ಅರಕೇರಾ ಜೆ ಕೋವಿಡ್ ಲಸಿಕೆ ಅಭಿಯಾನದಲ್ಲಿ ಜಿ.ಪಂ ಸಿಇಒ ಭಾಗಿ

0
12

ಸುರಪುರ: ತಾಲೂಕಿನ ಅರಕೇರಾ ಜೆ ಗ್ರಾಮ ಪಂಚಾಯತಿಯ ಲಕ್ಷ್ಮೀಪುರ ಗ್ರಾಮದಲ್ಲಿ ನಡೆದ ಕೊರೊನಾ ಲಸಿಕೆ ವಿತರಣೆ ಅಭಿಯಾನದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಭಾಗವಹಹಿಸಿದರು.

ಗ್ರಾಮದಲ್ಲಿ ಸಂಚರಿಸಿದ ಅವರು ಲಸಿಕೆ ತೆಗೆದುಕೊಳ್ಳಲು ಅಸಡ್ಡೆ ತೋರುತ್ತಿರುವವರ ಮನವೊಲಿಸಿ ಲಸಿಕೆಯನ್ನು ಹಾಕಿಸಿದರು. ಕಳೆದ ಕೆಲ ದಿನಗಳಿಂದ ಮಹಿಳೆಯೊಬ್ಬರು ಲಸಿಕೆ ಹಾಕಿಸಿಕೊಳ್ಳದೆ ಅನೇಕ ಬಾರಿ ತಪ್ಪಿಸಿಕೊಂಡಿದ್ದರು ಬುಧವಾರವು ಮಹಿಳೆ ಊಟ ಮಾಡುವ ನೆಪವನ್ನು ಹೇಳಿದಾಗ ಶಿಲ್ಪಾ ಶರ್ಮಾ ಅವರು ಪಟ್ಟು ಬಿಡದೆ ಮಹಿಳೆಗೆ ಊಟ ಮಾಡುವವರೆಗೂ ಕಾಯುವುದಾಗಿ ತಿಳಿಸಿ ನಿಂತರು,ನಂತರ ಮಹಿಳೆ ಲಸಿಕೆಯನ್ನು ಪಡೆದುಕೊಂಡ ಪ್ರಸಂಗವು ಜರುಗಿದೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ ಮೂಡಲದಿನ್ನಿ,ಅಭಿಯಾನದ ಜಿಲ್ಲಾ ನೋಡಲ್ ಅಧಿಕಾರಿ,ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿ ದುರ್ಗಾ ಹೆಚ್ ಹಾಗು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ಸ್ಥಳಿಯ ಗ್ರಾಮ ಪಂಚಾಯತಿ ಸಿಬ್ಬಂದಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here