ಕಲಬುರಗಿ: ಅಂಬೇಡ್ಕರ್ ಈ ದೇಶ ಕಟ್ಟಲು ಸಂವಿಧಾನ ಕೊಟ್ಟವರು. ಆದರೆ ಈಗ ಬಂದ ಅನೇಕರು ಸಂವಿಧಾನ ಹಾಳು ಮಾಡಲು ಹೊಂಚು ಹಾಕುತ್ತಿದ್ದಾರೆ. ಅಂವತಹ ಹೊಂಚಿಗೆ, ಸಂಚಿಗೆ ನೀವು ಯಾರೂ ಅವಕಾಶ ಕೊಡಬೇಡಿರೆಂದು ಸೇರಿದ್ದವರಿಗೆ ರಾಜ್ಯಸಬೆ ವಿರೋಧ ಪಕ್ಷ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.
ಅವರು ಗುರುವಾರ ಜೇವರ್ಗಿ ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿರುವ 4 ಎಕರೆ ಭೂಮಿಯಲ್ಲಿ ತಲೆ ಎತ್ತಿರುವ ಭವ್ಯವಾದಂತಹ ಡಾ.ಬಾಬಾಸಾಹೇಬ ಅಂಬೇಡ್ಕರ್ ಭವನ ಉದ್ಘಾಟನೆ ಮಾಡಿ, 131ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ಸಿಐಡಿಯಿಂದ ಎರಡನೇ ನೋಟಿಸ್
ಈ ದೇಶಕ್ಕೆ ಜಾತ್ಯತೀತ ತತ್ವ, ಚಿಂತನೆಗಳ ಗಟ್ಟಿ ಬುನಾದಿಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ನೀಡಿರುವ ಸಂವಿಧಾನದಿಂದ ಮಾತ್ರ ಪ್ರಜಾಪ್ರಭುತ್ವ ಇಂದಿಗೂ ಉಳಿದಿದೆ
ಸಾಮಾಜಿಕ ಸಮಾನತೆಗೆ ಡಾ.ಬಾಬಾಸಾಹೇಬರ ಕೊಡುಗೆ ಅಪಾರವಾಗಿದೆ. ಅವರು ಸಂವಿಧಾನ ರಚನೆ ಮಾಡುವ ಮೂಲಕ ದೇಶದ 130 ಕೋಟಿ ಜನರಿಗೆ ಸರ್ವ ಹಕ್ಕುಗಳನ್ನು ನೀಡಿದ್ದಾರೆ. ಅವರ ಸಮಾಜಮುಖೀ ಚಿಂತನೆಗಳು ಇಂದಿಗೂ ದೇಶಕ್ಕೆ ದಾರಿದೀಪಗಳಾಗಿವೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಬಾಬಾಸಾಹೇಬರು ಕಾರಣ. ಈ ದೇಶದಲ್ಲಿ ಸಂವಿಧಾನ ಹಾಳು ಮಾಡುವ ಹಾಗೂ ನಿಮ್ಮ ಹಕ್ಕುಗಳು ಕಸಿದುಕೊಳ್ಳುವ ಕೆಲವು ಜನ ಹುಟ್ಟಿದ್ದಾರೆ. ಅವರಿಗೆ ಪಾಠ ಕಲಿಸಬೇಕಾದರೇ ತಾವೆಲ್ಲರೂ ಡಾ.ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆಯಬೇಕು ಎಂದು ಸೇರಿದ್ದವರಿಗೆ ಖರ್ಗೆ ಕರೆ ನೀಡಿದರು.
