ಪಠ್ಯಪುಸ್ತಕ ಮುರುಪರಿಷ್ಕರಣೆ ವಿರೋಧಿಸಿ ಕಲಬುರಗಿಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

0
44

ಕಲಬುರಗಿ: ಪಠ್ಯ ಪುಸ್ತಕ ಕೇಸರೀಕರಣ ಹಾಗೂ ಶಿಕ್ಷಣದ ಕೋಮುವಾದೀಕರಣ ವಿರೋಧಿಸಿ ವಿವಾದಿತ ಶಾಲಾ ಪಠ್ಯಪುಸ್ತಕಗಳ ಮುರುಪರಿಷ್ಕರಣೆಯ ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿ ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಭಾರತ ವಿದ್ಯಾರ್ಥಿ ಫೆಡರೇಷನ್ ಮತ್ತು ಕರ್ನಾಟಕ ಯುವ ಮುನ್ನಡೆ ಜಿಲ್ಲಾ ಸಮಿತಿ ಜಂಟಿಯಾಗಿ ಪ್ರತಿಭಟನೆ ನಡೆಸಿದರು.

ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣೆಯ ಹೆಸರಿನಲ್ಲಿ ವಿದ್ಯಾರ್ಥಿಗಳ ಪಠ್ಯಪುಸ್ತಕಗಳಲ್ಲಿ ಜಾತೀಯತೆ, ಮತೀಯವಾದ ಮತ್ತು ಸಂವಿಧಾನ ವಿರೋಧಿ ವಿಚಾರಗಳನ್ನು ತುರುಕಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಅನುಭವವಿಲ್ಲದ ಯಾವುದೇ ವಿಷಯದಲ್ಲಿಯೂ ತಜ್ಞನಲ್ಲದ ನಾಡದ್ರೋಹಿ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಬಹುತೇಕ ಒಂದೇ ಜಾತಿಗೆ ಸೇರಿದ ಪರಿಷ್ಕರಣೆ ಸಮಿತಿ ಮತ್ತು ಸಿದ್ಧಾಂತದ  9 ಜನರ ಪಠ್ಯಪುಸ್ತಕಗಳ ಮರು ಪರಿಷ್ಕರಣೆ ಶಿಫಾರಸ್ಸು ಸಮಿತಿಯನ್ನು ಸಾಮಾಜಿಕ ನ್ಯಾಯವನ್ನು ಕಡೆಗಣಿಸಿ ರಚಿಸಲಾಗಿದೆ ಎಂದು ಹೋರಾಟ ನೀರತ SFI – ಜಿಲ್ಲಾ ಸಂಚಾಲಕರಾದ ರವಿ ಸಿರಸಗಿ ಆರೋಪಿಸಿದರು.

Contact Your\'s Advertisement; 9902492681

ರೋಹಿತ್ ಚಕ್ರತೀರ್ತ ಅಧ್ಯಕ್ಷತೆಯ ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣಾ ಸಮಿತಿಯನ್ನು ಕೂಡಲೇ ರದ್ದುಪಡಿಸಬೇಕು, ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ರೂಪಿಸಿರುವ ಪಠ್ಯಪುಸ್ತಕಗಳನ್ನೇ ಮುಂದುವರಿಸಬೇಕು ಹಾಗೂ ಕೂಡಲೇ ಶಾಲೆಗಳಿಗೆ ಹಿಂದಿನ ಪಠ್ಯಪುಸ್ತಕಗಳನ್ನು ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ರಾಷ್ಟ್ರಕವಿ ಕುವೆಂಪು ಅವರನ್ನು ಹಾಗೂ ಕರ್ನಾಟಕದ ನಾಡಗೀತೆಯನ್ನು ಅಪಮಾನಿಸಿರುವ ನಾಡದ್ರೋಹಿ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಯ ವಿರುದ್ಧ ಕಾನೂನಾತ್ಮಕ ಪ್ರಕರಣ ದಾಖಲಿಸಬೇಕು ಹಾಗೂ ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು.

ಶಾಲೆ ಆರಂಭವಾಗಿ ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪಠ್ಯಪುಸ್ತಕ,ಸಮವಸ್ತ್ರ ಪೂರೈಸಲು ವಿಫಲವಾಗಿರುವ, ಪಠ್ಯಪುಸ್ತಕಗಳ ಮರುಪರಿಷ್ಕರಣೆಯ ವಿವಾದವನ್ನು ಸಂವಿಧಾನಾತ್ಮಕವಾಗಿ ನಿಭಾಯಿಸದ, ಅತ್ಯಂತ ಬೇಜವಾಬ್ದಾರಿಯುತ ವರ್ತನೆಯ ಮತ್ತು ಮಕ್ಕಳ ಶಿಕ್ಷಣದ ಜೊತೆಗೆ ಚಲ್ಲಾಟವಾಡುತ್ತಾ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಮಾರಕವಾಗಿರುವ ರಾಜ್ಯದ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರನ್ನು ಸಚಿವ ಸ್ಥಾನದಿಂದ ಕೂಡಲೇ ವಜಾಮಾಡಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ನಾಡಗೀತೆ,ನಾಡಧ್ವಜ, ರಾಷ್ಟ್ರಕವಿ ಕುವೆಂಪು, ಹಾಗೂ ಸಾಹಿತಿಗಳಾದ  ದೇವನೂರು ಮಹಾದೇವ, ಪ್ರೊ. ಬರಗೂರು ರಾಮಚಂದ್ರಪ್ಪ ಮುಂತಾದ ಸಾಹಿತಿಗಳು ಮತ್ತು ಪಠ್ಯಪುಸ್ತಕಗಳ ಮರುಪರಿಷ್ಕರಣೆಯನ್ನು ವಿರೋಧಿಸುವವರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಅಸಭ್ಯ ಮತ್ತು ಅಶ್ಲೀಲವಾದ ರೀತಿಯಲ್ಲಿ ಸಂಘಟಿತವಾದ ದಾಳಿ ನಡೆಸುತ್ತಿರುವ ಸಂಘ ಪರಿವಾರ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಿಗರ ವಿರುದ್ಧ ಕಾನೂನು ಪ್ರಕರಣ ದಾಖಲಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಸರಕಾರಕ್ಕೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ವಿಧ್ಯಾರ್ಥಿ ಸಂಘಟನೆಗಳು, ಯುವಜನ,ಮಹಿಳಾ, ಜನಪರ ಸಂಘಟನೆಗಳು ಹಾಗೂ ಪ್ರಮುಖ ಸಾಹಿತಿಗಳು, ವಿಚಾರವಾದಿಗಳು, ಕನ್ನಡಪರ, ಪ್ರಗತಿಪರ, ಪ್ರಜಾಸತ್ತಾತ್ಮಕ ಮತ್ತು ಜಾತ್ಯಾತೀತ ವ್ಯಕ್ತಿಗಳು ಮತ್ತು ಸಂಘಟನೆಗಳು ತೀಮ್ಮಾಪುರಿ ಸರ್ಕಲ್ ನಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಸುಜಾತಾ ಕುಸನೂರ್, ಪ್ರಿಯಾಂಕಾ ಮಾವಿನಕರ, ಯುವ ಮುನ್ನಡೆ  ಜಿಲ್ಲಾ ಸಂಚಾಲಕ ನಾಗೇಶ, ರೇಣುಕಾ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here