ಚಿತ್ರಕಲಾ ಪರಿಷತ್ ನಲ್ಲಿ ಆರ್ಟಿಸಾನ್ಸ್‌ ಬಜಾರ್‌ ಕರಕುಶಲ ಮೇಳ: ಸಚಿವ ಸುನಿಲ್ ಕುಮಾರ್ ಚಾಲನೆ

0
18

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ‘ಇಂಡಿಯನ್‌ ಆರ್ಟಿಸಾನ್ಸ್‌ ಬಜಾರ್‌’ ವಿಶೇಷ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಿದ್ದು, ಕನ್ನಡ‌ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಶುಕ್ರವಾರ ಚಾಲನೆ ನೀಡಿದರು.

ಮೇಳವು ಫೆ.13 ರವರೆಗೆ ನಡೆಯಲಿದ್ದು, ದೇಶದ ನಾನಾ ಭಾಗಗಳ ವಿಶೇಷ ಉತ್ಪನ್ನಗಳು ಮೇಳದಲ್ಲಿವೆ. ಉದ್ಘಾಟನೆ ವೇಳೆ ನಟಿಯರಾದ ವಾಣಿಶ್ರೀ, ದ್ರವ್ಯಾ ಶೆಟ್ಟಿ ಪಾಲ್ಗೊಂಡು, ‘ಚಿತ್ರಕಲಾ ಪರಿಷತ್ ನಲ್ಲಿ ನಡೆಯುತ್ತಿರುವ ಮೇಳವು ಆಕರ್ಷಕವಾಗಿದ್ದು, ಒಂದೇ ಸೂರಿನಡಿ ಎಲ್ಲಾ ವಸ್ತುಗಳೂ ಸಿಗಲಿವೆ. ಹೆಚ್ಚು ಹೆಚ್ಚು ಗ್ರಾಹಕರು ಭಾಗವಹಿಸಿ, ಉತ್ಪನ್ನಗಳನ್ನು ಖರೀದಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮೇಳ ನಡೆಯುತ್ತಿದೆ. ಹೀಗಾಗಿ ಗ್ರಾಹಕರು ನಿರಾತಂಕವಾಗಿ ಪಾಲ್ಗೊಳ್ಳಬಹುದು’ ಎಂದು ನಟಿಯರಿಬ್ಬರೂ ಗ್ರಾಹಕರನ್ನು ಆಹ್ವಾನಿಸಿದರು.

Contact Your\'s Advertisement; 9902492681

ಬಗೆ ಬಗೆಯ ಸೀರೆಗಳು, ಅಂದದ ಕರಕುಶಲ ವಸ್ತುಗಳು, ಮರದ ಆಟಿಕೆಗಳು, ಆಭರಣಗಳು, ಅಲಂಕಾರಿಕ ಬೆಡ್ ಶಿಟ್ ಗಳು, ಪೀಠೋಪಕರಣಗಳು, ಮ್ಯಾಟ್‍ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ಬಗೆ ಬಗೆಯ ಉತ್ಪನ್ನಗಳು ಚಿತ್ರಕಲಾ ಪರಿಷತ್ ನಲ್ಲಿ ಗ್ರಾಹಕರ ಗಮನ ಸೆಳೆಯುತ್ತಿವೆ. ದೇಶದ ನಾನಾ ಭಾಗಗಳಿಂದ ಕಲಾವಿದರು ಆಗಮಿಸಿದ್ದು, 80ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಕಲಾವಿದರು ತಮ್ಮ ಕಲಾಕೃತಿಗಳು ಹಾಗೂ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವರು.

ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ. ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಪೀಠೋಪಕರಣಗಳು, ಮ್ಯಾಟ್‍ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.

ಟೇಬಲ್ ಮತ್ತು ನೆಲದ ಮೇಲೆ ಹಾಸುವಂತಹ ಮ್ಯಾಟ್‍ಗಳು ಹಾಗೂ ಗೋಡೆಯ ಮೇಲೆ ನೇತು ಹಾಕುವ ಮ್ಯಾಟ್‍ಗಳು ಇಲ್ಲಿ ಲಭ್ಯವಿವೆ. ಮಧುಬನಿ ಕಲಾ ಪ್ರಕಾರದ ವಸ್ತುಗಳು ಇಲ್ಲಿ ಲಭ್ಯವಿವೆ.

ಇದೇ ವೇಳೆ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ. ಬಿ.ಎಲ್. ಶಂಕರ್, ಪರಿಷತ್ ನ ಪೃಧಾನ ಕಾರ್ಯದರ್ಶಿ ಕೆ.ಎಸ್. ಅಪ್ಪಾಜಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ಫೆ.13 ರವರೆಗೆ ಮೇಳ: ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್‌ ಆವರಣ, ಕುಮಾರಕೃಪಾ ರಸ್ತೆ. ಸಮಯ: ಫೆ.13 ರವರೆಗೆ ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 7ರವರೆಗೆ ನಡೆಯಲಿದೆ. ಪ್ರವೇಶ ಉಚಿತ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here