ಶಹಾಬಾದ: ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಪಂಯಲ್ಲಿ ಶುಕ್ರವಾರ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾವೇರಿ ಮಹಾಲಿಂಗ ಪೂಜಾರಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತೊನಸನಹಳ್ಳಿ(ಎಸ್) ಗ್ರಾಪಂಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದು ಸಜ್ಜನ್ ಹಾಗೂ ಕಾವೇರಿ ಮಹಾಲಿಂಗ ಪೂಜಾರಿ ನಾಮಪತ್ರ ಸಲ್ಲಿಸಿದರು.ನಂತರ ಸಿದ್ದು ಸಜ್ಜನ್ ನಾಮಪತ್ರ ಹಿಂಪಡೆದಿದ್ದರಿಂದ ಕಾವೇರಿ ಮಹಾಲಿಂಗ ಪೂಜಾರಿ ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಸುರೇಶ ವರ್ಮಾ ತಿಳಿಸಿದ್ದಾರೆ.
ಈ ಹಿಂದಿನ ಚುನಾವಣೆಯ ನಂತರ ಅಧ್ಯಕ್ಷರಾಗುವ ಸಂದರ್ಭದಲ್ಲಿ ಒಪ್ಪಂದದಂತೆ ೫೦-೫೦ ಅವಧಿಯ ಅಧಿಕಾರ ಹಂಚಿಕೆ ಮಾಡಲಾಗಿತ್ತು.ಆದರೆ ಅವಧಿ ಮುಗಿದರೂ ಈ ಹಿಂದಿನ ಅಧ್ಯಕ್ಷರಾದ ಸುಷ್ಮಾ ಮರಲಿಂಗ ರಾಜೀನಾಮೆ ನೀಡದ ಕಾರಣ ೧೬ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸೇಡಂ ಎಸಿಯವರಿಗೆ ದೂರು ನೀಡಿದ್ದರು.
ಸೇಡಂ ಎಸಿ ಯವರು ಜೂನ್೨೮ ರಂದು ಅವಿಶ್ವಾಸ ಮಂಡನೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.ಅದರಂತೆ ೨೨ ಸದಸ್ಯ ಬಲ ಹೊಂದಿರುವ ಗ್ರಾಪಂ ಸದಸ್ಯರಲ್ಲಿ ೧೬ ಜನ ಗ್ರಾಪಂ ಸದಸ್ಯರು ಅವಿಶ್ವಾಸ ಗೊತ್ತುವಳಿ ಪರ ಬೆಂಬಲ ವ್ಯಕ್ತಪಡಿಸಿದ್ದರಿಂದ ಅವಿಶ್ವಾಸಕ್ಕೆ ಜಯ ದೊರಕಿತ್ತು.ಅಂದು ಅಧ್ಯಕ್ಷರ ಅಧಿಕಾರವಧಿ ರದ್ದುಗೊಂಡಿದ್ದರಿಂದ ಮುಂದಿನ ಚುನಾವಣೆ ದಿನಾಂಕ ನಿಗದಿಪಡಿಸಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಈ ಚುನಾವಣೆ ನಡೆಯಲು ಕಾರಣವಾಯಿತು.
ಈ ಸಂದರ್ಭದಲ್ಲಿ ಮಾಣಿಕ್‌ಗೌಡ, ಬಸವರಾಜ ಕಣದಾಳ, ಹಣಮಂತ ಕೊಂಡಯ್ಯ, ರಾಜಶೇಖರ ಮಾಲಿಪಾಟೀಲ, ವಿರೇಶ ಅರಳಿ, ರವಿ ರಾಠೋಡ, ನಾಗರಾಜ ಕರಣಿಕ್, ಬಸವರಾಜ ಮದ್ರಿಕಿ, ಅವಿನಾಶ ಕೊಂಡಯ್ಯ, ಶರಣು ಪೂಜಾರಿ, ಹಣಮಂತ ಸಾಲಿ,ಬೆಳ್ಳಪ್ಪ ಖಣದಾಳ,ಮಲ್ಲಣ್ಣ ಮರತೂರ,ಶಿವರಾಯ, ಮೀರಲಿ ನಾಗೂರೆ, ಫಯಾಜ್,ಸಿದ್ದುಗೌಡ,ಶಿವು ಬಳ್ಳಾರಿ, ಪಿಡಿಓ ನಿಂಗಣ್ಣ ಕೆಂಭಾವಿ ಸೇರಿದಂತೆ ಅನೇಕರು ಇದ್ದರು.