ಗುತ್ತಿಗೆದಾರರಿಗೆ ಸ್ಪಂದಿಸದ ರಾಜ್ಯ ಸರ್ಕಾರ: ಜಗನ್ನಾಥ ಶೇಗಜಿ ಆರೋಪ

0
15

ಕಲಬುರಗಿ: ಬೆಳಗಾವಿಯ ಜಿಲ್ಲೆಯ ಗುತ್ತಿಗೆದಾರರಾದ ಸಂತೋಷ ಪಾಟೀಲ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ನೇರ ಹೊಣೆ ಗ್ರಾಮೀಣ ಅಭಿವೃದ್ಧಿ ಸಚಿವರಾದ ಮಾನ್ಯ ಕೆ. ಎಸ್.ಈಶ್ವರಪ್ಪ ಎನ್ನುವ ವಿಷಯ ಎಲ್ಲರಿಗು ತಿಳಿದ ವಿಷಯವಾಗಿದ್ದು, ಕಳೆದ ೮ ರಿಂದ ೧೦ ತಿಂಗಳಿಂದ ಬ್ರಷ್ಟಾಚಾರ, ಕಮಿಷನ್ ಮತ್ತು ಲಂಚ ಕುಲತು ಹೊರಾಟ ಮಾಡುತ್ತಲೆ ಬಂದಿದೆ. ಪ್ರಧಾನ ಮಂತ್ರಿ, ರಾಜ್ಯ ಪಾಲರು, ಮುಖ್ಯ ಮಂತ್ರಿಗಳು, ಸಚಿವರು, ಸರಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಶಾಸಕರೆಲ್ಲಲಗೂ ಬ್ರಷ್ಟಾಚಾರ ನಿಯಂತ್ರಣ ಮಾಡುವಂತೆ ಆಗ್ರಹ ಪಡಿಸುತ್ತಾ ಬಂದಿದ್ದರು ಯಾರೊಬ್ಬರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಲಬುರಗಿ ಜಿಲ್ಲಾ ಕಾಂಟ್ರಾಕ್ಟರ್ ಅಸೋಸಿಯೇಷನ್,ನ ಅಧ್ಯಕ್ಷ ಜಗನ್ನಾಥ ಶೇಗಜಿ ಹೇಳಿದರು.

ಇದನ್ನೂ ಓದಿ: 40% ಕಮಿಷನ್ ನಲ್ಲಿ ಮೋದಿಯವರಿಗೂ ಪಾಲಿದೆಯಾ?: ಮಾಜಿ ಸಿಎಂ ಸಿದ್ದರಾಮಯ್ಯ

Contact Your\'s Advertisement; 9902492681

ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲವು ತಿಂಗಳಿನಿಂದ ಇದರ ಬಗ್ಗೆ ಮುಖ್ಯಮಂತ್ರಿ ಗೆ ಗಮನ ತಂದರು ಪ್ರಯೋಜನ ಆಗಿಲ್ಲ ಎಂದರು. ಒಂದು ವೇಳೆ ಸರಕಾರ ಸ್ಪಂದಿಸಿದ್ದರೆ ಒಂದು ಅಮುಲ್ಯ ಜೀವವೊಂದು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಈಗಲಾದರು ಸರಕಾರ ಎಚ್ಚೆತ್ತು ಮತ್ತಷ್ಟು ಗುತ್ತಿಗೆದಾರರ ಜೀವ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಮಾನ್ಯ ಮುಖ್ಯ ಮಂತ್ರಿಗಳಿಗೆ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭೇಟಿ ಮಾಡಿದಾಗ ಶೆಷನ್ ಪೂರ್ಣಗೊಂಡ ನಂತರ ತಮ್ಮ ಬೇಡಿಕೆಗಳ ಬಗ್ಗೆ ಪರಿಶೀಲಿಸಲಾಗುವುದೆಂದು ಭರವಸೆ ನೀಡಿದ್ದರು. ಅದರಲ್ಲಿ ಮುಖ್ಯವಾಗಿ ಶ್ರೀ ಕೆ. ಈಶ್ವರಪ್ಪ ರವರಿಗೆ ಶ್ರೀ ಸಂತೋಷ ಪಾಟೀಲರವರು ಮಾಡಿದ ಕಾಮಗಾರಿಯ ಬಗ್ಗೆ ಪ್ರಸ್ತಾಪಿಸಿದ್ದೆವು. ಆದರೆ. ಕೆ. ಈಶ್ವರಪ್ಪ ರವರು ಅವರ ಮನವಿಗೆ ಸ್ಪಂದಿಸದೆ ಅವರು ಮಾಡಿದ ಕಾಮಗಾರಿಗೆ ಅನುಮೋದನೆ ನೀಡದೆ ಇದ್ದಿರುವುದರಿಂದ ಸಂತೋಷ ಪಾಟೀಲರವರು ಮಾನ್ಯ ಪ್ರಧಾನ ಮಂತ್ರಿಗಳಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ನಾನು ಮಾಡಿರುವ ಕಾಮಗಾರಿಯ ಅಲ್ಲ ಪಾವತಿ ಮಾಡಬೇಕೆಂದು ಮನವಿ ಮಾಡಿಕೊಂಡರು ಏನು ಪ್ರಯೋಜನವಾಗದೆ ಇದ್ದಿರುವುದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದರು.

ಇದನ್ನೂ ಓದಿ: ಗುತ್ತಿಗೆದಾರರ ಕಮಿಷನ್ ವ್ಯವಹಾರ: ನ್ಯಾಯಾಂಗ ತನಿಖೆಗೆ ಕೆ ನೀಲಾ ಆಗ್ರಹ

ಕೂಡಲೇ ರಾಜ್ಯ ಸರ್ಕಾರ ಸಚಿವ ಈಶ್ವರಪ್ಪ ಅವರನ್ನು ವಜಾ ಮಾಡಿ,ಸಂತೋಷ ಕುಟುಂಬದ ಸದಸ್ಯರಿಗೆ ೨೫ ಲಕ್ಷ ಪರಿಹಾರ ಘೋಷಿಸಬೇಕು. ಒಂದು ತಿಂಗಳೊಳಗೆ ಇವೆಲ್ಲವೂ ಇಡೇರದೆ ಹೋದಲ್ಲಿ ವಿಧಾನ ಸೌಧದ ಎದುರಿಗೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಜಯ್ ಆರ್.ಕೆ,ಮೋಹಶಿನ ಎಂ.ಪಟೇಲ್, ಎಂ.ಕೆ.ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬೆಲೆ ಏರಿಕೆ ವಿರೋಧಿಸಿ ಕಲಬುರಗಿಯಲ್ಲಿ SDPI ಪ್ರತಿಭಟನೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here