ಜಮಾದಾರ ಮೇಲಿನ ಮಾರಾಣಾಂತಿಕ ಹಲ್ಲೆ ಪ್ರಕರಣ ಸಿಓಡಿ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

0
53

ಚಿತ್ತಾಪುರ:ದುಂಡಪ್ಪಾ ಸಿದ್ರಾಮಪ್ಪ ಜಮಾದಾರ ಅವರನ್ನು ಅಪಹರಿಸಿ ಮಾರಣಾಂತಿಕವಾಗಿ ಥಳಿಸಿ ಹಲ್ಲೆ ಮಾಡಿದ ಪೊಲೀಸ್ ಸಿಪಿಐ ಮತ್ತು ಆರು ಜನ ಸಿಬ್ಬಂದಿಗಳನ್ನು ಬಂಧಿಸಿ ಪ್ರಕರಣ ಸಿಓಡಿಗೆ ಒಪ್ಪಿಸಬೇಕು ಎಂದು ತಾಲ್ಲೂಕ ಕೋಲಿ ಸಮಾಜದ ತಾಲೂಕ ಅಧ್ಯಕ್ಷ ರಾಮಲಿಂಗ ಬಾನರ್ ಅವರ ನೇತೃತ್ವದಲ್ಲಿ ತಹಶೀಲ್ದಾರ ಉಮಾಕಾಂತ ಹಳ್ಳೆ ರವರ ಮೂಲಕ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಕಲಬುರ್ಗಿ ನಗರ ಚೌಕ್ ಪೊಲೀಸ್ ಠಾಣೆಯ ಸಿಪಿಐ ಹಾಗೂ ಆರು ಜನ ಸಿಬ್ಬಂದಿಗಳು ದುಂಡಪ್ಪಾ ಸಿದ್ರಾಮಪ್ಪ ಜಮಾದಾರ ಅವರನ್ನು ಯಾವುದೇ ಕಾರಣವಿಲ್ಲದೆ ಅಪಹರಿಸಿ ಪೊಲೀಸ್ ಠಾಣೆಗೆ ಕರೆ ತಂದು ಮನಸ್ಸಿಗೆ ಬಂದಂತೆ ಹಲ್ಲೆ ಮಾಡಿದ್ದಾರೆ.

Contact Your\'s Advertisement; 9902492681

ರಕ್ಷಕರೇ ಭಕ್ಷಕರಾಗಿ ಕಾನೂನು ಕೈಗೆತ್ತಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂದಿರುವುದು ಅನಾಗರಿಕ ಕೃತ್ಯವಾಗಿದೆ ಇದನ್ನು ಕೋಲಿ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಮಾದಾರ ಅವರ ಮೇಲೆ ಆಗಿರುವ ಮಾರಣಾಂತಿಕ ಹಲ್ಲೆ ಪ್ರಕರಣ ಪೊಲೀಸ್ ಇಲಾಖೆ ಲಘುವಾಗಿ ಪರಿಗಣಿಸದೆ ಕೂಡಲೇ ಕೊಲೆಗೆ ಯತ್ನ ಕೇಸ್ ದಾಖಲಿಸಿ ಪ್ರಕರಣ ಸಿಓಡಿಗೆ ಒಪ್ಪಿಸಬೇಕು ಎಂದರು.

ಜಮಾದಾರ ಅವರನ್ನು ಅಪಹರಿಸಿ ಹೊಡೆದು ಗಾಯಗೋಳಿಸಿರುವ ಸಿಪಿಐ ಮತ್ತು ಆರು ಜನ ಸಿಬ್ಬಂದಿಗಳನ್ನು ಕೂಡಲೇ ಬಂಧಿಸಬೇಕು.ರಕ್ತಗಾಯ ಆಗುವಂತೆ ಮತ್ತು ಗುಪ್ತಗಾಯ ಆಗುವಂತೆ ಹೊಡೆದ ಎಲ್ಲ ಅರೋಪಿಗಳನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಿ ಅವರ ವಿರುದ್ಧ ಕೊಲೆಗೆ ಯತ್ನದ ಕೇಸ್ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು.ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೋಲಿ ಸಮಾಜದ ಗೌರವ ಅಧ್ಯಕ್ಷ ಹಣಮಂತ ಸಂಕನೂರ್, ನಿಂಗಣ್ಣ ಹೇಲಗೇರಿ,ಶಿವಕುಮಾರ ಯಾಕಾಪುರ್,ದೇವಿಂದ್ರ ಅರಣಕಲ್,ಕರಣಪ್ಪ,ಗುರುನಾಥ ಪೊಸ್ತಾ,ಬಸಣ್ಣ ತಳವಾರ,ಕಿಶೋರ್,ಮಲ್ಲಣ್ಣ ದಂಡಗುಂಡ,ಲಕ್ಷ್ಮಿಕಾಂತ್ ಸಾಲಿ,ಶಾಮರಾಯ ದುಗನೂರ್,ಯಲ್ಲಪ್ಪಾ ಬೆಳೆಗೇರಿ,ದತ್ತು ಮೈನಾಳಕರ್,ರಾಜೇಶ್ ಹೋಲಿಕಟ್ಟಾ, ಭೀಮಣ್ಣ ಹೊತ್ತಿನಮಡಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here