ಜುಜುಬಿ ವೋಟಿಗಾಗಿ ಶಾಂತಿ ಸೌಹರ್ದತೆಗೆ ಧಕ್ಕೆತರುವ ಅವಕಾಶ SDPIಯಲ್ಲಿ ಇಲ್ಲ: ಇಲಿಯಾಸ್

0
132

ಮಂಗಳೂರು: ದಶಕಗಳಿಂದ ಜುಜುಬಿ ವೋಟಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕೋಮುಸೌಹಾರ್ದತೆಗೆ ದಕ್ಕೆ ಯಾಗುವ ಕೆಲಸ ಮಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹರ್ದತೆ ಮತ್ತು ಅಭಿವೃದ್ದಿಗೆ ಆದ್ಯತೆಯಲ್ಲಿ ಎಸ್‌ಡಿಪಿಐ ಕೆಲಸ ಮಾಡಲಿದೆ ಎಂದು ಎಸ್‌ಡಿಪಿಐ ಪಕ್ಷದ ಲೋಕಸಭಾ ಅಭ್ಯರ್ಥಿ ಮಹಮ್ಮದ್ ಇಲಿಯಾಸ್ ಹೇಳಿದ್ದರು.

ಅವರು ಕೆ.ಸಿ ರೊಡ್ ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಹಿಂದೂ- ಮುಸ್ಲಿಂ-ಕ್ರೈಸ್ತ ಬಾಂಧವರು ಅಣ್ಣ ತಂಮ್ಮಂದಿರಂತೆ ಬಾಳಬೇಕು. ಎಸ್‌ಡಿಪಿಐ ಎಲ್ಲಾ ಧರ್ಮಗಳ ಅವಕಾಶ ವಂಚಿತ ಜನ ಸಮುದಾಯಗಳ ಸಬಲೀಕರಣಕ್ಕೆ 10 ವರ್ಷದಿಂದ ಕೆಲಸ ಮಾಡುತ್ತಿದೆ ಜುಜುಬಿ ವೋಟಿಗಾಗಿ ಸೌಹರ್ದತೆಗೆ ಧಕ್ಕೆ ಆಗಬಾರದೆಂದು ಹೇಳಿದ್ದರು.

Contact Your\'s Advertisement; 9902492681

ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಮಾತನಾಡಿ ಎಸ್‌ಡಿಪಿಐ ಜಿಲ್ಲೆಯಲ್ಲಿ ಹಲವಾರು ಹಿಂದೂ ಕುಟುಂಬಗಳಿಗೆ ಸಂಕಷ್ಟಕ್ಕೆ ನೆರವಾಗಿದೆ ಎಂದರು. ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸಮ್ ಮಾತನಾಡಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮುಸ್ಲಿಮರಿಗೆ ನೀಡಿದ ಭರವಸೆ ಈಡೇರಿಸಲಿಲ್ಲ. ಸಾಚಾರ್ ವರದಿ ಅನುಷ್ಟಾನ ವಾಗಿಲ್ಲ, ಕೋಮುಗಲಬೆ ನಿಯಂತ್ರಣ ಮಸೂದೆ ಜಾರಿ ಮಾಡಲಿಲ್ಲ, ಖಾಸಗಿ ವಲಯದಲ್ಲಿ ಅಹಿಂದಾ ವರ್ಗಗಳಿಗೆ ಮೀಸಲಾತಿ ತಂದಿಲ್ಲ ಎಂದರು.

ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಅಬ್ಬಾಸ್ ಕಿನ್ಯಾ, ರಶೀದ್ ಇಂಜಿನಿಯರ್, ಶಾಫಿ ಬಬ್ಬುಕಟ್ಟೆ, ಇಕ್ಬಾಲ್ ಐ.ಎಮ್.ಆರ್, ಹಕೀಮ್, ಮುಶರಫ್, ಇರ್ಶಾದ್ ಕೆ.ಸಿ ರೋಡ್, ಲತೀಫ್ ಕೋಡಿಜಾಲ್ ಮತ್ತಿತರು ಉಪಸ್ಥಿತರಿದ್ದರು
ಧನ್ಯವಾದಗಳು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here