ವೀಕೆಂಡ್ ಕರ್ಫ್ಯೂ: ಹೋಟೆಲ್‌ಗಳ ತಪಾಸಣೆ ಮಾಡಿದ ಡಿವೈಎಸ್ಪಿ ಡಾ:ದೇವರಾಜ

0
24

ಸುರಪುರ: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟಿಗಳು ಮುಚ್ಚಿದ್ದರೆ ಅಗತ್ಯ ಸೇವೆಗಳ ಕಿರಾಣಿ ಅಂಗಡಿ,ಹೋಟೆಲ್‌ಗಳು ಕೇವಲ ಪಾರ್ಸಲ್ ನೀಡುವುದು ಮತ್ತು ಹಣ್ಣು ಹಾಲು ತರಕಾರಿ ಮೆಡಿಕಲ್ ಓಪನಾಗಿದ್ದವು.

ಅದರಂತೆ ಹೋಟೆಲ್‌ಗಳಲ್ಲಿ ಕೇವಲ ಪಾರ್ಸಲ್ ನೀಡುವುದನ್ನು ತಪಾಸಣೆ ನಡೆಸಲು ಸುರಪುರ ಪೊಲೀಸ್ ಉಪ ವಿಭಾಗದ ಉಪಾಧೀಕ್ಷಕರಾದ ಡಾ: ದೇವರಾಜ ಬಿ ಅವರು ನಗರದ ಕೆಲ ಕಡೆಗಳಲ್ಲಿನ ಹೋಟೆಲ್‌ಗಳಲ್ಲಿ ತಪಾಸಣೆ ನಡೆಸಿದರು.ಬಸ್‌ಗಳಲ್ಲಿಯೂ ತಪಾಸಣೆ ನಡೆಸಿ ಮಾಸ್ಕ್ ಧರಿಸಿರುವುದನ್ನು ಮತ್ತು ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಿದರು.

Contact Your\'s Advertisement; 9902492681

ನಂತರ ಬಸ್ ನಿಲ್ದಾಣದ ಬಳಿಯಲ್ಲಿ ಉಡುಪಿ ಹೋಟೆಲ್ ಹಾಗು ರಸ್ತೆ ಬದಿಯಲ್ಲಿನ ಕೆಲ ಹೋಟೆಲ್‌ಗಳಿಗೆ ತೆರಳಿ ಪಾರ್ಸಲ್ ನೀಡುವುದನ್ನು ಪರೀಕ್ಷಿಸಿದರು.ಅಲ್ಲದೆ ಯಾವುದೇ ಕಾರಣಕ್ಕೂ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಕಡ್ಡಾಯವಾಗಿ ಆದೇಶಗಳನ್ನು ಪಾಲಿಸುವಂತೆ ಸೂಚನೆ ನೀಡಿದರು.ಅಲ್ಲದೆ ಕಡ್ಡಾಯವಾಗಿ ಜಿಲ್ಲಾಡಳಿತ ಹೊರಡಿಸಿರುವ ನಿಯಮಗಳನ್ನು ಪಾಲಿಸಬೇಕು.ಮಾಸ್ಕ್ ಧರಿಸುವುದು,ಸಾಮಾಜಿಕ ಅಂತರ ಕಾಪಾಡುವುದು ಹಾಗು ಹೋಟೆಲ್ ಸ್ಯಾನಿಟೈಜನರ್ ಮಾಡಿಸುವುದು ಮತ್ತು ಸಮಯ ಅವಧಿ ಮೀರಿ ಓಪನ್ ಮಾಡುವುದನ್ನು ಮಾಡಬೇಡಿ ಎಂದು ತಿಳಿಸಿದರು.

ಅಲ್ಲದೆ ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಕೋವಿಡ್ ಲಸಿಕೆ ಪಡೆದುಕೊಂಡಿದ್ದರ ಕುರಿತು ಮಾಹಿತಿ ಪಡೆದುಕೊಂಡರು.ಅಲ್ಲದೆ ಹೊಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕೋವಿಡ್ ಲಸಿಕೆ ಪಡೆದುಕೊಳ್ಳದೆ ಕೆಲಸ ಮಾಡುತ್ತಿರುವುದನ್ನು ತಿಳಿದಿ ಡಿವೈಎಸ್ಪಿ ಡಾ: ದೇವರಾಜ ಅವರು ಆ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಕೇಸ್ ದಾಖಲಿಸ್ ದಾಖಲಿಸಿದ್ದಾರೆ.

ಲಸಿಕೆ ಪಡೆಯದಿದ್ದ ವ್ಯಕ್ತಿಯನ್ನು ಠಾಣೆಗೆ ಕರೆದೊಯ್ದು ಸೆಕ್ಸನ್ ೨೬೯ ಐಪಿಸಿ ಹಾಗು ೧೮೮ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ನೋಟಿಸ್ ನೀಡಿದ್ದಾರೆ.ಈ ಸಂದರ್ಭದಲ್ಲಿ ಸುರಪುರ ಠಾಣೆ ಪೊಲೀಸ್ ಇನ್ಸ್ಪೇಕ್ಟರ್ ಸುನೀಲಕುಮಾರ ಮೂಲಿಮನಿ,ಶಹಾಪುರ ಠಾಣೆ ಸಿಪಿಐ ಚನ್ನಯ್ಯ ಹಿರೇಮಠ,ಪಿಎಸ್‌ಐ ಕೃಷ್ಣಾ ಸುಬೇದಾರ್,ಎಎಸ್‌ಐ ರಾಹುಲ್ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here