ಕಲಬುರಗಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಖರ್ಗೆ ಅವರ ಪ್ರತಿಸ್ಪರ್ಧೆಯಾಗಿ ನಿಂತಿದ್ದೆ. ತಮಗೆ ಯಡಿಯೂರಪ್ಪ ದೋಖಾ ಮಾಡಿದ್ದರಿಂದ ಪಕ್ಷ ಬಿಡಬೇಕಾಯ್ತು ಎಂದು ಮಾಜಿ ಸಚಿವ ರೇವೂ ನಾಯಕ ಬೆಳಮಗಿ ಹೇಳಿದ್ದರು.
ಅವರು ಜಿಲ್ಲೆಯ ಮಹಾಗಾಂವ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ, ಕಾಂಗ್ರೆಸ್ ಚುನಾವಣಾ ಪ್ರಚಾರಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಒಂದು ಕಾಲದ ಖರ್ಗೆಯವರ ಪ್ರತಿಸ್ಪರ್ಧಿಯಾಗಿದ್ದ ಕಣದಲ್ಲಿ ಪರ ಪ್ರಚಾರಕ್ಕೆ ಬರಲು ಅವರ ಅಭಿವೃದ್ದಿಪರ ನಿಲುವು ಕಾರಣವಾಯಿತು ಹಾಗಾಗಿ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ನಂತರ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜು ಖರ್ಗೆ ಅವರು ಮಾತನಾಡಿ, ದೇಶದಲ್ಲಿ ಸಂವಿಧಾನ ಉಳಿಯಬೇಕೆಂದರೆ ಕಾಂಗ್ರೇಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಅನಿವಾರ್ಯ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಚುನಾವಣೆ ಪ್ರಚಾರದಲ್ಲಿ ಹೇಳಿದ್ದರು.
ಅವರು ಜಿಲ್ಲೆಯ ಮಹಾಗಾಂವ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸಂವಿಧಾನ ಹಾಗೂ ಕಾನೂನಿನ ಪ್ರಕಾರ ದೇಶ ನಡೆಯಬೇಕು ಹಾಗೂ ಎಲ್ಲ ಧರ್ಮದ- ಜಾತಿಯ ಜನರನ್ನು ಒಳಗೊಂಡು ದೇಶ ಸಾಗಬೇಕು ಎಂದು ನಾವು ಆಪೇಕ್ಷೆಪಟ್ಟರೇ ಮೋದಿ ಮನುವಾದದ ಹಾಗೂ ಶ್ರೀಮಂತರ ಪ್ರಕಾರ ದೇಶ ನಡೆಯಬೇಕು ಎನ್ನುತ್ತಾರೆ. ಈ ಕಾರಣದಿಂದಾಗಿ ಮೋದಿಗೂ ನಮಗೂ ಸೈದ್ದಾಂತಿಕ ಭಿನ್ನಾಭಿಪ್ರಾಯಗಳಿವೆ ಹೊರತು ವೈಯಕ್ತಿಕವಾಗಿಲ್ಲ ಎಂದು ಹೇಳಿದರು.
ಮಹಾಗಾಂವ್ ನಲ್ಲಿ ಹಲವರು ತಮ್ಮ ವೈಯಕ್ತಿಕ ಜೀವನ ತ್ಯಾಗ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅವರ ಹೋರಾಟವನ್ನು ನೆನೆದು ಮತದಾರರು ಸ್ವಾತಂತ್ರ್ಯದ ಆಶಯವನ್ನು ಹಾಗೂ ಸಂವಿಧಾನವನ್ನು ಎತ್ತಿ ಹಿಡಿಯಬೇಕು ಎಂದು ಮನವಿ ಮಾಡಿದರು. ಕಲಬುರಗಿಗಾಗಿ ಮೋದಿ ಕೊಡುಗೆ ಏನಿದೆ? ಎಂದು ಪ್ರಶ್ನಿಸಿದ ಖರ್ಗೆ, 27 ನೂತನ ರೈಲುಗಳ ಓಡಾಟ, ಗದಗ-ವಾಡಿ ನಡುವೆ ನೂತನ ರೈಲು ಮಾರ್ಗ, ವಿಜಯಪುರ- ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಮಾಡಿದ್ದು ಮೋದಿನಾ? ಎಂದು ಪ್ರಶ್ನಿಸಿ ಈ ಎಲ್ಲ ಕೆಲಸಗಳನ್ನು ಯಾರೂ ಹೇಳದೆ ಮಾಡಿಸಿದ್ದೇನೆ ಎಂದು ಹೇಳಿದರು.
ವಾರಣಾಸಿಗೆ ಬೆಂಗಳೂರಿನಿಂದ ನೇರ ರೈಲು ಸೇವೆಯಿಲ್ಲ ಅದನ್ನು ಮಾಡಿಸಿ ಎಂದು ಸ್ವಾಮಿಜಿಯೊಬ್ಬರು ಕೇಳಿದ್ದರಿಂದ ನೂತನ ರೈಲು ಪ್ರಾರಂಭಿಸಿದೆ. ಇದನ್ನು ಹೊರತುಪಡಿಸಿ ಮಿಕ್ಕೆಲ್ಲ ನೂತನ ರೈಲುಗಳನ್ನು ನಾನು ಸ್ವಇಚ್ಛೆಯಿಂದ ಪ್ರಾರಂಭಿಸಿದೆ ಎಂದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಕೆ.ಬಿ.ಶಾಣಪ್ಪ, ಜಲಜಾ ನಾಯಕ್, ವಿಜಯಕುಮಾರ್ ರಾಮಕೃಷ್ಣ ಮತ್ತಿತರಿದ್ದರು.