ಶ್ರೀಪ್ರಭು ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ

0
25

ಸುರಪುರ: ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ನಗರದಲ್ಲಿನ ಶ್ರೀ ಪ್ರಭು ಕಲಾ, ವಿಜ್ಞಾನ ಮತ್ತು ಜೆ.ಎಮ್. ಬೊಹ್ರಾ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ನಿರ್ಮಾಣ ಫೌಂಡೆಶನ್ ಯಾದಗಿರಿ ವತಿಯಿಂದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನ ಹಾಗು ವ್ಯಕ್ತಿತ್ವ ವಿಕಸನ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಕಾರ್ಯಾಗಾರದಲ್ಲಿದ್ದ ನಿರ್ಮಾಣ ಫೌಂಡೆಶನ್ ಯಾದಗಿರಿಯ ಸಂಪನ್ಮೂಲ ವ್ಯಕ್ತಿಗಳಾದ ಚೇತನ ಅವರು ಪ್ರಾತ್ಯಕ್ಷತೆಯ ಮೂಲಕ ವಿದ್ಯಾರ್ಥಿ ವೇತನಗಳು, ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗಾಗಿ ಇರುವ ಔದ್ಯೋಗಿಕ ಅವಕಾಶಗಳ ಮತ್ತು ಕೌಶ್ಯಲಗಳ ಹೊಂದುವಿಕೆಯ ವಿಧಾನಗಳ ಕುರಿತು ಸವಿಸ್ತಾರವಾಗಿ ತಿಳಿಸಿದರು.

Contact Your\'s Advertisement; 9902492681

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜು ವ್ಯಕ್ತಿತ್ವ ವಿಕಸನ ಹಾಗೂ ಕೌಶಾಸಲ್ಯಾಭಿವೃದ್ದಿ ಕೋಶದ ಸಂಚಾಲಕರಾದ ಡಾ. ಸಾಯಬಣ್ಣ ಮುಡಬೂಳ ಅವರು, ಇಂದಿನ ಸ್ಪರ್ದಾತ್ಮ,ಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯವು ಅತಿ ಅವಶ್ಯಕವಾಗಿ ಬೇಕಾಗಿದೆ. ಮುಂದೆ ವಿದ್ಯಾರ್ಥಿಗಳ ಭಾವಿ ಭವಿಷ್ಯಕ್ಕೆ ಕೌಶಲ್ಯಗಳು ನೇರವಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಕಲಿಯುವ ಹಂತದಿಂದಲೇ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಂಡು ತಮ್ಮ ಜೀವನ ರೂಪಿಸಿಕೊಳ್ಳಬೇಕಾದ ಅಗತ್ಯತೆಯಿದೆ. ಈ ದಿಶೆಯಲ್ಲಿ ಇಂದಿನ ಕಾರ್ಯಾಗಾರವು ಅತೀ ಉಪಯುಕ್ತವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಾಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಎಚ್.ಹೊಸಮನಿ ಇವರು ಮಾತನಾಡಿ, ನಿರ್ಮಾಣ ಫೌಂಡೆಶನ, ಯಾದಗಿರಿಯು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಈ ರೀತಿ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ವ್ಯವಹಾರ ಕೌಶಲ್ಯ ಮತ್ತು ಸಾಮರ್ಥ್ಯ ಅಭಿವೃದ್ಧಿಹೊಂದುತ್ತದೆ. ಕೌಶಲ್ಯಾಧಾರಿತ ಕಾರ್ಯಕ್ರಮಗಳು ಮಹಾವಿದ್ಯಾಲಯಗಳಲ್ಲಿ ಏರ್ಪಡಿಸಬೇಕಾದ ತುರ್ತಿದೆ.

ವಿದ್ಯಾರ್ಥಿಗಳಲ್ಲಿ ಸಾಕಷ್ಟು ವಿಷಯದ ಜ್ಞಾನವಿದ್ದರೂ ಅದಕ್ಕೆ ಪೂರಕವಾದ ಕೌಶಲ್ಯಗಳ ಜ್ಞಾನ ವಿರಳವಾಗಿರುವುದು ಕಂಡುಬರುತ್ತದೆ. ಹಾಗಾಗಿ ಇಂದಿನ ವಿದ್ಯಾರ್ಥಿ ಸಮೂಹ ಔದ್ಯೋಗಿಕ ಸಂಸ್ಥೆಗಳು ಆಪೇಕ್ಷಿಸುವ ಈ ರೀತಿಯಾದ ಕೌಶ್ಯಲ್ಯ ಜ್ಞಾನ ಹೊಂದುವುದು ಅವಶ್ಯವಾಗಿದೆ. ಈ ಹಿನ್ನಲೆಯಲ್ಲಿ ಇಂದಿನ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೋ.ಎಮ್.ಡಿ.ವಾರಿಸ್ ಹಾಗು ರಸಾಯನಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕರು ಹಾಗೂ ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ವೈಜಿನಾಥ ಎ. ವರ್ಮಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಪಟೇಲ ನಾಗರಾಜಗೌಡ, ಪ್ರೊ. ಎಲ್.ಬಿ. ಕುಲ್ಕರ್ಣಿ, ಡಾ. ಎಸ್.ಎಮ್. ಹುನಗುಂದ, ಡಾ. ಬಾಲರಾಜ ಸರಾಫ್, ಎಸ್.ಎಮ್.ಸಜ್ಜನ, ಡಾ. ಶರಣಗೌಡ ಪಾಟೀಲ್, ಹಣಮಂತ ಸಿಂಗೆ, ಡಾ. ಶಿವಲೀಲಾ, ಡಾ. ನಮೃತಾ, ಶಶಿಕುಮಾರ ಉಪಸ್ಥತರಿದ್ದರು ಕಾರ್ಯಕ್ರಮವನ್ನು ನಿಂಗಯ್ಯ ನಿರ್ವಹಿಸಿದರೆ, ಡಾ. ರಮೇಶ ಶಹಾಪುರಕರ ಸ್ವಾಗತಿಸಿದರು ಹಾಗೂ ಗುರುರಾಜ ಕುಲ್ಕರ್ಣಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here