ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ತಾಲೂಕು ಪಂಚಾಯತ್ ಸಂಭಾಗಣದಲ್ಲಿ ಇಂದು ಜಲ ಜೀವನ ಮಿಷನ್ ಕುರಿತು ಒಂದು ದಿನದ ತರಬೇತಿಯನ್ನು ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ , ರೂಢಾ ಸಂಸ್ಥೆ ರವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಆಳಂದ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಲಾಸ ರಾಜ್ ರವರು ಉದ್ಘಾಟಿಸಿ ಮಾತನಾಡುತ್ತ ಜಲ ಜೀವನ ಮಿಷನ್ ಯೋಜನೆಯ ಸದುಪಯೋಗವನ್ನು ಎಲ್ಲಾ ಗ್ರಾಮ ಪಂಚಾಯತಗಳು ಮತ್ತು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದರು. ಇದರಿಂದ ನೀರಿನ ಬವಣೆ ತಪ್ಪುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಳಂದ ಉಪ ವಿಭಾಗದ ಚಂದ್ರಮೌಳಿ ರವರು ವಹಿಸಿಕೊಂಡು ಮಾತನಾಡುತ್ತ ಜಲ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಗಳು ಜರುಗುತ್ತಿದ್ದು, ಗ್ರಾಮ ಪಂಚಾಯತಗಳು ಸಹಕಾರ ನೀಡಿದರೆ ಕಾಮಗಾರಿಗಳು ಉತ್ತಮವಾಗಿ ಸಾಗುತ್ತವೆ ಎಂದರು. ಉದ್ಘಾಟನ ಕಾರ್ಯಕ್ರಮದ ವೇದಿಕೆ ಮೇಲೆ ತಾಲೂಕು ಪಂಚಾಯತ್ ಸಹಾಯಕ ನಿದೇರ್ಶಕರಾದ ಸಂತೋಷ, ಯೋಜನಾಧಿಕಾರಿಗಳಾಧ ಶರಣಬಸಪ್ಪ, ತಾ.ಪಂ. ವ್ಯವಸ್ಥಾಪಕರಾದ ರಮೇಶ , ಹಾಗೂ ಶಿವಾನಂದ ಮಠ ರವರು ಉಪಸ್ಥಿತರಿದ್ದರು.ತದನಂತರ ಉಪನ್ಯಾಸ ಪ್ರಾರಂಭವಾಯಿತು.
. . ಜಲ ಜೀವನ್ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಡಾ.ರಾಜು ಕಂಬಾಳಿಮಠ ರವರು ಬ್ಯಾಚ್-೨ ಮತ್ತು ಬ್ಯಾಚ್-೩ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಬಿಲ್ ಕಲ್ಕೆಟರ್ ಹಾಗೂ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷರಿಗೆ ಜಲ ಜೀವನ್ ಮಿಷನ್ ಯೋಜನೆಯ ಗುರಿ ಉದ್ದೇಶ ಮತ್ತು ಯೋಜನೆಯ ತಾಂತ್ರಿಕ ಕಾರ್ಯಚರಣೆ ಮತ್ತು ಹರ್ ಘರ್ ಜಲ್ ಘೋಷಣೆ, ಮಾಡುವ ವಿಧಾನವನ್ನು ಸುದೀರ್ಘವಾಗಿ ತಿಳಿಸಿದರು.
ಯೋಜನೆಯಲ್ಲಿ ಸಮುದಾಯ ವಂತಿಕೆ ಸಂಗ್ರಹಣೆಗೆ ಬಿಲ್ ಕಲೆಕ್ಟರ್ ಹಾಗೂ ಗ್ರಾಮ ಪಂಚಾಯತಿಗಳ ಪಾತ್ರವನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಳಂದ ಸಹಾಯಕ ನಿದೇರ್ಶಕರಾದ ಶರಣಬಸವ ಮುಗಳಿ ರವರು ತಿಳಿಸಿಕೊಟ್ಟರು. ನಂತರ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ ಪಾತ್ರ ಹಾಗೂ ಸಮಿತಿಗಳು ಜಲ ಜೀವನ್ ಮಿಷನ್ ಯೋಜನೆಯಲ್ಲಿ ಕಾರ್ಯಚರಣೆ ಮತ್ತು ನಿರ್ವಹಣೆ ಮಾಡುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಲಬರಗಿ ತಾಲೂಕು ಸಹಾಯಕ ನಿದೇರ್ಶಕರಾದ ಶಿವಾನಂದ ಪವಾರ ರವರು ತಿಳಿಸಿಕೊಟ್ಟರು.
ಜಲ ಮೂಲ ಪರೀಕ್ಷೆ ಮಾಡುವ ಸಲುವಾಗಿ ಪ್ರತಿ ಗ್ರಾಮ ಪಂಚಾಯತಿಗಳಿಗೆ ಪ್ರತಿ ೬ ತಿಂಗಳಿಗೊಮ್ಮೆ ಕುಡಿಯುವ ನೀರಿನ ನೀರು ಪರೀಕ್ಷೆ ಮಾಡಲು ಎಫ್.ಟಿ.ಕೆ (ನೀರು ಪರೀಕ್ಷಿಸುವ ಕಿಟ್)ನ್ನು ಕೊಟ್ಟಿದ್ದು ಆ ಕಿಟ್ ಮೂಲಕ ಪರೀಕ್ಷೆ ಮಾಡುವ ವಿಧಾನ ಹಾಗೂ ಅದಕ್ಕೆ ಪ್ರತಿ ಗ್ರಾಮದಿಂದ ೫ ಜನ ಮಹಿಳೆಯರ ನೊಂದಣಿ ಮಾಡುವ ವಿಧಾನವನ್ನು ಹಸ್ತಕಲಾ ಸಂಸ್ಥೆಯ ತಂಡದ ನಾಯಕರಾದ ರೇಖಾ ವಾಡಿ ಮತ್ತು ರೂಢಾ ಸಂಸ್ಥೆಯ ಕಲಬುರಗಿ ಸಂಯೋಜಕರಾದ ಚಿದಾನಂದ ಚಿಕ್ಕಮಠರವರು ತಿಳಿಸಿಕೊಟ್ಟರು.
ರೂಢಾ ಸಂಸ್ಥೆಯ ಕಲಬುರಗಿ ತಂಡದ ನಾಯಕರಾದ ಸಂತೋಷ ಮೂಲಗೆ ರವರು ಘನ ಮತ್ತು ದ್ರವ ತ್ಯಾಜ ಹಾಗೂ ನೈರ್ಮಲಿಕರಣದ ಕುರಿತು ತಿಳಿಸಿಕೊಟ್ಟರು. ಕಾರ್ಯಾಗಾರದ ಮೊದಲಿಗೆ ರೂಢಾ ಸಂಸ್ಥೆಯ ಕಲಬುರಗಿ ಸಂಯೋಜಕರಾದ ದೇವಾನಂದ ಕಾರ್ಯಕ್ರಮ ನಿರೂಪಿಸಿದರು.