ಸುರಪುರ:ನೆಹರೂ ಯುವ ಕೇಂದ್ರ ಕಲಬುರ್ಗಿ, ಸಗರನಾಡು ಯುವಕ ಸಂಘ ಕನ್ನೆಳ್ಳಿ ಸಹಯೋಗದೊಂದಿಗೆ ರಂಗಂಪೇಟೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಇಂದು ಆಯೋಜಿಸಿದ್ದ ನೆಹರು ಯುವ ಕೇಂದ್ರದ ಸಂಸ್ಥಾಪನ ದಿನ ಹಾಗೂ ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಕಾಶ ಅಂಗಡಿ ಕನ್ನಳ್ಳಿ ,ಮಕ್ಕಳು ರಾಷ್ಟ್ರದ ಸಾಂಸ್ಕೃತಿಕ ಮತ್ತು ನೈಜ ಸಂಪತ್ತಾಗಿದ್ದು ,ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದರು ,ಇಂದಿನ ಮಕ್ಕಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಮಾಡುತ್ತಿದ್ದು ,ಸತತ ಪರಿಶ್ರಮ ನಿರಂತರ ಅಧ್ಯಯನ ಹಾಗೂ ಶ್ರದ್ಧಾ ಶಕ್ತಿಯಿಂದ ಎಲ್ಲವೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಸವೇಶ್ವರ ಕಾಲೇಜಿನ ಪ್ರಾಚಾರ್ಯ ವೀರೇಶ್ ಹಳೆಮನೆ ಕಾರ್ಯಕ್ರಮ ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಶಾಂತು ನಾಯಕ, ಬಲಭೀಮ ಪಾಟೀಲ, ಭಾರತಿ ಪೂಜಾರಿ, ರಮೇಶ್ ನಾಯಕ್ ಗುರುಗುಂಟಿ ವೇದಿಕೆ ಮೇಲಿದ್ದರು, ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಣೆ ಮಾಡಲಾಯಿತು, ಸಲೀಂ ಅಡ್ಡೂಡಗಿ ನಿರೂಪಿಸಿದರು,ಅಂಬಿಕಾ ಪ್ರಾರ್ಥಿಸಿದರು ,ಕೃಷ್ಣ ದೇವತ್ಕಲ್ ಸ್ವಾಗತಿಸಿದರು, ಗುರುಸ್ವಾಮಿ ವಂದಿಸಿದರು.