ಸುರಪುರ: ನಾನು ಬೆಂಗಳೂರಲ್ಲಿದ್ದಾಗ ಬೇಸರು ಎನಿಸುತ್ತಿರುತ್ತದೆ ಆಗ ರಾಜು ಕುಂಬಾರ ಅವರು ಹಾಕುವ ಸುದ್ದಿಗಳನ್ನು ನೋಡಿದಾಗ ನಮ್ಮೂರಲ್ಲಿದ್ದೇನೆ ಎನ್ನುವಂತೆ ಭಾಸವಾಗುತ್ತದೆ.ಆಗ ನಾನು ಬೆಂಗಳೂರಲ್ಲಿದ್ದೇನೆ ಎನ್ನುವುದನ್ನು ಮರೆತು ನಮ್ಮೂರಲ್ಲಿರುವೆ ಅನಿಸಿ ಸಂತೋಷವಾಗುತ್ತದೆ.ಅದಕ್ಕೆ ಕಾರಣ ಪತ್ರಕರ್ತರು ಕೊಡುವ ನಮ್ಮೂರ ಸುದ್ದಿಗಳಾಗಿವೆ ಎಂದು ನಿವೃತ್ತ ಎಸ್ಪಿ ಚಂದ್ರಕಾಂತ ಭಂಡಾರೆ ಮಾತನಾಡಿದರು.
ಪತ್ರಕರ್ತ ಹಾಗು ಕರ್ನಾಟಕ ಪತ್ರಕರ್ತರ ಸಂಘ (ಕೆಜೆಯು) ಸುರಪುರ ತಾಲೂಕು ಅಧ್ಯಕ್ಷ ರಾಜು ಕುಂಬಾರ ಅವರಿಗೆ ಕರವೇ ವತಿಯಿಂದ ಕುವೆಂಪು ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ನಗರದ ಗರುಡಾದ್ರಿ ಕಲಾ ಮಂದಿರದ ಆವರಣದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ,ಹಿಂದಿಗಿಂತಲು ಈಗ ಮಾದ್ಯಮಗಳು ತುಂಬಾ ಚುರುಕಾಗಿ ಕೆಲಸ ಮಾಡುತ್ತವೆ.ಅಂದಿನ ಸುದ್ದಿಯನ್ನು ಅಂದೆ ಜನರು ನೋಡಲು ಸಿಗುತ್ತವೆ,ಅಲ್ಲದೆ ನಮ್ಮೂರ ಸುದ್ದಿಯನ್ನು ಜಗತ್ತಿನ ಯಾವ ಮೂಲೆಯಲ್ಲಿದ್ದು ನೋಡಬಹುದು,ಅದಕ್ಕೆ ಕಾರಣಿ ಭೂತರಾದ ಪತ್ರಕರ್ತರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಬುರ್ಗಿ ಯಾದಗಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿ,ರಾಜು ಕುಂಬಾರ ಒಬ್ಬ ಸೃಜನಶೀಲ ಪತ್ರಕರ್ತರಾಗಿ ನಮ್ಮ ನಡುವೆ ಇದ್ದಾರೆ,ಅವರ ಸೇವೆಯನ್ನು ಮನಗಂಡು ಇಂದು ಕುವೆಂಪು ಪ್ರಶಸ್ತಿ ಬಂದಿರುವುದು ಸಂತೋಷದ ಸಂಗತಿಯಾಗಿದೆ.ಇನ್ನೂ ಹೆಚ್ಚೆಚ್ಚು ಪ್ರಶಸ್ತಿಗಳು ಅವರಿಗೆ ಲಭಿಸಲಿ ಎಂದರು.