ಅಂಬೇಡ್ಕರ್ ಸಂವಿಧಾನವೇ ಭಾರತದ ಶಕ್ತಿ ಎಂಬುದನ್ನು ಎಲ್ಲರೂ ಅರಿಯಬೇಕಿದೆ, ಸಾಮಾಜಿಕ ಸಮಾನತೆ, ಆರ್ಥಿಕ ಬಲ ತುಂಬಿದ ಬಾಬಾಸಾಹೇಬರ ಕೊಡುಗೆ ಅಪಾರವಾಗಿದೆ. ಈ ದೇಶದ ಮಣ್ಣಿನ ಮಕ್ಕಳ ರP್ಷÀಣೆಗೆ ಬಾಬಾಸಾಹೇಬ ಅವರು ಅವತರಿಸಿ ಬಂದಿದ್ದಾರೆ. ಈ ದೇಶ ಗುಲಾಮಗಿರಿಯಲ್ಲಿ ಇರಬೇಕಾದರೇ ಮನುಸ್ಮೈತಿ ಕಾರಣ. ಮನುವಿನಿಂದ ಈ ದೇಶ ಹಾಳಾಗಿ ಹೋಗಿದೆ ಎಂದು ವಿಷಾದಿಸಿದರು.
ಇದನ್ನೂ ಓದಿ: ಪಿಎಸ್‌ಐ ಪರೀಕ್ಷಾ ಅಕ್ರಮ: ನಿಷ್ಪಕ್ಷಪಾತ ತನಿಖೆಗೆ ಡಾ. ಮಲ್ಲಿಕಾರ್ಜುನ್ ಖರ್ಗೆ ಆಗ್ರಹ
ಕಟ್ಟೆ ಮೇಲೆ ಕುಳಿತು ಮಾತನಾಡುವುದರಿಂದ ಸಮಾಜ ಮುಂದೇ ಬರಲು ಸಾಧ್ಯವಿಲ್ಲ. ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿP್ಷÀಣ ಕೊಡುವ ಮೂಲಕ ಮುಂದೇಬರಬೇಕು. ನಿಮ್ಮ ಹಕ್ಕಿಗಾಗಿ ನೀವೇ ಹೋರಾಟ ಮಾಡಬೇಕು, ಎಲ್ಲಾ ಧರ್ಮದವರ ಜತೆ ಸೌಜನ್ಯದಿಂದ ಕೂಡಿ ಬಾಳಬೇಕೆಂದು ಖರ್ಗೆ ಹೇಳಿದರು.
ಅಂಬೇಡ್ಕರ್ ಭವನ ದಿ. ಧರಂಸಿಂಗ್ ಕನಸಾಗಿತ್ತು- ಡಾ. ಅಜಯ್ ಸಿಂಗ್
ಜೇವರ್ಗಿಯಲ್ಲಿ ಅಂಬೇಡ್ಕರ್ ಭವನ ಕನಸು ಕಂಡವರು ದಿ. ಧರಂಸಿಂಗ್. 1986- 87 ರಲ್ಲಿ ಇದಕ್ಕಾಗಿ ಮುಖ್ಯವಾದಂತಹ ಭೂಮಿ ಗುರುತಿಸಿ ಸಮಾಜ ಲ್ಯಾಣ ಸಚಿವರಾಗಿದ್ದಾಗ 1 ಎಕರೆ ಜಾಗ ಕೊಟ್ಟರು. ಹಣ ಮೀಸಲಿಟ್ಟರು. 2005- 06 ರಲ್ಲಿ ಸಿಎಂ ಆಗಿದ್ದಾಗ 99. 98 ಲಕ್ಷ ರು ಮೀಸಲಿಟ್ಟರು. ಮುಂದೆ ಂದಾಜು ಪರಿಷ್ಕರಣೆಗೊಂಡು 2. 95 ಕೋಟ ರು ಆಯ್ತು. ಖರ್ಗೆಯವರೂ ಭವನಕ್ಕೆ ತಮ್ಮ ನಿಧಿಯಿಂದ 50 ಲಕ್ಷ ರು ನೀಇದ್ದಾರೆ. ಅಲ್ಲಂಪ್ರಭು ಪಾಟೀಲರೂ ಹಣ ನೀಡಿದ್ದಾರೆಂದು ಸೇವೆ ಸ್ಮರಿಸಿದರು. ರಾಜ್ಯದ ತಾಲೂಕುಗಳಲ್ಲೇ ಜೇವರ್ಗಿಯಂತಹ ಅಂಬೇಡ್ಕರ್ ಭವನ ಎಲ್ಲಿಯೂ ಇಲ್ಲವೆಂದರು.
