ಗಣಿತ,ವಿಜ್ಞಾನ ದಲ್ಲಿ 100/100ರ ಸಂಭ್ರಮ

0
31

ಕಲಬುರಗಿ: ಸಾಧನೆ ಎಂಬುದು ಮೈಗಳ್ಳರ ಸೊತ್ತಾಗದೆ ಸತತ ಪ್ರಯತ್ನ, ಪರಿಶ್ರಮವಾದಿಗಳ ಸೊತ್ತಾಗುತ್ತದೆ ಎಂದು ಪ್ರೊ. ಎಸ್. ಕೆ. ಕುಂಬಾರ ಹೇಳಿದರು.

ನಗರದ ಗುರು ಶಿಷ್ಯರ ಶಿಕ್ಷಣ ತರಬೇತಿ ಕೇಂದ್ರದ, ಕುಂಬಾರ ಕ್ಲಾಸೆಸ್ ವತಿಯಿಂದ ಹತ್ತನೇ ತರಗತಿಯಲ್ಲಿ ರಾಜ್ಯಕ್ಕೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸುವ “ವಿನ್ನರ್ಸ್ ಡೇ”ಸಮಾರಂಭದಲ್ಲಿ ಮಾತನಾಡುತ್ತಾ ಕಲಬುರಗಿಯ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದಲ್ಲಿಯೇ ಹೆಚ್ಚು ಅಂಕ ಪಡೆದ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ.ವಿದ್ಯಾರ್ಥಿಗಳ ಸಾಧನೆಗೆ ತಾಯಿ ತಂದೆ ಹಾಗೂ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ.

Contact Your\'s Advertisement; 9902492681

ಉತ್ತಮವಾದ ಕಾರ್ಯ ಮಾಡಿ ಸಂಸ್ಕಾರವಂತ ಸಮಾಜ ನಿರ್ಮಿಸುವದರೊಂದಿಗೆ ಹೆತ್ತವರ ಋಣ ತೀರಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾದ ಆರ್ ಎಸ್ ಪಾಟೀಲ ಮಾತನಾಡುತ್ತಾ ನಿಸ್ವಾರ್ಥ ಸೇವೆಯಿಂದ ಕಲಬುರಗಿ ಜಿಲ್ಲೆಯಲ್ಲಿಯೇ ಜ್ಞಾನದ ಜ್ಯೋತಿ ಹಚ್ಚುತ್ತಿರುವ ಎಸ್ ಕೆ ಕುಂಬಾರ ಅವರ ಕಾರ್ಯ ಶ್ಲಾಘನೀಯ.ಹಲವಾರು ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕೊಡುವುದರೊಂದಿಗೆ ಜ್ಞಾನ ದಾಸೋಹದ ಭಂಡಾರವಾಗಿದ್ದಾರೆ. ಇವರಲ್ಲಿ ಜ್ಞಾನ ಪಡೆದ ಅನೇಕ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಾ ನಮ್ಮ ಭಾಗಕ್ಕೆ ಕೀರ್ತಿ ತರುತ್ತಲಿರುವುದು ಹೆಮ್ಮೆಯ ವಿಷಯ ಎಂದು ಮಾರ್ಮಿಕವಾಗಿ ನುಡಿದರು.

ಮುಖ್ಯ ಅತಿಥಿಗಳಾಗಿ ಜನಪರ ಹೋರಾಟಗಾರ, ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ, ನ್ಯಾಯವಾದಿ ಸಂಜೀವಕುಮಾರ ಡೊಂಗರಗಾಂವ, ಡಿ ಕೆ ಪಾಟೀಲ,ಬ್ರಹ್ಮಾನಂದ, ವಿಜಯ ಕಳಶೆಟ್ಟಿ, ದಾನು ಹಿಪ್ಪರಗಿ, ಕವಿತಾ ಎಸ್ ಕೆ ಆಗಮಿಸಿದರು.ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೂ ಹಾಗೂ ಪಾಲಕರಿಗೂ ವಿಶೇಷವಾಗಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಆನಂದ, ವಿನಯ,ತರಬೇತಿ ಕೇಂದ್ರದ ಸಿಬ್ಬಂದಿಗಳು,ವಿದ್ಯಾರ್ಥಿಗಳು, ಪಾಲಕರು ಸೇರಿದಂತೆ ಬಡಾವಣೆಯ ಹಲವಾರು ಜನ ಭಾಗವಹಿಸಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here