ಸಿಯುಕೆಯಲ್ಲಿ ಪರಾಕ್ರಮ ದಿವಸ ಆಚರಣೆ

0
41

ಕಲಬುರಗಿ: ನೇತಾಜಿ ಸುಭಾμïಚಂದ್ರ ಬೋಸ್ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದ್ದಾರೆ. ಸ್ವಾತಂತ್ರ್ಯ ಹೋರಾಟದತ್ತ ಗಮನಹರಿಸುವ ಉತ್ಸಾಹವನ್ನು ಸೈನಿಕರಿಗೆ ಅವರು ನೀಡಿದ್ದರು. ಇತರರುಅಧಿಕಾರದ ಮೇಲೆ ಗಮನ ಕೇಂದ್ರೀಕರಿಸುತ್ತಿರುವ ಸಂದರ್ಭದಲ್ಲಿ ಅವರು ಯಾವಾಗಲೂ ಸ್ವಾತಂತ್ರ್ಯವನ್ನು ಬಯಸಿದರು. ಎಂದು ನವದೆಹಲಿಯ ಕಮಾಂಡರ್ ವಿ.ಕೆ. ಜೇಟ್ಲಿ, ಹೇಳಿದರು.

ಅವರುಇಂದುಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಪರಾಕ್ರಮ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಷ್ಟ್ರಕ್ಕಾಗಿಏನಾದರೂ ಮಹತ್ತರವಾದುದನ್ನು ಮಾಡಬೇಕೆಂದು ಸದಾಚಿಂತಿಸುತ್ತಿದ್ದ ನೇತಾಜಿಅವರ ಬಗ್ಗೆ ಹೆಚ್ಚು ಓದುವಂತೆಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Contact Your\'s Advertisement; 9902492681

ಇನ್ನೋರ್ವ ಮುಖ್ಯಅತಿಥಿ ಕೆ. ರಾಕಾ ಸುಧಾಕರರಾವ್‍ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾರತೀಯರಾಷ್ಟ್ರೀಯ ಸೇನೆಯ (ಐಎನ್‍ಎ) ಪಾತ್ರದ ಬಗ್ಗೆ ಮಾತನಾಡಿದರು ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ನೇತಾಜಿ ಸುಭಾμïಚಂದ್ರ ಬೋಸ್‍ಅವರ ಪಾತ್ರಎಷ್ಟು ಮಹತ್ವದ್ದಾಗಿತ್ತುಎಂಬುದರ ಮೇಲೆ ಬೆಳಕು ಹರಿಸಿದರು.

ಕರ್ನಾಟಕಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಸಚಿವ ಪೆÇ್ರ.ಬಸವರಾಜ ಪಿ ಡೋಣೂರ ಮಾತನಾಡಿ, ಸ್ವಾತಂತ್ರ್ಯದ ಬಗ್ಗೆ ಸ್ಪಷ್ಟತೆ ಹೊಂದಿದ್ದ ಭಾರತದ ಪ್ರಬಲ ವ್ಯಕ್ತಿ ನೇತಾಜಿ. ದಿನೇ ದಿನೇ ಭಾರತೀಯರ ಹೃದಯದಲ್ಲಿಅವರ ಮೇಲಿನ ಪ್ರೀತಿಗೌರವ ಹೆಚ್ಚುತ್ತಿದೆಎಂದರು.
ಗೌರವಾನ್ವಿತ ಉಪಕುಲಪತಿ (ಐ/ಸಿ) ಪೆÇ್ರ. ಎಂ ವಿ ಅಳಗವಾಡಿ ಅವರುತಮ್ಮಅಧ್ಯಕ್ಷೀಯ ಭಾಷಣದಲ್ಲಿ, ನೇತಾಜಿಅವರಚೇತನ ಇಂದಿನ ಯುವಕರಿಗೆ ಮಾದರಿಯಾಗಿದೆ. ಅವರುತಮ್ಮಇಡೀಜೀವನವನ್ನು ಭಾರತದ ವಿಮೋಚನೆ ಮತ್ತುಉನ್ನತಿಗಾಗಿ ಮುಡಿಪಾಗಿಟ್ಟಿದ್ದರುಎಂದುಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಡೀನ್‍ಗಳು, ಮುಖ್ಯಸ್ಥರು, ಸಂಯೋಜಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here