ಇದನ್ನೂ ಓದಿ: ಬುದ್ಧ, ಬಸವ, ಅಂಬೇಡ್ಕರ್ ತತ್ವ ಪಾಲನೆಗೆ ಪ್ರಿಯಾಂಕ್ ಖರ್ಗೆ ಕರೆ
224 ಕ್ಷೇತ್ರಗಳಲ್ಲಿ ಜಾತ್ಯಾತೀತ ಕ್ಷೇತ್ರ ಜೇವರ್ಗಿ ಕ್ಷೇತ್ರ ಪ್ರಸಿದ್ದಿಯಾಗಿದೆ. ಬಾಬಾಸಾಹೇಬರು ಕೇವಲ ಒಂದು ಜಾತಿಗೆ ಸೀಮಿತವಲ್ಲ ಎಂಬುದು ಈ ಕಾರ್ಯಕ್ರಮದ ಮೂಲಕ ಸಾಬೀತಾಗಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದರು. ತುಂತುರು ಮಳೆಯಲ್ಲೇ ನಡೆದ ಸಮಾರಂಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟನಾ ಸಮಿತಿ ಅಧ್ಯP್ಷÀ ಚಂದ್ರಶೇಖರ ಹರನಾಳ, ಜಯಂತ್ಯುತ್ಸವ ಸಮಿತಿ ಅಧ್ಯP್ಷÀ ರಾಯಪ್ಪ ಬಾರಿಗಿಡ ಅಧ್ಯP್ಷÀತೆ ವಹಿಸಿದ್ದರು.
ಹುಲಿ ಹಾಲು ಕುಡಿದು ಖರ್ಗೆ ಘರ್ಜನೆ
ಡಾ. ಅಜಯ್ ಸಿಂಗ್ ಸಮಾರಂಭದಲ್ಲಿ ಶಿಕ್ಷಣವನ್ನು ಹುಲಿಯ ಹಾಲಿಗೆ ಹೋಲಿಸುತ್ತ ಇಂತಹ ಹುಲಿಯ ಹಾಲು ಕುಡಿದವರು ಅನ್ಯಾಯದ ವಿರುದ್ಧ ಘರ್ಜಿ ಸಲೇಬೇಕು. ಇದು ಅಂಬೇಡ್ಕರ್ ಅವರು ಹೇಳಿ ಕೊಟ್ಟಂತಹ ಮುಖ್ಯ ತತ್ವ- ಸಿದ್ದಾಂತವಾಗಿದೆ. ಅದೇ ಸಿದ್ಧಾಂತದಲ್ಲಿ ಸಾಗಿರುವ ಡಾ. ಖರ್ಗೆಯವರು ಶಿಕ್ಷಣ ಪಡೆದು ಹುಲಿಯ ಹಾಲು ಕುಡಿದಿದ್ದು ಇಂದು ರಾಜ್ಯಸಭೆಯಲ್ಲಿ ನಮ್ಮೆಲ್ಲರ ಪರವಾಗಿ ಘರ್ಜಿಸುತ್ತಿದ್ದಾರೆಂದು ಖರ್ಗೆಯವರ ಬಗ್ಗೆ ಬಮ್ಣನೆ ಮಾತುಗಳನ್ನಾಡಿ ಗಮನ ಸೆಳೆದರು. ಖರ್ಗೆಯವರೊಂದಿಗೆ ತಮ್ಮ ತಂದೆ ದಿ. ಧರಂಸ್ಂ್ಗ ಅವರ ಸಂಬಂಧ ಸ್ಮರಿಸುತ್ತ ಲವ ಕುಶ ಜೋಡಿಯಿಂದ ಕಲ್ಯಾಣ ನಾಡಿಗೆ, ರಾಜ್ಯಕ್ಕೆ ಆಗಿರುವಂತಹ ಕೆಲಸಗಳನ್ನು ಸ್ಮರಿಸಿದರು.
