ಪರಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀ ಮೂರನೇ ವರ್ಷದ ಪುಣ್ಯ ಸ್ಮರಣೆ

0
10

ಮಾಲೂರು: ನಮ್ಮ ಭಾರತ ದೇಶವು ಪವಿತ್ರನಾಡು ಅಲ್ಲದೆ ತತ್ವಾದರ್ಶಗಳ ನೆಲೆವೀದಾಗಿದೆ. ಈ ಪುಣ್ಯ ಭೂಮಿಯಲ್ಲಿ ಹುಟ್ಟಿದ ಋಷಿಗಳು, ಮಹರ್ಷಿಗಳು, ತತ್ವಜ್ಞಾನಿಗಳು, ಶರಣರು, ದಾಸರು, ಸಾಧು ಸಂತರು, ಸತ್ಪುರುಷರು ಮತ್ತು ಮಠಾಧಿಪತಿಗಳು ಸಮಾಜವನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ ಕೊಂಡೊಯ್ದಿದ್ದಾರೆ ಎಂದು ಬೆಳ್ಳಾವಿ ಶ್ರೀ ಮದ್ ಬೆಳ್ಳನ ಪುರಿ ವೀರ ಸಂಸ್ಥಾನ ಮಠದ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾ ಮಾಲೂರು ತಾಲ್ಲೂಕು ಘಟಕ ಮತ್ತು ಯುವ ಘಟಕದ ವತಿಯಿಂದ ಸಂಘದ ಕಛೇರಿಯಲ್ಲಿ ಇಂದು ನಡೆದ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳ 3ನೇ ವರ್ಷದ ಪುಣ್ಯ ಸ್ಮರಣೆಯ ದಾಸೋಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ಶ್ರೀ ಶಿವಕುಮಾರ ಸ್ವಾಮೀಗಳು ದೇಶ ಕಂಡ ಮಹನೀಯರಲ್ಲಿ ಅಗ್ರಗಣ್ಯರಾಗಿದ್ದಾರೆ. ಸಿದ್ದಗಂಗಾ ಮಠವು ಎಲ್ಲರಿಗೂ ಮಾದರಿಯಾಗಿದೆ. ಸಾವಿರಾರು ಮಕ್ಕಳಿಗೆ ಜೀವನವನ್ನು ರೂಪಿಸಿದೆ, ಇಲ್ಲಿ ಅಕ್ಷರ ಕಲಿತ ಅನೇಕರು ಉನ್ನತ ಸ್ಥಾನದಲ್ಲಿದ್ದಾರೆ. ಶ್ರೀಗಳ ವಿದ್ಯಾಧಾನ, ಅನ್ನದಾಸೋಹ ಕಾರ್ಯಕ್ರಮಗಳು ಯಾರು ಮರೆಯುವಂತಿಲ್ಲ. ಮುಖ್ಯವಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ತಿಳಿಸಿದ್ದಾರೆ.

ಶ್ರೀ ಶಿವಕುಮಾರ ಶ್ರೀಗಳು ತಮ್ಮ ಜನಸೇವಾ ಕಾರ್ಯಗಳ ಮೂಲಕ ಜನಮಾನಸದಲ್ಲಿ ಎಂದೆಂದಿಗೂ ಶಾಶ್ವತವಾಗಿ ಉಳಿದಿದ್ದಾರೆ. ಅವರ ತತ್ವಾದರ್ಶಗಳು ನಮಗೆ ಮಾದರಿ ಎಂದು ಮಾಲೂರು ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಿವಶಂಕಯ್ಯ ರವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಲೂರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಿವಶಂಕರಯ್ಯ ಪ್ರದಾನ ಕಾರ್ಯದರ್ಶಿ ಶಶಿಕುಮಾರ್, ಪತ್ರಿಕಾ ಕಾರ್ಯದರ್ಶಿ ನಂಜುಂಡಪ್ಪ,  ಕಾರ್ಯದರ್ಶಿ ಬಿ.ವಿ ಸೋಮಶೇಖರ್ ಖಜಾಂಚಿ ರೇಣುಕಾ ಪ್ರಸಾದ್, ಯುವಘಟಕದ ಅಧ್ಯಕ್ಷ ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಯೋಗೇಶ್ ಶಾಸ್ತ್ರಿ, ಖಜಾಂಚಿ ಮಿಥುನ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಜ್ಞಾನಮೂರ್ತಿ ಹಾಗೂ ಸಂಘದ ನಿರ್ದೇಶಕರು ಹಾಗೂ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here