ಶಹಾಬಾದ: ಭಾರತೀಯ ಜನತಾ ಪಾರ್ಟಿ ಶಹಾಬಾದ ಮಂಡಲ ಯುವಮೊರ್ಚಾ ವತಿಯಿಂದ ಅಮೃತ ಮಹೋತ್ಸವದ ಅಂಗವಾಗಿ ಶಾಸಕ ಬಸವರಾಜ ಮತ್ತಿಮಡು ಅವರ ನೇತೃತ್ವದಲ್ಲಿ ಬೈಕ್ ರ‍್ಯಾಲಿ ನಡೆಸಿದರು.
ಬೈಕ್ ರ‍್ಯಾಲಿ ಶರಣಬಸವೇಶ್ವರ ದೇವಾಲಯದಿಂದ ಆರಂಭವಾಗಿ ರೈಲಿನ ಸ್ಟೆ?ನ, ಭಾರತಚೌಕ, ವಿ. ಪಿ. ಚೌಕ, ಮಡ್ಡಿ ರೈಲ್ವೆ ಗೇಟ, ಶ್ರೀ ಬಸವೇಶ್ವರ ಚೌಕ, ಶಾಸ್ತ್ರಿ ಚೌಕ, ಶ್ರೀ ರಾಮ ಚೌಕ, ನೆಹರು ಚೌಕ ಮುಖಾಂತರ ಶರಣಬಸವೇಶ್ವರ ದೇವಾಲಯದಲ್ಲಿ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಸವರಾಜ ಮತ್ತಿಮಡು, ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಪೀಳಿಗೆಯ ಮೇಲಿದೆ.ಅಲ್ಲದೇ ತಿರಂಗಾ ಮಹೋತ್ಸವ ರ‍್ಯಾಲಿಯಲ್ಲಿ ಶಾಲಾ-ಕಾಲೇಜಿನ ಮಕ್ಕಳು ಅತ್ಯಂತ ಉತ್ಸಾಹ, ದೇಶಾಭಿಮಾನದಿಂದ ಭಾಗಿಯಾಗಿ ಜೈಘೋಷ ಕೂಗುತ್ತಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.
ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಜಿಲ್ಲಾ ಯುವಮೊರ್ಚಾ ಅಧ್ಯಕ್ಷ ಪ್ರವೀಣ ತೆಗನೂರ, ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಗೋಳೆದ, ಕಾರ್ಯದರ್ಶಿ ರಾಹುಲ ಬಬಲಾದ, ಮಂಡಲ ಯುವ ಮೋರ್ಚಾ ಅಧ್ಯಕ್ಷ ದೀನೇಶ ಗೌಳಿ, ನರೇಂದ್ರ ವರ್ಮಾ, ಗೊರಕನಾಥ ಶಾಖಾಪುರ, ನಾಗರಾಜ ಮೆಲಗಿರಿ, ನಿಂಗಣ್ಣ ಹುಳಗೋಳಕರ, ಹರ್ಜಿತಸಿಂಗ್ ಭಾಟಿಯಾ, ಮಹಾದೇವ ಗೋಬ್ಬೂರಕರ, ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ಬಸವರಾಜ ಬಿರಾದಾರ, ದೇವದಾಸ ಜಾಧವ, ಚಂದ್ರಕಾಂತ ಸುಬೆದಾರ, ರವಿ ರಾಠೋಡ, ದತ್ತಾತ್ರೇಯ ಫಂಡ, ಜಗದೇವ ಸುಬೆದಾರ, ಮಹೇಶ್ ಯಲೆರಿ, ರಾಕೇಶ್ ಮಿಶ್ರ, ಶರಣು ಕೌಲಗಿ, ಆಶೀ? ಮಂತ್ರಿ ಸಂಗಮೇಶ ಪಟ್ಟೆದಾರ, ಉಮೇಶ್ ನಿಂಬಾಳ್ಕರ್ ಅಮೂಲ ಪೋತ್ದಾರ, ಉದಯ ನಂದ ಗೌಳಿ, ವಿನಾಯಕ ಗೌಳಿ, ಸುರೇಂದ್ರ ಗೌಳಿ, ರೇವಣಸಿದ್ದ ಮತ್ತಿಮಡು, ಆದಿತ್ಯ ವರ್ಮ, ಸತೀಶ್ ರಾಠಿ, ವಿನಯ ವರ್ಮ, ಶೀವು ತಳವಾರ, ಲೋಹೀತ ಮಲಖೇಡ, ಮೌನೇಶ ಕೋಡ್ಲಿ, ನಾಗರಾಜ ಯಡ್ರಾಮಿ, ವಿಕ್ರಮ ಮಾಲಗತ್ತಿ, ನವೀನ ಸಿಪ್ಪಿ, ಅವಿನಾಶ್ ಕೊಂಡಯ್ಯ, ವಿಶ್ವರಾಧ್ಯ ಗುತ್ತೆದಾರ ಗಿರಿರಾಜ್ ಪವಾರ, ಮಲ್ಲು ರಾಪನೂರ, ಸುರೇಂದ್ರ ಗೌಳಿ, ಅಶೋಕ ದೇವಕರ, ಶಾಮ ದೇವಕರ, ಅನಂದ ಸುಲಳ್ಳಿ, ಅಂಬರೀಶ್ ಕಲ್ಯಾಣಿ, ಸಿದ್ದು ಸಜ್ಜನ, ಸುರೇಶ್ ಹಳ್ಳಿ, ಹಲವಾರು ಯುವ ಕಾರ್ಯಕರ್ತರು ಭಾಗವಹಿಸಿದ್ದರು.