ಇದನ್ನೂ ಓದಿ: ‘ಬಸವ ರತ್ನ’ ಪ್ರಶಸ್ತಿಗೆ ತೇಗಲತಿಪ್ಪಿ, ಅಂಡಗಿ ಆಯ್ಕೆ
ಬೀದರನ ಅಣದೂರ ಬುದ್ಧವಿಹಾರದ ವರಜ್ಯೋತಿ ಬಂತೇಜಿ, ಕಲಬುರಗಿ ಬುದ್ಧವಿಹಾರದ ಸಂಘಾನಂದ ಬಂತೇಜಿ, ಮೈಸೂರಿನ ಉರಿಲಿಂಗಪೆದ್ದಿ ಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೆÇ್ರ. ಅಪ್ಪುಗೆರೆ ಸೋಮಶೇಖರ ಮುಖ್ಯಭಾಷಣ ಮಾಡಿದರು.
ಅಫಜಲಪೂರ ಶಾಸಕ ಎಂ.ವೈ.ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಲ್ಲಮಪ್ರಭು ಪಾಟೀಲ, ಕೇದಾರಲಿಂಗಯ್ಯ ಹಿರೇಮಠ, ಗೊಲ್ಲಾಳಪ್ಪ ಯಾತನೂರ, ಪುರಸಭೆ ಅಧ್ಯಕ್ಷೆ ಶರಣಮ್ಮ ತಳವಾರ, ಶಿವಾನಂದ ಪಾಟೀಲ ಮರತೂರ, ಜಗದೇವ ಗುತ್ತೇದಾರ, ಜಿ.ಪಂ. ಮಾಜಿ ಸದಸ್ಯರಾದ ಶಾಂತಪ್ಪ ಕೂಡಲಗಿ, ಮರೆಪ್ಪ ಬಡಿಗೇರ, ಮುಖಂಡರಾದ ಸುಭಾಸ ಚನ್ನೂರ, ಪುಂಡಲೀಕ ಗಾಯಕವಾಡ, ಮಲ್ಲಣ್ಣ ಕೊಡಚಿ, ಭೀಮರಾಯ ನಗನೂರ, ಶಾಂತಪ್ಪ ಯಲಗೋಡ, ಸಿದ್ರಾಮ ಕಟ್ಟಿ, ಶ್ರೀಹರಿ ಕರಕಿಹಳ್ಳಿ, ಶ್ರೀಮಂತ ಧನಕರ್, ಬೆಣ್ಣೆಪ್ಪ ಕೊಂಬಿನ್, ಶರಣಬಸವ ಕಲ್ಲಾ, ಹೈಯಾಳಪ್ಪ ಗಂಗಾಕರ್, ಸಂಗಮೇಶ ಕೊಂಬಿನ್, ದವಲಪ್ಪ ಮದನ್, ರವಿ ಕುರಳಗೇರಾ, ಸಿದ್ದಪ್ಪ ಆಲೂರ, ರಾಜಶೇಖರ ಶಿಲ್ಪಿ ಭಾಗವಹಿಸಿದ್ದರು.
ಇದನ್ನೂ ಓದಿ: ಶಾಸಕ ಅವಿನಾಶ್ ಜಾಧವ್ ಅವರಿಂದ ಸಿಡಿಲು ಬಡಿದು ಮೃತಪಟ್ಟ ಕುಟುಂಬಕ್ಕೆ ಪರಿಹಾರ ಚೇಕ್ ವಿತರಣೆ
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…