ಜನವರಿ ೨೬ ರಿಂದ ಜಿಲ್ಲೆಗಳಲ್ಲಿ ಜನಸೇವಕೆ ಸೇವೆ ಜಾರಿ: ಬಸವರಾಜ ಬೊಮ್ಮಾಯಿ

0
6

ಕಲಬುರಗಿ: ಜನರ ಸುತ್ತಲು ಅಭಿವೃದ್ಧಿಯಾಗಬೇಕೆ ಹೊರತು ಅಭಿವೃದ್ಧಿ ಸುತ್ತ ಜನರಿರಬಾರದು ಎಂಬ ಅಭಿಲಾ?ಯಿಂದ ಪ್ರತಿಯೊಬ್ಬರ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವ “ಜನಸೇವಕ” ಸೇವೆ ಬರುವ ಜನವರಿ ೨೬ ರಿಂದ ಜಿಲ್ಲೆಗಳಲ್ಲಿ ಜಾರಿಗೆ ತರಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಮಂಗಳವಾರ ಆಳಂದ ಪಟ್ಟಣದ ಆರ್.ಟಿ.ಓ. ಕ್ರಾಸ್ ಬಳಿ ೧೨.೩೮ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ತಾಲೂಕು ಆಡಳಿತ ಭವನ ಸೇರಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಆಳಂದ ಮೋರಾರ್ಜಿ ದೇಸಾಯಿ ವಸತಿ ನಿಲಯದ ಉದ್ಘಾಟನೆ ಹಾಗೂ ಪಟ್ಟಣದ ಕೊಳಚೆ ಪ್ರದೇಶದಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ೧೩೧೪ ಮನೆಗಳ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಆಡಳಿತ ವಿಕೇಂದ್ರಿಕರಣಕ್ಕೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಜನರ ಕೈಯಲ್ಲಿಯೆ ಆಡಳಿತ ಇರಬೇಕು ಎಂಬುದು ನಮ್ಮ ಆಸೆ. ಇಂದಿಲ್ಲಿ ಉದ್ಘಾಟನೆಗೊಂಡ ಆಡಳಿತ ಸೌಧ ತಾಲೂಕಿಗೆ ವಿಧಾನಸೌಧವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ಕೂಡಲೆ ರೈತ ವಿದ್ಯಾನಿಧಿ ಸ್ಥಾಪಿಸಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಜಾರಿಗೆ ತಂದಿದ್ದೇನೆ. ಕೃಷಿ ಬೆಳೆದಿರಹುದು, ರೈತನ ಬದುಕು ಇನ್ನು ಬೆಳಗಿಲ್ಲ. ಮೊದಲಿಗಿಂತ ಹಿಡುವಳಿ ಕಡಿಮೆಯಾಗಿ ಅನ್ನದಾತ ಸಂಕ?ದಲ್ಲಿದ್ದಾನೆ. ಇದಕ್ಕಾಗಿ ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ, ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ರೈತ ಕಲ್ಯಾಣ ಕಾರ್ಯಕ್ರಮಗಳು ಹಮ್ಮಿಕೊಂಡಿದೆ. ನಮ್ಮದು ರೈತಪರ ಸರ್ಕಾರ ಎಂದರು.

ನೆರೆ ಹಾವಳಿಯಲ್ಲಿ ಹಾಳಾದ ಬೆಳೆಗಳಿಗೆ ಒಣ ಬೇಸಾಯದ ಪ್ರತಿ ಹೆಕ್ಟೇರ್‌ಗೆ ಕೇಂದ್ರ ಸರ್ಕಾರದ ೬೮೦೦ ರೂ. ಜೊತೆಗೆ ರಾಜ್ಯ ಸರ್ಕಾರದ ೬೮೦೦ ರೂ., ನೀರಾವರಿ ಪ್ರದೇಶದ ಪ್ರತಿ ಹೆಕ್ಟೇರ್‌ಗೆ ಕೇಂದ್ರ ಸರ್ಕಾರದ ೧೩೫೦೦ ರೂ. ಜೊತೆಗೆ ರಾಜ್ಯ ಸರ್ಕಾರದ ೧೧೫೦೦ ರೂ. ಹಾಗೂ ತೋಟಗಾರಿಕೆ ಬೆಳೆಗಳ ಪ್ರತಿ ಹೆಕ್ಟೇರ್‌ಗೆ ಕೇಂದ್ರ ಸರ್ಕಾರದ ೧೮೦೦೦ ರೂ. ಜೊತೆಗೆ ರಾಜ್ಯ ಸರ್ಕಾರದ ೧೦೦೦೦ ರೂ. ಸೇರಿಸಿ ಪರಿಹಾರ ನೀಡುವ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದು, ಯಾವ ರಾಜ್ಯದಲ್ಲಿಯೂ ಇಷ್ಟೊಂದು ಪರಿಹಾರ ನೀಡುತ್ತಿಲ್ಲ ಎಂದರು.

ವ್ಯಕ್ತಿಗತ ತಲಾ ಆದಾಯದಲ್ಲಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ. ಆರ್ಥಿಕ ಬೆಳವಣಿಗೆ ತಳ ಹಂತದಲ್ಲಿ ದುಡಿಯುವ ಕೂಲಿ ಕಾರ್ಮಿಕರಿಂದಲೇ ಹೊರೆತು ಉದ್ಯಮಿಗಳಿಂದಲ್ಲ. ತಲಾ ಆದಾಯ ವೃದ್ಧಿಯಲ್ಲಿ ರಾಜ್ಯದ ಶೇ.೩೦ ರ? ಜನ ಮಾತ್ರ ಪಾಲ್ಗೊಳ್ಳತ್ತಿದ್ದು, ಉಳಿದ ೭೦ರ? ಜನ ವಿಮುಖರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇ?ವಾಗಿ ಎಸ್.ಸಿ, ಎಸ್.ಟಿ, ಹಿಂದುಳಿದ ಹಾಗೂ ಹೆಣ್ಣು ಮಕ್ಕಳ ತಲಾ ಆದಾಯ ಹೆಚ್ಚಳಕ್ಕಾಗಿ ರಾಜ್ಯದ ೭೫೦೦ ಸ್ತ್ರೀ ಶಕ್ತಿ ಗುಂಪುಗಳಿಗೆ ತಲಾ ೧ ಲಕ್ಷ ರೂ. ಸಹಾಯಧನ ನೀಡಲು ತೀರ್ಮಾನಿಸಲಾಗಿದೆ ಎಂದರು ಬಸವರಾಜ ಬೊಮ್ಮಾಯಿ ತಿಳಿಸಿದರು.

೫ ಲಕ್ಷ ಮನೆ ನಿರ್ಮಾಣ: ಸೂರಿಲ್ಲದವರಿಗೆ ಸೂರು ಕಲ್ಪಿಸಲು ರಾಜ್ಯದ ಗ್ರಾಮೀಣ ಭಾಗದಲ್ಲಿ ೫ ಲಕ್ಷ ಮನೆ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ನೀಡಿದ್ದು, ಪ್ರಸ್ತುತ ಸರ್ಕಾರದ ಅವಧಿಯಲ್ಲಿಯೇ ಈ ಮನೆಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here