ಅಧ್ಯಕ್ಷತೆವಹಿಸಿದ್ದ ರಿಕ್ರಿಯೇಷನ್ ಕ್ಲಬ್‌ನ ಅಧ್ಯಕ್ಷರಾದ ರಾಜಾ ಮುಕುಂದ ನಾಯಕ ಅವರು ಮಾತನಾಡಿ,ಪ್ರಶಸ್ತಿಗಳು ವ್ಯಕ್ತಿಯ ಮಾಡುವ ಕಾರ್ಯಕ್ಕೆ ಸಿಗುವ ಗೌರವವಾದರೂ ಅವರು ಮತ್ತು ಕೆಲಸ ಮಾಡಲು ಜವಬ್ದಾರಿ ಹೆಚ್ಚಿಸಲಿವೆ ಎಂದರು.ಅಲ್ಲದೆ ಮುಂಬರುವ ದಿನಗಳಲ್ಲಿ ಗರುಡಾದ್ರಿ ಕಲಾ ಮಂದಿರದ ಆವರಣದಲ್ಲಿ ನಮ್ಮೆಲ್ಲರ ಸಾಂಸ್ಕೃತಿಕ ರಾಯಭಾರಿಯಂತಿದ್ದ ರಾಜಾ ಮದನಗೋಪಾಲ ನಾಯಕರ ಮೂರ್ತಿ ಅನಾವರಣಗೊಳಿಸಲಾಗುವುದು ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಪತ್ರಕರ್ತ ರಾಜು ಕುಂಬಾರ ಮಾತನಾಡಿ,ಕನ್ನಡಪರ ಸಂಘಟಕನಾಗಿ ಮತ್ತು ಕಳೆದ ೮ ವರ್ಷಗಳಿಂದ ಪತ್ರಿಕಾರಂಗದಲ್ಲಿನ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಕ್ಷಣಾ ವೇದಿಕೆ ಕುವೆಂಪು ಪ್ರಶಸ್ತಿ ನೀಡಿದೆ,ಆದರೆ ತಮ್ಮೆಲ್ಲ ಹಿರಿಯರ ಈ ಆಶೀರ್ವಾದ ರೂಪದ ಈ ಸನ್ಮಾನ ಪ್ರಶಸ್ತಿಗಿಂತಲೂ ದೊಡ್ಡದಾಗಿದೆ.ಮುಂಬರುವ ದಿನಗಳಲ್ಲಿ ಮತ್ತಷ್ಟು ಕೆಲಸ ಮಾಡಲು ತಮ್ಮೆಲ್ಲರ ಸಹಕಾರದೊಂದಿಗೆ ದುಡಿಯುವುದಾಗಿ ತಿಳಿಸಿದರು.
ಇದೇ ರಿಕ್ರಿಯೇಷನ್ ಕ್ಲಬ್ ವತಿಯಿಂದ ರಾಜಾ ಮುಕುಂದ ನಾಯಕ,ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್,ನಿವೃತ್ತ ಎಸ್ಪಿ ಸಿ.ಎನ್.ಭಂಡಾರೆ ಹಾಗು ಕಸಾಪ ವತಿಯಿಂದ ಸನ್ಮಾನಿಸಿ ಗೌರವಿಸಿದರು.ಎಪಿಎಫ್ ಸಂಪನ್ಮೂಲ ವ್ಯಕ್ತಿ ಅನ್ವರ ಜಮಾದಾರ ಮಾತನಾಡಿದರು.ಶ್ರೀಹರಿರಾವ್ ಆದವಾನಿ ಸ್ವಾಗತ ಗೀತೆ ಹಾಡಿದರು,ಕಸಾಪ ಮಾಜಿ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ನಿರೂಪಿಸಿದರು,ಸಾಹಿತಿ ಹೆಚ್.ರಾಠೋಡ ವಂದಿಸಿದರು.ಕಾರ್ಯಕ್ರಮದಲ್ಲಿ ಸಾಹಿತಿ ನಬಿಲಾಲ ಮಕಾಂದಾರ,ಕಿಶೋರ ಚಂದ್ ಜೈನ್,ಯಲ್ಲಪ್ಪ ಕಾಡ್ಲೂರ,ಮಂಜುನಾಥ ಗುಳಗಿ,ರಾಘವೇಂದ್ರ ಭಕ್ರಿ,ಪತ್ರಕರ್ತ ಶ್ರೀಮಂತ ಚಲುವಾದಿ ಸೇರಿದಂತೆ ಅನೇಕರಿದ್ದರು.