ಅರಸುತನ ಮೇಲಲ್ಲ; ಅಗಸತನ ಕೀಳಲ್ಲ: ಸತ್ಯಂಪೇಟೆ

0
45

ಕಲಬುರಗಿ: ಶಿವಶರಣರ ಹಾಗೂ ಕಾಯಕದಲ್ಲಿ ನಿಷ್ಠೆಯುಳ್ಳವರ ಮೈಲಿಗೆಯ ಬಟ್ಟೆಗಳನ್ನು ಮಡಿ ಮಾಡಿ ಮುಟ್ಟಿಸುವ ಕಾರ್ಯ ಮಾಡುತ್ತಿದ್ದ ಮಡಿವಾಳ ಮಾಚಿದೇವರು ಮಡಿ ಬಟ್ಟೆ ಹೊತ್ತುಕೊಂಡು ವೀರಗಂಟೆ ಬಾರಸುತ್ತ ಭಕ್ತರಲ್ಲವರು ತಮ್ಮನ್ನು ಮುಟ್ಟಬಾಋದು ಎಂಬ ಷರತ್ತನ್ನು ವಿಧಿಸಿಕೊಂಡಿದ್ದರು ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಯಪಟ್ಟರು.

ವಚನನೋತ್ಸವ ಸಮಿತಿ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ನಗರದ ಬಸವೇಶ್ವರ ಬಡಾವಣೆಯ ಸೂರ್ಯಪ್ರಕಾಶ ಕಲಗುರ್ಕಿ ಅವರ ಮನೆಯಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಶರಣರ ವಚನಗಳ ಉಪನ್ಯಾಸ ಮಾಲೆಯಲ್ಲಿ ಮಡಿವಾಳ ಮಾಚಿದೇವರ “ಅರಸಿನ ಭಕ್ತಿ ಅಹಂಕಾರದಲ್ಲಿ ಹೋಯಿತ್ತು” ಎಂಬ ವಚನ ಕುರಿತು ಮಾತನಾಡಿದ ಅವರು, “ಅರಸುತನ ಮೇಲಲ್ಲ; ಅಗಸತನ ಕೀಳಲ್ಲ” ಎಂಬುದನ್ನು ಜನಕ್ಕೆ ಸಾರಿದರು ಎಂದು ತಿಳಿಸಿದರು.

Contact Your\'s Advertisement; 9902492681

ಬಟ್ಟೆಗೆ ಅಂಟಿದ ಕೊಳೆ ತೊಳೆಯುವುದರ ಜೊತೆಗೆ ಮನದ ಮೈಲಿಗೆ ತೊಳೆಯುವ ಕಾರ್ಯ ಮಾಡಿದ ಮಡಿವಾಳ ಮಾಚಿದೇವರು, ಭಕ್ತಿ ಎಂಬುದು ತೋರುಂಬವ ಲಾಭವಲ್ಲ. ಕಾಯಾ-ವಾಚಾ ಶುದ್ಧವಾಗಿಟ್ಟುಕೊಳ್ಳಬೇಕು. ಢಾಂಬಿಕ ಭಕ್ತಿಯನ್ನು ದೇವರು ಮೆಚ್ಚುವುದಿಲ್ಲ. ಪ್ರಕೃತಿ ಧರ್ಮದಂತೆ ಸರಳ-ಸಹಜ ಧರ್ಮವನ್ನು ಎಲ್ಲರೂ ಪರಿಪಾಲಿಸುವಂತೆ ಹೇಳಿದ ಮಾಚಿದೇವರು ಕಾಯಕ ಹಿಮಾಚಲವಾಗಿದ್ದರು ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಅಧಿಕಾರಿ ನಾಗಣ್ಣ ಗಣಜಲಖೇಡ ಮಾತನಾಡಿ, ಶರಣರ ವಚನಗಳು ಅದರಕ್ಕೆ ಕಹಿ ಉದರಕ್ಕೆ ಸಿಹಿಯಾಗಿವೆ. ಗುರು ವ್ಯಕ್ತಿಯಲ್ಲ. ಅರಿವು ನೀಡುವವರೆ ಗುರುಗಳು. ಗುರು ಮನಸ್ಸಿನ ತಾಪ ಕಳೆಯಬೇಕು ಎಂದು ಹೇಳಿದರು. ಶಿವಲೀಲಾ ಕಲಗುರ್ಕಿ ಸ್ವಾಗತಿಸಿದರು. ಈರಣ್ಣ ತೊರವಿ ನಿರೂಪಿಸಿದರು. ಶಿವಶರಣಪ್ಪ ಕೋಳಾರ ವಂದಿಸಿದರು. ಡಾ. ಸಂಗಮೇಶ ಹಿರೇಮಠ, ರುದ್ರಪ್ಪ ಪಾಟೀಲ, ಬಸವರಾಜ ಆವಂಟಿ, ನಾಗೀಂದ್ರಪ್ಪ, ವಿ.ಎಸ್. ರಟಕಲ್ ಸೇರಿದಂತೆ ಬಡಾವಣೆಯ ನಿವಾಸಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here