40% ಕಮಿಷನ್ ಭ್ರಷ್ಟಾಚಾರ: ಸ್ವತಂತ್ರ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಎಡ ಪಕ್ಷಗಳಿಂದ ಪ್ರತಿಭಟನೆ

0
32

ಕಲಬುರಗಿ: ಸಚಿವ ಈಶ್ವರಪ್ಪರವರನ್ನು ಕೂಡಲೇ ಬಂಧಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಲು ಓತ್ತಾಯಿಸಿ ಹಾಗೂ ಗುತ್ತಿಗೆ ಕಾಮಗಾರಿಗಳಲ್ಲಿ ಶೇ 40% ಕಮಿಷನ್ ಭ್ರಷ್ಟಾಚಾರವನ್ನು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿ 8 ಎಡ ಹಾಗೂ ಜಾತ್ಯಾತೀತ ಪ್ರಜಾಸತ್ತಾತ್ಮಕ ಪಕ್ಷಗಳಿಂದ ಸರ್ದಾರ ವಲ್ಲಾಭಾಯಿ ಪಟೇಲ್ ವೃತದಲ್ಲಿ ಪ್ರತಿಭಟನೆ ನಡೆಸಿದರು.

ಶನಿವಾರ ಎಡ ಹಾಗೂ ಜಾತ್ಯಾತೀತ ಪ್ರಜಾಸತ್ತಾತ್ಮಕ ಪಕ್ಷಗಳ ಒಕ್ಕೂಟಗಳಾದ CPI, CPI (M), SUCI (C), RPI ಹಾಗೂ ,ಸ್ವರಾಜ್ ಇಂಡಿಯಾ ಪಕ್ಷಗಳ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಹೋರಾಟ ನಡೆಯಿತು.

Contact Your\'s Advertisement; 9902492681

ಇದನ್ನೂ ಓದಿ: ಕಲಬುರಗಿಯಲ್ಲಿ ‘ಗುಡ್ ಫ್ರೆಡೆ ’ ಆಚರಣೆ

ಬೆಳಗಾವಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲರು, ಪೂರೈಸಿದ ೪ ಕೋಟಿ ರೂ. ಗಳ ಕಾಮಗಾರಿಗೆ ಬಿಲ್ ಮಾಡಲು ಸಚಿವ ಈಶ್ವರಪ್ಪರವರು ಶೇ ೪೦% ರಷ್ಟು ಕಮಿಷನ್ ಗಾಗಿ ಒತ್ತಾಯಿಸುತ್ತಿದ್ದನ್ನು ತಡೆಯಲು ಮನವಿ ಮಾಡಿ ವಿಫಲರಾದ ನಂತರ ಸಾಲದ ಬಾಧೆ ತಾಳಲಾಗದೇ ಈ ಕುರಿತಂತೆ ಡೆತ್ ನೋಟ್ ಬರೆದು ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಚಿವ ಈಶ್ವರಪ್ಪರವರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದ್ದರೂ, ಅವರನ್ನು ಬಂಧಿಸದೇ, ರಕ್ಷಿಸುವ ಕೆಲಸವನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು, ಬಿಜೆಪಿ ಹಾಗೂ ಆರ್.ಎಸ್.ಎಸ್.ಗಳು ಮಾಡುತ್ತಿವೆ ಎಂದು ಹೋರಾಟ ನಿರತ ಮುಖಂಡರು ಆರೋಪಿಸಿದರು.
ಕೂಡಲೇ, ಸಚಿವ ಈಶ್ವರಪ್ಪರವರನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಿ, ಗುತ್ತಿಗೆ ಕಾಮಗಾರಿಗಳಲ್ಲಿ ಶೇ ೪೦% ಕಮಿಷನ್ ಭ್ರಷ್ಟಾಚಾರವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ: ಪಾಳಾದಲ್ಲಿ ಶರಣಬಸವೇಶ್ವರ ಜಾತ್ರಾ ಮಹೋತ್ಸವ

ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಜನತೆ ಇಂತಹ ಬದ್ಧತೆ ರಹಿತ ಜನದ್ರೋಹಿಗಳನ್ನು ಹಿಮ್ಮೆಟ್ಟಿಸಲು ಎಲ್ಲೆಡೆಯೂ ಒಂದು ಪ್ರಭಲ ಜನತಾಂತ್ರಿಕ ಹೋರಾಟಗಳನ್ನು ಕಟ್ಟಲು ಮುಂದೆ ಬರಬೇಕೆಂದು ಈ ಮೂಲಕ ಜನತೆಗೆ ಕರೆ ನೀಡುತ್ತೇವೆ.

CPI ಜಿಲ್ಲಾ ಕಾರ್ಯಾದರ್ಶಿ ಭೀಮಾಶಂಕ್ ಮಾಡ್ಯಾಳ್, SUCI (C) ಹೆಚ್.ವ್ಹಿ ದಿವಾಕರ್, ಸ್ವರಾಜ್ ಇಂಡಿಯಾ ಜಿಲ್ಲಾ ನಾಯಕ ನಾಗೇಂದ್ರ ತಂಬೆ, RPI ನಾಯಕ ಶರಣಬಸಪ್ಪ ಹೇರೂರ್ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here