ಕಲಬುರಗಿ: ಬಸವಣ್ಣನವರ ತತ್ವಾದರ್ಶ ಹಾಗೂ ಅವರ ವಿಚಾರಧಾರೆಯ ಮಾರ್ಗದಲ್ಲಿ ಸಮಾನತೆಯ ಬದುಕು ಸಾಗಿಸುವ ಅನಿವಾರ್ಯತೆ ಇವತ್ತಿನ ಮನುಕುಲಕ್ಕೆ ಅನಿವಾರ್ಯವಾಗಿದೆ ಎಂಬ ಅಭಿಪ್ರಾಯವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳು ಹಾಗೂ ಬಿಜೆಪಿ ಮುಖಂಡರಾದ ಪ್ರೊ.ಯಶವಂತರಾಯ ಅಷ್ಠಗಿ ವ್ಯಕ್ತಪಡಿಸಿದರು.
ಕಮಲಾಪುರ ತಾಲೂಕಿನ ಕಲಮೂಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹಾಮಾನವತಾವಾದಿ ಬಸವಣ್ಣನವರ 889 ನೇಯ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಮನುಷ್ಯನು ಉದ್ಯೋಗಶೀಲನಾಗಬೇಕು. ಪ್ರತಿಯೊಬ್ಬರು ತನಗೆ, ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಆವಶ್ಯಕವಾದ ಪ್ರತಿಯೊಂದು ಕೆಲಸವನ್ನೂ ಶ್ರದ್ಧೆಯಿಂದ ಮಾಡಿದರೆ ಬಸವಣ್ಣನವರ ತತ್ವ ಸಿದ್ಧಾಂತ ಪಾಲಿಸಿದಂತಾಗುತ್ತದೆ ಎಂದು ಪ್ರೊ.ಯಶವಂತರಾಯ ಅಷ್ಠಗಿ ಹೇಳಿದರು.
ಮೂಢನಂಬಿಕೆ,ಕಂದಾಚಾರ ಮತ್ತು ಗೊಡ್ಡು ಸಂಪ್ರದಾಯಗಳ ವಿರುದ್ಧ ಹೋರಾಡಿದ ಮಹಾನ ದಾರ್ಶನಿಕ ವಿಶ್ವಗುರು ಬಸವಣ್ಣನವರು ಹಾಗೂ ಅವರ ಸಮಕಾಲೀನ ಶರಣರು ಎಂದು ಪತ್ರಕರ್ತ ಹಾಗೂ ಕಮಲಾಪುರ ಕಸಾಪ ಗೌರವ ಕಾರ್ಯದರ್ಶಿ ಸುರೇಶ ಲೆಂಗಟಿ ನುಡಿದರು.
ಕಾರ್ಯಕ್ರಮದಲ್ಲಿ, ಬಿಜೆಪಿಯ ಹಿರಿಯ ಮುಖಂಡ ಸುಭಾಷ ಬಿರಾದಾರ ಕಮಲಾಪುರ ಮತ್ತು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶರಣಬಸಪ್ಪ ಪಾಟೀಲ ಕಮಲಾಪುರ, ಕಲಬುರಗಿ ಎಪಿಎಮಸಿ ಉಪಾಧ್ಯಕ್ಷ ರಾಜಕುಮಾರ ಕೋಟೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಯಾಣರಾವ ಕೋಟೆ ವಹಿಸಿದ್ದರು.
ಬಸಯ್ಯಸ್ವಾಮಿ, ಆನಂದ ಬುಕ್ಕನ್ ರಾಜಕುಮಾರ ಚಕ್ರಕರ್, ರವೀಂದ್ರ ರೆಡ್ಡಿ ಶಿಕ್ಷಕರು, ರಾಜು ಪಾಟೀಲ್, ಹಣಮಂತ ತಂಗಾ, ಶ್ರೀಪತಿ ನಾಟಿಕರ್, ರಾಚಪ್ಪ ಕಲಕೋರಿ, ರವೀಂದ್ರ ಕರಿಕಲ್,ಚಂದರ ರೆಡ್ಡಿ, ಜಗನ್ನಾಥ ಕೋಟಿ, ವೀರೇಶ್ ಕೋಟಿ, ಮಲ್ಲಿಕಾರ್ಜುನ್ ಚಿಮ್ಮನಚೋಡ, ಸೋಮಶೇಖರ ಭಾಗವಹಿಸಿದ್ದರು.
ಶಿಕ್ಷಕ ಅಶೋಕ್ ಕೋಟಿ ನಿರುಪಿಸಿದರು, ವೀರೇಶ್ ಕೋಟಿ ಸ್ವಾಗತಿಸಿದರು, ಭೀಮರಾವ ಜಮಾದಾರ ವಂದಿಸಿದರು. ಕಲಮೂಡ ಬಸವ ಜಯಂತ್ಯುತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
ಶರಣರು ವೃತ್ತಿಯಲ್ಲಿ ಬೇರೆ: ಬೇರೆಯಾಗಿದ್ದರೂ ಸಹ ಮೋಕ್ಷ ಸಾಧನೆಯ ಮಾರ್ಗದಲ್ಲಿ ಎಲ್ಲರು ಒಂದೇ ಆಗಿದ್ದರು. ಅನುಭವ ಮಂಟಪದ ಶರಣಗೋಷ್ಠಿಗೆ ಬಂದಾಗ ಪ್ರಧಾನ ಮಂತ್ರಿ ಬಸವಣ್ಣನವರ ಸರಿಸಮರಾಗಿ ಕುಳಿತು ಅಧ್ಯಾತ್ಮ ಚರ್ಚೆಯಲ್ಲಿ ಭಾಗವಹಿಸುತ್ತಿದ್ದುದು ಇಂದಿನ ಪ್ರಜಾಪ್ರಭುತ್ವದ ಪರಿಕಲ್ಪನೆಯಾಗಿತ್ತು. ರಾಜಕುಮಾರ ಕೋಟೆ ಎಪಿಎಮಸಿ ಉಪಾಧ್ಯಕ್ಷರು, ಕಲಬುರಗಿ.