ಭೀಮಳ್ಳಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ

0
49

ಕಲಬುರಗಿ: ತಾಲೂಕಿನ ಭೀಮಳ್ಳಿ ಗ್ರಾಮ ಪಂಚಾಯತ್ ನಲ್ಲಿ ಜಿಲ್ಲಾ ಪಂಚಾಯತ್ ಕಲಬುರಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಲಬುರಗಿ, ತಾಲೂಕು ಪಂಚಾಯತ್ ಕಲಬುರಗಿ, ಜಲ ಜೀವನ್ ಮಿಷನ್ , ಸ್ವಚ್ಛಭಾರತ ಮಿಷನ್ ಕಾರ್ಯಕ್ರಮ ಹಾಗೂ ರೂಢಾ ಸಂಸ್ಥೆ ಕಲಬುರಗಿ ರವರ ಸಂಯುಕ್ತಾಶ್ರಯದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದನ್ನೂ ಓದಿ: ಯಂಗ್ ಇಂಡಿಯಾ ಕೆ ಬೋಲ್ ಸಿಜನ್-೨ ಪೋಸ್ಟರ್‌ ಬಿಡುಗಡೆ

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಡಾ.ರಾಜು ಕಂಬಾಳಿಮಠ ರವರು ಮಾತನಾಡುತ್ತ ಜಾಗತಿಕ ತಾಪಮಾನ ದಿನೆ ದಿನೆ ಹೆಚ್ಚಾಗುತ್ತಿರುವುದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಅಗತ್ಯವೆಂದರು. ಆದ್ದರಿಂದ ಮುಂದಿನ ಪೀಳಿಗೆಗಾಗಿ ಮರ-ಗಿಡಗಳನ್ನು ಬೆಳೆಸಲಿಕ್ಕೆ ಹೇಳಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ನಿದೇರ್ಶಕರಾದ ಶಿವಾನಂದ ಪವಾರ ರವರು ಪರಿಸರ ನಾಶದಿಂದ ಓಜೋನ್ ಪದರ ಹಾಳಾಗುತ್ತಿದ್ದು, ಈ ನಿಟ್ಟಿನಲ್ಲಿ ದಿನ ನಿತ್ಯ ಮರ-ಗಿಡ ಬೆಳೆಸಬೆಕೆಂದರು.

ಇದನ್ನೂ ಓದಿ: ಮದರ್ ತೆರೆಸಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕಾರ್ಯಕ್ರಮದ ವೇದಿಕೆ ಮೇಲೆ ಗ್ರಾ.ಪಂ. ಅಧ್ಯಕ್ಷರಾದ ರಾಮಚಂದ್ರ ಕುಂಕುಮಕರ್, ಉಪಾಧ್ಯಕ್ಷರಾದ ಮೆಹಬೂಮ ಪಟೇಲ್, ಸದಸ್ಯರಾದ ಇಸ್ಮಾಯಿಲ್ ಮೂಲಗೆ, ಶ್ರೀಕಾಂತ ಪಾಟೀಲ್, ಪ್ರಕಾಶ ಪಾಟೀಲ್ , ಸಲೀಂ ಗ್ರಾ.ಪಂ. ಕಾರ್ಯದರ್ಶಿಗಳಾದ ಶ್ರೀಮತಿ ರಾಚಮ್ಮ ಬಾಳೀ ವೇದಿಕೆ ಮೇಲೆ ಆಸೀನರಾಗಿದ್ದರು. ಕಾರ್ಯಕ್ರಮದ ಮೊದಲಿಗೆ ರೂಢಾ ಸಂಸ್ಥೆಯ ತಂಡದ ನಾಯಕರಾದ ಸಂತೋಷ ಮೂಲಗೆ ನಿರೂಪಿಸಿದರು, ದೇವಾನಂದ ಬಿ.ಹಾಲಕಾಯಿ ಸ್ವಾಗತಿಸಿದರು, ಚಿದಾನಂದ ಚಿಕ್ಕಮಠ ವಂದಿಸಿದರು.

ಇದನ್ನೂ ಓದಿ: ಕಲಬುರಗಿ: ಕಾಂಗ್ರೆಸ್ ಮುಖಂಡರ ಸಭೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here