ಪರಿಷತ್ ಕಣದಲ್ಲಿ ಕಾಂಗ್ರೆಸ್ ಪರ ಅಲೆ- ಮತದಾರರ ಮನದಲ್ಲಿ ಕಾಂಗ್ರೆಸ್ ಪಕ್ಷವೇ ಗೆದ್ದಿದೆ: ಕೆಪಿಸಿಸಿ ಸದಸ್ಯ ಹಣಮಂತ ಭೂಸನೂರ್

0
29

ಕಲಬುರಗಿ: ಕಲಬುರಗಿ- ಯಾದಗಿರಿ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆದಂತಹ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಸ್ಪಷ್ಟವಾಗಿ ಕಂಡಿದೆ ಎಂಬುದಕ್ಕೆ ಕೈ ಅಭ್ಯರ್ಥಿ ಶಿವಾನಂದ ಪಾಟೀಲರು ಗಳಿಸಿದ ಮತಗಳೇ ಸಾಕ್ಷಿ, ಚಲಾವಣೆಯಾದ ಮತಗಳಲ್ಲಿ 299 ತಿರಸ್ಕøತಗೊಂಡಿವೆ. ಹೀಗೆ ತಿರಸ್ಕøತಗೊಂಡಿರುವ ಮಗಳಲ್ಲಿ ಹೆಚ್ಚು ಕಮ್ಮಿ 200 ರಷ್ಟು ಮತಗಳು ಕೈ ಅಭ್ಯರ್ಥಿಯನ್ನೇ ಬೆಂಬಲಿಸಿದ್ದವು. ಇವೆಲ್ಲ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಕಣದಲ್ಲಿ ಕೈ ಪರವಾಗಿ ಮತದಾರರ ಒಲವು ಹೆಚ್ಚಾಗಿತ್ತು ಎಂಬುದು ಸ್ಪಷ್ಟವಾಗಿದೆ ಎಂದು ಕೆಪಿಸಿಸಿ ಸದಸ್ಯ ಹಣಮಂತ ಭೂಸನೂರ್ ಹೇಳಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿಜೆಪಿ ಅಭ್ಯರ್ಥಿ ಪುನರಾಯ್ಕಯಾದರೂ ಸಹ ಕೈ ಪರ ಕಂಡಿರುವ ಒಲವಿನಿಂದ ಕಾಂಗ್ರೆಸ್ ಈ ಕಣದಲ್ಲಿ ಸಂಖ್ಯಾಬಲದಲ್ಲಿ ಸೋತಿರಬಹುದಾದರೂ ಮತದಾರರ ಮನದಲ್ಲಿ ಗೆದ್ದಿದೆ ಎಂದಿದ್ದಾರೆ.

Contact Your\'s Advertisement; 9902492681

ಮುಂಬರುವ ದಿನಗಳಲ್ಲಿ ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಮತದಾರರ ಒಲವು ಕಾಂಗ್ರೆಸ್ ಪರವಾಗಿ ಇದೇ ರೀತಿ ಹೆಚ್ಚಲಿದೆ. ಇದಕ್ಕೆಲ್ಲ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದಂತಹ ಡಾ. ಮಲ್ಲಿಕಾರ್ಜುನ ಖರ್ಗೆಯವರ ಪ್ರಭಾವ, ಬಿರುಸಿನ ಪ್ರಚಾರ, ಜಿಲ್ಲೆಯ ಹಾಗೂ ರಾಜ್ಯದ ಹಿರಿಯ ನಾಯಕರು, ಹಾಲಿ- ಮಾಜಿ ಶಾಸಕರು, ಮಂತ್ರಿಗಳು ನಡೆಸಿದಂತಹ ಅಬ್ಬರದ ಪ್ರಾಚಾರ, ಪಕ್ಷ ಪಂಚಾಯ್ತಿ ಪ್ರಗತಿಗೆ ನೀಡಿರುವ ಕೊಡುಗೆಗಳೇ ಕಾರಣ. ಹೀಗಾಗಿ ಕಾಂಗ್ರೆಸ್ ಪರ ಮತದಾರರ, ಜನರ ಈ ಒಲವು ಇನ್ನೂ ಹೆಚ್ಚುವಲ್ಲಿ ಸಂದೇಹವಿಲ್ಲ ಎಂದು ಹಣಮಂತರಾವ ಭೂಸನೂರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here