ಕಲಬುರಗಿ: ಸಿಐಡಿಯವರು ಎರಡನೆಯ ನೋಟಿಸು ಜಾರಿ ಮಾಡಿದ್ದಾರೆ. ಬೆಳಿಗ್ಗೆ ಕಲಬುರಗಿ ಗೆ ಬರಲು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇರುವಾಗ ಸಿಐಡಿ ಇನ್ಸಪೆಕ್ಟರ್ ಒಬ್ಬರು ನೋಟಿಸು ತಂದಿರುವುದಾಗಿ ನನ್ನ ಸಿಬ್ಬಂದಿ ತಿಳಿಸಿದ್ದಾರೆ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಇದನ್ನೂ ಓದಿ: ಪಿಎಸ್ಐ ಆಕ್ರಮ: ದಿವ್ಯಾಹಾಗರಗಿ ಬಳಿ ದಿವ್ಯ ಶಕ್ತಿ ಏನಿದೆ? ಖರ್ಗೆ ಪ್ರಶ್ನೆ
ಕಲಬುರಗಿ ಯಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು,
ಮೊದಲ ನೋಟಿಸಿಗೆ ಈಗಾಗಲೇ ಉತ್ತರ ನೀಡಿದ್ದೇನೆ. ನೋಟಿಸಿನಲ್ಲಿ ಯಾವುದೇ ನಿರ್ದಿಷ್ಠತೆ ಹಾಗೂ ಸ್ಪಷ್ಟತೆ ಇಲ್ಲ. ಕಲಂ 91 ಅಡಿಯಲ್ಲಿ ಹಾಜಿರಾಗಲು ಹೇಳಿದ್ದರು.
ಈ ಸೆಕ್ಷನ್ಗಳ ಪ್ರಕಾರ ನಾನು ಕಡ್ಡಾಯವಾಗಿ ಹಾಜಿರಾಗಬೇಕಿಲ್ಲ. ಸಿಆರ್ ಪಿಸಿ ಪ್ರಕಾರ ತಮಗೆ ಯಾವ ನಿರ್ದಿಷ್ಠ ದಾಖಲೆ ನೀಡುವಂತೆ ಹೇಳಿಲ್ಲ. ಕಾನೂನಿನ ಪ್ರಕಾರ, ನಿರ್ದಿಷ್ಟ ದಾಖಲೆ ನೀಡುವಂತೆ ಹೇಳದಿರುವುದರಿಂದ ನಾನು ಉತ್ತರ ನೀಡಿದ್ದೇನೆ. ಕಲಂ 160 ರ ಪ್ರಕಾರ ಸಾಕ್ಷಿದಾರರು ಮಾತ್ರ ಹಾಜಿರಾಗಬೇಕು. ನಾನೇನು ಈ ಪ್ರಕರಣದ ಸಾಕ್ಷಿದಾರನಾ ? ನಾನು ವಿಚಾರಣೆಗೆ ಹಾಜಿರಾಗಬೇಕೆಂದು ಹೇಳುವ ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಳ್ಳಲಿ ಎಂದರು.
ಈ ಹಗರಣದಲ್ಲಿ ಬಿಜೆಪಿಯ ನಾಯಕರು ಭಾಗಿಯಾಗಿದ್ದಾರೆ. ತನಿಖೆ ಕೇವಲ ಕಲಬುರಗಿ ಗೆ ಮಾತ್ರ ಸೀಮಿತವಾಗಿದೆ. ಇನ್ನಷ್ಟು ವ್ಯಾಪಕವಾಗಿ ನಡೆದರೆ ಮತ್ತಷ್ಟು ಅಧಿಕಾರಿಗಳು ಹಾಗೂ ಆಳುವ ಪಕ್ಷದ ರಾಜಕಾರಿಗಳು ಭಾಗಿಯಾಗಿರುವುದು ಬಯಲಿಗೆ ಬರಲಿದೆ ಅಷ್ಟೇಕೆ ವಿಧಾನಸೌಧಕ್ಕೂ ಮುಟ್ಟಲಿದೆ.
ಇದನ್ನೂ ಓದಿ: ಪಿಎಸ್‌ಐ ಪರೀಕ್ಷಾ ಅಕ್ರಮ: ನಿಷ್ಪಕ್ಷಪಾತ ತನಿಖೆಗೆ ಡಾ. ಮಲ್ಲಿಕಾರ್ಜುನ್ ಖರ್ಗೆ ಆಗ್ರಹ
ದಿವ್ಯಾ ಹಾಗರಗಿ ಬಂಧನ ಯಾಕಿಲ್ಲ?
ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣದ ರೂವಾರಿ ದಿವ್ಯಾ ಹಾಗರಗಿ ಬಂಧನವಾಗಿಲ್ಲ ಯಾಕೆ ? ಎಂದು ಪ್ರಶ್ನಿಸಿದ ಅವರು ಅವರ ಬಳಿ ಯಾವ ದಿವ್ಯ ಶಕ್ತಿ ಇದೆ ಎಂದು ಬಂಧನವಾಗಿಲ್ಲ ಎಂದರು.
