ಕಲಬುರಗಿ: ನಗರದ ವಿದ್ಯಾನಗರ ಬಡಾವಣೆಯ ಶ್ರೀ ಕೃಷ್ಣ ಮಂದಿರದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ರಂಗನಾಥ ದೇಸಾಯಿ, ವಕೀಲರಾದ ಪ್ರಶಾಂತ ಕೋರಳ್ಳಿ ಹಾಗೂ ಮಂಜುನಾಥ್ ಕುಲಕರ್ಣಿ ಅವರನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಕವಾದ ಪ್ರಯುಕ್ತ ಕೃಷ್ಣ ಮಂದಿರ ಆಡಳಿತ ಮಂಡಳಿ ವತಿಯಿಂದ ಶ್ರೀ ಕೃಷ್ಣ ಮಂದಿರ ಅವರಣದಲ್ಲಿ ಸನ್ಮಾನ ಸಮಾರಂಭ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಕಲಬುರ್ಗಿ ಜಿಲ್ಲೆಯಿಂದ ಸದಸ್ಯರು ನೇಮಕವಾಗಿದ್ದ ರಿಂದ ಜಿಲ್ಲೆಯ ಬ್ರಾಹ್ಮಣ ಸಮಾಜದ ಅಭಿವೃದ್ಧಿಗೆ ಪೂರಕ ವಾಗಿದೆ ಎಂದು ಶ್ರೀ ಕೃಷ್ಣ ಮಂದಿರ ಆಡಳಿತ ಮಂಡಳಿ ಸದಸ್ಯರು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು, ಸಲಹಾ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.