ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ

0
35

ಬೆಂಗಳೂರು: ಬ್ರಾಹ್ಮಣ ಸಮುದಾಯದ ಸಂಘಟನೆ ಮತ್ತು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಆದ್ಯತೆ ಹಾಗೂ ಉದ್ಯೋಗದಲ್ಲಿ ಬ್ರಾಹ್ಮಣರಿಗೆ ಅವಕಾಶ ಕಲ್ಪಿಸುವಲ್ಲಿ ಹೋರಾಟ-ಆರ್.ಲಕ್ಷ್ಮೀಕಾಂತ್ ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಕಛೇರಿ ,ಗಾಯಿತ್ರಿ ಭವನ ಬೆಂಗಳೂರು ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಆರ್.ಲಕ್ಷ್ಮೀಕಾಂತ್ ರವರು ಇಂದು ನಾಮಪತ್ರ ಸಲ್ಲಿಸಿದರು.

Contact Your\'s Advertisement; 9902492681

ವಿಧಾನಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್ ರವರು ,ಹಿರಿಯ ಸಾಹಿತಿ ,ಚಿಂತಕರಾದ ಪಾವಗಡ ಪ್ರಕಾಶ್ ರಾವ್ ,ಬ್ರಾಹ್ಮಣ ಸಮುದಾಯದ ಹಿರಿಯ ಮುಖಂಡರುಗಳಾದ ವಿಶ್ವನಾಥ ದೀಕ್ಷೀತ್ ,ಭಗವಾನ್ , ಹರಿಹರಪ್ರಿಯ ಹೆಚ್.ಸಿ.ಕೃಷ್ಣ, ಕೆ ಚಂದ್ರಶೇಕರ್, ಬಿ.ಎಸ್.ಸತ್ಯನಾರಾಯಣ್ ,ರಾಜಶೇಖರ್ , ಮಾಲಿನಿ,ಶಿವಶಂಕರ್ , ರಾಮ್ ಪ್ರಸಾದ್ ಪತ್ರಕರ್ತರಾದ ಜೆ.ಹೆಚ್.ಆನಿಲ್ ಕುಮಾರ್ ,ಕೈವಾರ ಕೃಷ್ಣಮೂರ್ತಿ ,ಅಖಿಲಾ ಕರ್ನಾಟಕ ಮಾಧ್ವ ಮಹಾಸಭಾದ ಸಂಸ್ಥಾಪಕರಾದ ರಾಮಚಂದ್ರ ,ಉಪಾಧ್ಯಕ್ಷರಾದ ಅಶ್ವಥ್ ನಾರಾಯಣ್ ರವರು ರಾಜ್ಯದ ವಿವಿಧ ಜಿಲ್ಲೆಯ ಬ್ರಾಹ್ಮಣ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ಲಕ್ಷ್ಮೀಕಾಂತ್ ರವರು ಮಾತನಾಡಿ ಬ್ರಾಹ್ಮಣ ಸಂಘದಲ್ಲಿ 30 ವರ್ಷಗಳಿಂದ ಸಮುದಾಯ ಸಂಘಟನೆಯಲ್ಲಿ ದುಡಿಯುತ್ತಾ ಬಂದಿದ್ದೇನೆ .ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ ಸಂಘಟನೆ ಮತ್ತು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಆದ್ಯತೆ ನೀಡುವಲ್ಲಿ ಮತ್ತು ಉದ್ಯೋಗದಲ್ಲಿ ಬ್ರಾಹ್ಮಣರಿಗೆ ಅವಕಾಶ ಕಲ್ಪಿಸುವಲ್ಲಿ ಹೋರಾಟ ನನ್ನ ಗುರಿ ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಶಿಕ್ಷಣ ,ಆರೋಗ್ಯ ಮತ್ತು ಉದ್ಯೋಗ ,ಸಂಘಟನೆ ಗಮನಹರಿಸಲಾಗುವುದು .
ಬ್ರಾಹ್ಮಣ ಸಮುದಾಯದ ತ್ರಿಮತಸ್ಥರು ಎಲ್ಲರು ಒಂದೇ .ಎಲ್ಲರು ಒಗ್ಗಾಟಗಿ ಶ್ರಮಿಸಿದರೆ ಬ್ರಾಹ್ಮಣರ ಅಭಿವೃದ್ದಿ ಸಾಧ್ಯ ಎಂದರು.

ವಿಧಾನಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್ ರವರು ಮಾತನಾಡಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಲಕ್ಷ್ಮೀಕಾಂತ್ ರವರು ಕಳೆದ 30ವರ್ಷಗಳಿಂದ ಬ್ರಾಹ್ಮಣ ಸಮುದಾಯದ ಸಂಘಟನೆಯಲ್ಲಿ ಅವಿರತ ಶ್ರಮವಹಿಸಿದ್ದಾರೆ. ಬ್ರಾಹ್ಮಣ ಸಮುದಾಯವನ್ನು ಆರ್ಥಿಕವಾಗಿ ,ಸಾಮಾಜಿಕವಾಗಿ ಬಲಿಷ್ಠ ಮಾಡುವಲ್ಲಿ ಎಲ್ಲರು ಶ್ರಮಿಸಬೇಕು ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here