ನಮ್ಮಂತವರಿಗೆ ನೋಟಿಸುಕೊಡುತ್ತೀರಾ ಅವರಿಗೆ ಏಕೆ ಬಂಧನವಾಗಿಲ್ಲ.? ಸಚಿವ ಪ್ರಭು ಚವ್ಹಾಣ್ ಅವರು ಫೆಬ್ರುವರಿಯಲ್ಲೇ ಪತ್ರ ಬರೆದಿದ್ದರು ಹಾಗಾದರೆ ಸಚಿವರಿಗೇಕೆ ನೋಟಿಸು ನೀಡಿಲ್ಲ. ಬಿಜೆಪಿ ಎಂ ಎಲ್ ಸಿ ಸಂಕನೂರು ಕೂಡಾ ಈಹಗರಣದ ತನಖೆನಡೆಸಲು ಗೃಹಸಚಿವರಿಗೆ ಪತ್ರ ಬರೆದಿದ್ದಾರೆ ಅವರಿಗೇಕೆ ನೋಟಿಸು ನೀಡಿಲ್ಲ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ‘ಬಸವ ರತ್ನ’ ಪ್ರಶಸ್ತಿಗೆ ತೇಗಲತಿಪ್ಪಿ, ಅಂಡಗಿ ಆಯ್ಕೆ
ಈ ಹಗರಣದಲ್ಲಿ ಮೇಲ್ಮಟ್ಟದವರೆಗೆ ಹಣ ಮುಟ್ಟಿದೆ ಎಲ್ಲರೂ ಭಾಗಿಯಾಗಿದ್ದಾರೆ. ಸಮಗ್ರ ತನಿಖೆ ನಡೆಸದೆ ನಮ್ಮನ್ನು ಹೆದರಿಸಲು ನಮಗೆ ನೋಟಿಸು ನೀಡಲಾಗಿದೆ ಎಂದರು.
ಈ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಲಾಕ್ ಮಾಡಲು ಪ್ರಯತ್ನ ನಡೆದಿದ್ದು ನೀವು ವಿಚಾರಣೆಗೆಹೋಗಿಲ್ಲ ಎನ್ನಲಾಗಿದೆ ಎಂದುಕೇಳಲಾದ ಪ್ರಶ್ನೆಗೆ ಖಡಕ್ ಉತ್ತರಿಸಿದ ಖರ್ಗೆ ನಾವು ಯಾವಾಗಲೂ ಅನ್ ಲಾಕ್ ಆಗಿದ್ದೇವೆ. ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆಯಿಂದ ಇದ್ದೇವೆ. ಅಭಿವೃದ್ದಿ ಹಾಗೂ ಜನಪರ ನಿಲುವಿಗೆ ಬದ್ಧರಾಗಿದ್ದೇವೆ. ಬಿಜೆಪಿಯವರು ಭಾಗಿಯಾಗಿದ್ದಾರೆ. ಹಾಗಾಗಿ ಗಮನ ಬೇರೆಡೆ ಸೆಳೆಯಲು ನೋಟಿಸು ನೀಡಿದ್ದಾರೆ
ನಿಮ್ಮನ್ನು ಒಳಗಾಕ್ತಾರ?
ಪ್ರತಿನಿತ್ಯ ಮಾಧ್ಯಮದವರು ಈ ಕುರಿತು ಸುದ್ದಿ ಮಾಡ್ತಾ ಇದಿರಿ. ಅದು ನಿಮಗಿರುವ ಸುದ್ದಿ ಮೂಲಗಳನ್ನ ಆಧರಿಸಿರುತ್ತದೆ. ಹಾಗಂತ ನಿಮಗೂ ನೋಟಿಸು ಕೊಡುತ್ತಾರಾ? ನಿಮ್ಮನ್ನುಒಳಗೆ ಹಾಕ್ತಾರ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರಿಂದ ಅಪರೂಪ ಯಶಸ್ವಿ ಶಸ್ತ್ರಚಿಕಿತ್ಸೆ
ಡಿಕೆಶಿವಕುಮಾರ ವೈದ್ಯಕೀಯ ಸಚಿವರಾಗಿದ್ದಾಗ ದಿವ್ಯಾ ಹಾಗರಗಿ ಅವರನ್ನ ಭೇಟಿಯಾಗಲು ನಿಯೋಗದೊಂದಿಗೆ ಹೋಗಿದ್ದಾರೆ. ಆದರೆ, ಬಿಜೆಪಿಯವರು ಕೇವಲ ಫೋಟೋಮಾತ್ರ ಶೇರ್ ಮಾಡಿದ್ದಾರೆ.
ಪ್ರವಾಸೋದ್ಯಮ, ತೋಟಗಾರಿಕೆ, ಜಂಗಲ್ ಲಾಡ್ಜ್, ಪಿಡಬ್ಲೂಡಿ, ಇಂಜಿನಿಯರಿಂಗ್, ಎಫ್ ಡಿಸಿ, ಪಶುಸಂಗೋಪನೆ ಸೇರಿದಂತೆ ಹಲವಾರು ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಬಿಜೆಪಿ ಸರ್ಕಾರದ ಹಗರಣಗಳ ವಿಚಾರಣೆಗೆ ಕೇವಲ ನಿವೃತ್ತ ನ್ಯಾಯಾಧೀಶರ ನೇಮಕ ಸಾಕಾಗಲ್ಲ ಫಾಸ್ಟ್ ಟ್ರಾಕ್ ಕೋರ್ಟ್ ಸ್ಥಾಪನೆ ಮಾಡಬೇಕು ಎಂದರು.
ಇದನ್ನೂ ಓದಿ: ಬುದ್ಧ, ಬಸವ, ಅಂಬೇಡ್ಕರ್ ತತ್ವ ಪಾಲನೆಗೆ ಪ್ರಿಯಾಂಕ್ ಖರ್ಗೆ ಕರೆ
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…