ಕಲಬುರಗಿ: ನಡೆದಾಡುವ ದೇವರು ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಬಡವರಿಗೆ, ದಲಿತರಿಗರ ಹಾಗೂ ಕಡಿಮೆ ಅಂಕ ಪಡೆದವರಿಗೂ ಉಚಿತ ಶಿಕ್ಷಣ ನೀಡಿರುವುದು ನಾಡಿಗೆ ಮಾದರಿಯಾಗಿದೆ ಎಂದು ಜಿಲ್ಲಾ ವೀರಶೈವ ಸಮಾಜದ ಹಾಗೂ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಅಧ್ಯಕ್ಷ ಅರುಣಕುಮಾರ ಪಾಟೀಲ ಎಸ್.ಕೊಡಲಹಂಗರಗಾ ಹೇಳಿದರು.
ಅವರಿಂದು ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಿದ್ಧಗಂಗಾಶ್ರೀಗಳ ೩ನೇ ಪುಣ್ಯ ಸ್ಮರಣೆ ನಿಮಿತ್ಯ ಭಕ್ತರಿಗೆ ದಾಸೋಹ ವಿತರಣೆ ಮಾಡಿ ಮಾತನಾಡಿದರು.
ನಾಡಿನ ಸರ್ವ ಮಠಾಧೀಶರು ತಮ್ಮ ತಮ್ಮ ಅದೇ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಪ್ರಯತ್ನಿಸಬೇಕೆಂದು ಮನವಿ ಮಾಡಿದರು.
ಸಮಾಜದ ಮುಖಂಡರಾದ ಕಲ್ಯಾಣಪ್ಪ ಮಳಖೇಡ, ಬಸವರಾಜ ಯಾಲಕ್ಕಿ, ಸುಭಾಷ ಬಿಜಾಪೂರೆ, ಶರಣಗೌಡ ಪಾಟೀಲ ಸಂಕನೂರ, ಶ್ರೀಶೈಲ ಘೂಳಿ, ಜಗದೀಶ ಪಟ್ಟಣಶೆಟ್ಟಿ, ಭವಾನಿಸಿಂಗ ಠಾಕೂರ, ದೇವೇಂದ್ರಪ್ಪ ಅವಂಟಿ, ಜಗದೇವಪ್ಪ ಹಲಕರ್ಟಿ, ಚನ್ನಬಸಯಗಯ ಗುರುವಿನ, ಈರಣ್ಣಗೌಡ ಯಡ್ಡಳ್ಳಿ, ಬಸಣ್ಣಪ್ಪ ಗಡ್ಡದ, ಮಲ್ಲಣ್ಣಗೌಡ ಪಾಟೀಲ ಕಲ್ಲೂರ, ರುದ್ರಮುನಿ ಪುರಾಣಿಕ ಸೇರಿದಂತೆ ಅನೇಕರು ಇದ್ದರು.