ್ಪರ್ಧಾತ್ಮಕ ಕೇಂದ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಕನ್ನಡನಾಡು  ಭಾಷಾ ಸಂಸ್ಕೃತಿಯನ್ನೊಳಗೊಂಡ ಶ್ರೀಮಂತಿಕೆ ನಾಡಾಗಿದೆ. ಕನ್ನಡತನವನ್ನು ನಮ್ಮಲ್ಲಿ ಗಟ್ಟಿಯಾಗಿಸಿಕೊ೦ಡು ಇ೦ದು  ಸರ್ವರೂ ಒಂದಾಗಿ, ಕನ್ನಡ ಕಟ್ಟಲು ಮುಂದಾಗಿ ಎಂದು  ಸಂಕಲ್ಪ ಮಾಡಬೇಕು.ಕರ್ನಾಟಕ ಏಕೀಕರಣಕ್ಕಾಗಿ ಹಲವಾರೂ ಜನ ವೀರ ಮರಣ ಅಪ್ಪಿದ್ದಾರೆ, ನಾವೆಲ್ಲರೂ ನಾಡು ಸೇವೆಯೊಂದಿಗೆ ಅವರ ಋಣ ತೀರಿಸಬೇಕಾದ ಕಾರ್ಯ ನಿರಂತರವಾಗಿ ಕೆಲಸ ಮಾಡಬೇಕೆಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಕೊಪ್ಪಳ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ನಾಗರಾಜ ಹೆಬ್ಬಾಳ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಸಾಹಿತ್ಯಪ್ರೇಮಿ ಶರಣರಾಜ ಛಪ್ಪರಬಂದಿ, ಸಾಹಿತಿ ಸಂಗಮೇಶ ನಾಗೂರ ಆಗಮಿಸಿದರು. ತರಬೇತಿ ಕೇಂದ್ರದ ಮುಖ್ಯಸ್ಥರಾದ ವಸಂತ ಕುಮಾರ ಡಿ.ಮಂಗಲಗಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ನಾಗೇಂದ್ರ ಮಾಡ್ಯಾಳೆ, ಜಗದೀಶ ಮರಪಳ್ಳಿ, ಮಹೇಶ ತೊಮಟೆ, ಬಸವರಾಜ, ಪ್ರದೀಪ, ರಾಜಕುಮಾರ, ವಿಜಯಕುಮಾರ, ವೇದವ್ಯಾಸ, ಚಿತ್ರಕಲಾವಿದ ಚಂದನ ಸಿಂಘೆ,ಗಡ್ಡೆಪ್ಪ,ಶಿವರಾಜ ಸಿಪಾಯಿ, ಅರುಣಕುಮಾರ,ಅನಿತಾ ಅಂಕಲಗಿ,ಮೂವಾಶ್ರೀ ದೋಡ್ಲೆ,  ಸಪ್ನಾ ಡೊಲಾರೆ, ಅಬೇದಾ ಬೇಗಂ, ಇತರರು ಉಪಸ್ಥಿತರಿದ್ದರು. ಶ್ವೇತಾ ಪ್ರಾರ್ಥಿಸಿದರು. ಲತಾ ಸ್ವಾಗತಿಸಿದರು. ಶಿಲ್ಪಾ ನಿರೂಪಿಸಿದರು.ಗುರುರಾಜ ಖಣದಾಳ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here