ಕಲಬುರಗಿ: ಜಿಲ್ಲೆಯ ಚಿತ್ತಾಪೂರ ತಾಲೂಕಿನ ನಾಲವಾರ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಹೊಲಗಳಿಗೆ ನುಗ್ಗಿ ಬೆಳೆಗಳು ಹಾನಿ ಮಾಡುತ್ತಿರುವ ಬಿಡಾಡಿ ದನಗಳ ನಿಯಂತ್ರಣಕ್ಕೆ ಇದೇ ಏ.27 ರಿಂದ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲು ಸಂಸದ ಡಾ.ಉಮೇಶ ಜಾಧವ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚಿತ್ತಾಪೂರ ತಾಲೂಕಿನ ನಾಲವಾರ, ಸೂಗೂರ ಎನ್., ಮಾರಡಗಿ, ತುನ್ನೂರ, ಕುಲಕುಂದಾ ಹಾಗೂ ಮಳಗ್ ಗ್ರಾಮಗಗಳ ಗ್ರಾಮಸ್ಥರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಬಿಡಾಡಿ ದಿನಗಳ ನಿಯಂತ್ರಣ ಕುರಿತು ಸಭೆ ನಡೆಯಿತು.
ಇದನ್ನೂ ಓದಿ: ಆಂದೋಲಾ- ಅಣಬಿ 234. 31 ಲಕ್ಷ ರು ರಸ್ತೆ ಕಾಮಗಾರಿಗೆ ಡಾ. ಅಜಯ್ ಸಿಂಗ್ ಅಡಿಗಲ್ಲು
ಸಭೆಯಲ್ಲಿ ಭಾಗವಹಿಸಿದ ಗ್ರಾಮಸ್ಥರು ಕಳೆದ 8-10 ವರ್ಷಗಳಿಂದ ಬಿಡಾಡಿ ದನಗಳು ಸುತ್ತಮುತ್ತಲಿನ ಗ್ರಾಮಗಳಲ್ಲಿನ ಹೊಲಗಳಿಗೆ ನುಗಿ ಬೆಳೆ ಹಾನಿ ಮಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಈ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಾ.ಉಮೇಶ ಜಾಧವ ಅವರು ಇತ್ತೀಚೆಗೆ ತಾವು ಸನ್ನತ್ತಿಗೆ ಭೇಟಿ ನೀಡಿದಾಗ ಬಾಧಿತ ಗ್ರಾಮಗಳ ಗ್ರಾಮಸ್ಥರು ಈ ವಿಷಯ ನನ್ನ ಗಮನಕ್ಕೆ ತಂದಿದ್ದಾರೆ. ಪ್ರಾಣಿಗಳ ಹಕ್ಕುಗಳ ಉಲ್ಲಂಘನೆಯಾಗದಂತೆ ಎಲ್ಲಾ ಪೂರ್ವಸಿದ್ಧತೆ ಕೈಗೊಂಡು ಕಾರ್ಯಾಚರಣೆ ನಡೆಸಬೇಕು. ಪ್ರಾಣಿ ಹಿಂಸೆಗೆ ಅವಕಾಶ ನೀಡಬಾರದು. ಕಾರ್ಯಾಚರಣೆ ನಡೆಸಿದ ನಂತರ ದನಗಳನ್ನು ಸುರಕ್ಷಿತವಾಗಿ ಗೋಶಾಲೆಗೆ ಸಾಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿಗೆ ಬಂಜಾರಾ ಉಡುಪು ನೀಡಿ ಸನ್ಮಾನ
ಕಾಯಾಚರಣೆಗೆ ಗದಗಿನ ನುರಿತ ವೈದ್ಯರ ಬಳಕೆ: ಸಭೆಯಲ್ಲಿದ್ದ ಡಿ.ಸಿ. ಯಶವಂತ ವಿ. ಗುರುಕರ್ ಮಾತನಾಡಿ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚೆಪ್ಪನವರ ನೇತೃತ್ವದಲ್ಲಿ ಬುಧವಾರದಿಂದ ದನಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಿದ್ದೇವೆ. ಕಾರ್ಯಾಚರಣೆಗೆ ಬೇಕಾಗುವ ಚುಚ್ಚುಮದ್ದು ಸಿರಿಂಜ್‍ಗಳನ್ನು ಪುಣೆ ಮತ್ತು ಇಂದೋರ್‍ನಿಂದ ತರಲಾಗುತ್ತಿದೆ. ಇದಲ್ಲದೆ ಗದಗದಿಂದ ಇಬ್ಬರು ನುರಿತ ವೈದ್ಯರು ಸಹ ಮಂಗಳವಾರ ಆಗಮಿಸಲಿದ್ದಾರೆ ಎಂದರು.
ಪ್ರಥಮ ಹಂತವಾಗಿ 250-300 ದನಗಳ ಪೈಕಿ ಅತ್ಯಂತ ಕ್ರೂರಿ ದÀನಗಳನ್ನು ಗುರುತಿಸಿ ಅವುಗಳಿಗೆ ಮೂರ್ಛೆ ಬರುವಂತೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಬೇಕು. ತದನಂತರ ಉಳಿದ ದನಗಳನ್ನು ಸೆರೆ ಹಿಡಿದು ಜಿಲ್ಲೆಯ ರಟಕಲ್ ಸೇರಿದಂತೆ ಇತರೆ ಗೋಶಾಲೆಗೆ ರವಾನಿಸಬೇಕು, ಗೋಶಾಲೆಗಳಲ್ಲಿ ಇವುಗಳಿಗೆ ಸೂಕ್ತ ಮೇವಿನ ವ್ಯವಸ್ಥೆ ಸಹ ಮಾಡಬೇಕು ಎಂದು ಚಿತ್ತಾಪೂರ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಮತ್ತು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಬಿ.ಎಸ್.ಪಾಟೀಲ ಅವರಿಗೆ ನಿರ್ದೇಶನ ನೀಡಿದರು.
ಇದನ್ನೂ ಓದಿ: ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೇ ಪೊಲೀಸರಿಗೆ ತಿಳಿಸಿ: ಹಳ್ಳೂರ್
ಕಾರ್ಯಾಚರಣೆ ಒಂದು ವಾರ ಸಾಗಲಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಡಿ.ಸಿ. ಅವರು ಮನವಿ ಮಾಡಿದರು.
ಸಭೆಯಲ್ಲಿ ಕರ್ನಾಟಕ ತೊಗರಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ದಿಲೀಷ್ ಸಾಸಿ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ವಲಯ ಅರಣ್ಯಾಧಿಕಾರಿ ವಿಜಯಕುಮಾರ, ಗ್ರಾಮಗಳ ಮುಖಂಡರಾದ ಭೀಮರೆಡ್ಡಿಗೌಡ ಕುರಾಳ, ಶರಣಗೌಡ ಬೆನಕನಳ್ಳಿ, ಸಂಗಾರೆಡ್ಡಿ ಮಾಲಿಪಾಟೀಲ, ಮಹಿಪಾಲರೆಡ್ಡಿ ಕಿರಣಗಿ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಂಕರ ಕಣ್ಣಿ ಅವರು ಬಿಡಾದಿ ದನಗಳ ಹಾವಳಿಯಿಂದ ಬಾಧಿತ ಗ್ರಾಮಗಳು, ದನಗಳ ಸಂಖ್ಯೆ, ಬೆಳೆ ಹಾನಿ ಕುರಿತು ಸಭೆಗೆ ಸಮಗ್ರ ಮಾಹಿತಿ ನೀಡಿದರು.