ಬೇಂದ್ರೆ ಭಾವಗಾರುಡಿಗರಾಗಿದ್ದರು

0
20

ಕಲಬುರಗಿ: ಭಾವನೆಯ ಬದುಕಿನಲ್ಲಿ ಶಬ್ದಗಳ ಜೋಡಣೆ ಮಾಡಿ ಕನ್ನಡ ಸಾಹಿತ್ಯ ಲೋಕಕ್ಕೆ ನಿಜವಾದ ದೇಶ ಸಾಹಿತ್ಯವನ್ನು ತೋರಿಸಿಕೊಟ್ಟ ದ.ರಾ.ಬೇಂದ್ರೆಯವರು ಭಾವಗಾರುಡಿಗರಾಗಿದ್ದರು ಎಂದು ಖ್ಯಾತ ಚಿಂತಕ ಜಗನ್ನಾಥ ತರನಳ್ಳಿ ಹೇಳಿದರು.

ನಗರದ ಸರ್ವಜ್ಞ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಿರಣ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯು ಹಮ್ಮಿಕೊಂಡಿದ ದ.ರಾ.ಬೇಂದ್ರೆಯವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಬೇಂದ್ರೆಯವರು ದೊಡ್ಡ ಮಹಾ ಗ್ರಂಥಗಳನ್ನು ಬರೆಯಲು ಪ್ರಯತ್ನ ಮಾಡದೇ ಇದ್ದರೂ, ಅವರು ಬರೆದ ಎಲ್ಲಾ ಕಾವ್ಯಗಳು ಮಹಾಕಾವ್ಯಗಳನ್ನು ಮೀರಿಸುವಂತೆ ಕಾಣುತ್ತಿವೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸುರೇಶ ಬಡಿಗೇರ, ವರಕವಿ ದ.ರಾ.ಬೇಂದ್ರೆಯವರು ಬರೆದ ಕವನಗಳು ಗ್ರಾಮೀಣ ಸಾಹಿತ್ಯಕ್ಕೆ ದೇಶಿ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಿರಣ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಶ ನಾಲವಾರಕರ್ ರವರು ಮಾತನಾಡಿ ಇಂದಿನ ವಿದ್ಯಾರ್ಥಿಗಳಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಬಗ್ಗೆ ಮಾಹಿತಿ ಸಿಗುವ ದೃಷ್ಟಿಯಿಂದ ಶಾಲಾ ಕಾಲೇಜುಗಳಲ್ಲಿ ಮಹಾ ಪುರುಷರ ಜನ್ಮದಿನಾಚರಣೆಗಳು ಆಯೋಜಿಸಲಾಗುತ್ತಿದೆ.

ವೇದಿಕೆಯ ಮೇಲೆ ಕಾಲೇಜಿನ ಪ್ರಾಚಾರ್ಯ ಎಂ.ಸಿ.ಕರದಳ್ಳಿ, ಪ್ರಭು ಪಾಟೀಲ, ಜೈರಾಜ ಕಿಣಗಿ,ಆನಂದ ತೆಗನೂರ ಇದ್ದರು. ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here