ನ್ಯಾಯಾದೀಶರ ವಜಾ ಮಾಡಬೇಕೆಂದು ರಾಜೇಶ ಯನಗುಂಟಿಕರ್ ಆಗ್ರಹ

0
8

ಶಹಾಬಾದ: ಗಣರಾಜ್ಯೋತ್ಸ ದಿನದಂದು ರಾಯಚೂರಿನಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ದಲಿತ ಮುಖಂಡ ರಾಜೇಶ ಯನಗುಂಟಿಕರ್ ಒತ್ತಾಯಿಸಿದ್ದಾರೆ.

ನ್ಯಾಯಾಂಗ ಹುದ್ದೆಯಲ್ಲಿರುವವರು ಸಂವಿಧಾನ ಶಿಲ್ಪಿ ಅವರ ಭಾವಚಿತ್ರಕ್ಕೆ ಅವಮಾನಿಸುವ ಮೂಲಕ ವಿಕೃತಿ ಮನಸ್ಥಿತಿ ಮೆರೆದಿದ್ದಾರೆ. ಅಂಬೇಡ್ಕರ್ ಅವರ ಭಾವಚಿತ್ರವಿದ್ದರೆ ಧ್ವಜಾರೋಹಣ ಮಾಡುವುದಿಲ್ಲ ಎಂದು ಉಡಾಫೆಯಾಗಿ ಮಾತನಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಸಂಗತಿ .ದೇಶಕ್ಕೆ ಸಂವಿಧಾನ ಬರೆದವರ ಬಗ್ಗೆ ಈ ರೀತಿ ಮಾಡಿರುವುದು ನಾಡಿನೆಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

Contact Your\'s Advertisement; 9902492681

ಇದು ಅತ್ಯಂತ ನೋವಿನ ಸಂಗತಿಯಾಗಿದ್ದು ಮಾನವ ಕುಲಕ್ಕೆ ಅವಮಾನದ ವಿಚಾರ. ಹೀಗಾಗಿ ತಕ್ಷಣವೇ ಹೈಕೋರ್ಟ್ ನ್ಯಾಯಮೂರ್ತಿಗಳು ಮಧ್ಯ ಪ್ರವೇಶಿಸಿ ಇವರನ್ನು ನ್ಯಾಯಾಂಗ ಇಲಾಖೆಯಿಂದ ವಜಾ ಮಾಡಬೇಕು ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here