ಕಲಬುರಗಿ: ಇಂದು ಪ್ರಕೃತಿ ನಾಶದಿಂದ ಮನುಷ್ಯ ಸಹ ನಾಶ ಹೊಂದುವ ಹಂತಕ್ಕೆ ಅಡಿಯಿಡುತ್ತಿದ್ದಾನೆ. ಪರಿಸರ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡದಿದ್ದಲ್ಲಿ ಮುಂದೊಂದು ದಿನ ಭಾರೀ ಗಂಡಾಂತರ ಕಾದಿದೆ. ಪರಿಸರ ಸಕಲ ಜೀವಿಗಳಿಗೆ ಜೀವಪರವಾಗಿದೆ. ಮಾನವ ಪರಿಸರದ ಕೂಸಾಗಿರುವುದರಿಂದ ಪರಿಸರವಿಲ್ಲದೇ ನಮಗೆ ಬದುಕಿಲ್ಲ ಎಂಬ ಪರಿಜ್ಞಾನದೊಂದಿಗೆ ಸಾಗಬೇಕಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಸರದಾರ ವಲ್ಲಭಬಾಯಿ ಪಟೇಲ್ ವೃತ್ತ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿಯ ಸಂದೇಶ ಹೊತ್ತ ಕರಪತ್ರಗಳ ಸಾರ್ವಜನಿಕರಿಗೆ ವಿತರಣೆ ಮಾಡುವ ವಿಶೇಷ ಅಭಿಯಾನದ ನೇತೃತ್ವ ವಹಿಸಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯ, ಅತಿಯಾದ ಬಿಸಿಲು, ಮಳೆ ಕೊರತೆ, ಅಂತರ್ಜಲದ ಕೊರತೆ ಮುಂತಾದ ಸಮಸ್ಯೆಗಳಿಗೆ ಪರಿಸರ ಸಂರಕ್ಷಣೆಯೊಂದೇ ನಮ್ಮ ಮುಂದಿರುವ ಸೂಕ್ತ ದಾರಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ವಿಶ್ವವಿದ್ಯಾಲಯದ ಶೇಕಡಾ ೨೫ರಷ್ಟು ಆವರಣ ಹಸಿರುಮಯ: ಡಾ. ಬಿಡವೆ
ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ, ಮಾಜಿ ಮೇಯರ್ ಭೀಮರೆಡ್ಡಿ ಕುರಕುಂದಾ, ಉದ್ಯಮಿ ಕೃಷ್ಣಾಜೀ ಕುಲಕರ್ಣಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗೀರಥಿ ಗುನ್ನಾಪೂರ ಮಾತನಾಡಿ, ಶುದ್ಧವಾದ ಗಾಳಿ, ಆಹಾರ, ನೀರು ಇಂದು ನಾವು ಪಡೆಯುವುದಲ್ಲದೇ ಮುಂದಿನ ಪೀಳಿಗೆಗೂ ಉಳಿಸಿಕೊಳ್ಳುವುದು ಅತ್ಯಂತ ಅವಶ್ಯವಾಗಿದೆ. ಈಗಾಗಲೇ ಪರಿಸರದ ಮಾಲಿನ್ಯದಿಂದಾಗಿ ಕ್ಯಾನ್ಸರ್, ಚರ್ಮರೋಗ, ಉಸಿರಾಟ ತೊಂದರೆ ಮುಂತಾದ ರೋಗಗಳಿಗೆ ಮಾನವ ತುತ್ತಾಗುತ್ತಿದ್ದಾನೆ. ಹಾಗಾಗಿ ಪರಿಸರವನ್ನು ನಾವು ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆ. ವರ್ಷಕ್ಕೊಮ್ಮೆ ಪರಿಸರ ದಿನಾಚರಣೆ ಆಚರಿಸುವ ಜತೆಗೆ ಪ್ರತಿದಿನ ಪರಿಸರ ಕಾಳಜಿ ಮೆರೆಯಬೇಕಾಗಿದೆ ಎಂದ ಅವರು, ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳು ಹಮ್ಮಿಕೊಳ್ಳುವ ಜತೆಗೆ ಸಮಾಜದಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸುವ ಪ್ರಯತ್ನ ನಿಜಕ್ಕೂ ಎಲ್ಲರೂ ಮೆಚ್ಚುವಂತಹದ್ದು ಎಂದು ಮನದುಂಬಿ ಮಾತನಾಡಿದರು.
ಇದನ್ನೂ ಓದಿ: ಸರಕಾರಿ ಕಾಲೇಜುಗಳಲ್ಲಿ ಪದವಿ ಪಡೆಯುವುದೇ ಹೆಮ್ಮೆಯ ಸಂಗತಿ: ಡಾ. ಉಮೇಶ್ ಜಾಧವ
ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಶಿವರಾಜ ಅಂಡಗಿ, ಯಶವಂತರಾಯ ಅಷ್ಠಗಿ, ಶರಣರಾಜ್ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ಸಾಹಿತಿ ಡಾ.ಶರಣಪ್ಪ ಮಾಳಗೆ, ಪ್ರಮುಖರಾದ ಸೋಮಶೇಖರ ಹಿರೇಮಠ, ಬಿ.ಎಲ್.ಚವ್ಹಾಣ, ಸಂತೋಷ ಕುಡಳ್ಳಿ, ಶಿವಕುಮಾರ ಸಿ.ಎಚ್., ವಿಶ್ವನಾಥ ತೊಟ್ನಳ್ಳಿ, ತ್ರೀವೇಣಿ ಜಾಧವ, ಶಿವಲೀಲಾ ತೆಗನೂರ, ಕವಿತಾ ದೇಗಾಂವ, ವಾಣಿಶ್ರೀ ಸಗರಕರ್, ಮಾಲಾ ದಣ್ಣೂರ, ಮಾಲಾ ಕಣ್ಣಿ, ಮಲ್ಲಿಕಾರ್ಜುನ ಇಬ್ರಾಹಿಂಪೂರ, ಎಂ.ಎಸ್.ಪಾಟೀಲ ನರಿಬೋಳ, ಮಂಜುನಾಥ ಕಂಬಾಳಿಮಠ, ರೇಣುಕಾ, ಶಿವಶರಣಪ್ಪ ಹಡಪದ, ಅಭಯಪ್ರಕಾಶ, ಎಸ್.ಎಂ.ಪಟ್ಟಣಕರ್, ಸಿದ್ಧಾರಾಮ ಹಂಚನಾಳ, ವಿಜಯಕುಮಾರ ಹಾಬನೂರ, ಶಿವಶರಣ ಪರಪ್ಪಗೋಳ, ಬಸವರಾಜ ಹೆಳವರ, ಮಲ್ಲಿಕಾರ್ಜುನ ಸಂಗಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರದ ಅನೇಕ ಗಣ್ಯರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…