ಸುರಪುರ :ಅಗಲಿದ ಚೇತನಗಳ ದಿವ್ಯ ಸ್ಮರಣೆಸಗರನಾ:ಡ ಸಿರಿ ಪ್ರಶಸ್ತಿ ಪ್ರದಾನ

0
9
ಸಗರನಾಡ ಸಿರಿ ಪ್ರಶಸ್ತಿ : ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಶ್ರೀಹರಿರಾವ ಆದವಾನಿ, ನಬೀಲಾಲ್ ಮಕಾನದಾರ, ಪ್ರಕಾಶಚಂದ ಜೈನ, ಪ್ರಕಾಶ ಅಂಗಡಿ, ನಿಂಗನಗೌಡ ದೇಸಾಯಿ,ವೆಂಕಟೇಶ ಕುಲಕರ್ಣಿ, ಸಿದ್ದಯ್ಯ ಪಾಟೀಲ, ದಯಾನಂದ ಜಮಾದಾರ,ನಾಟಕಕಾರ ಮಲ್ಲೇಶಿ ಕೋನಾಳ, ಕಾಳಪ್ಪ ಪತ್ತಾರ, ಅಶೋಕ.ಕೆ ಹಾಗೂ ರಾಜೇಶ ಶಾಬಾದಿ ಇವರಿಗೆ ಸಗರನಾಡ ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ಹಾಗೂ ಲೇಖಕ ಈಶ್ವರ ಶಹಾಪುರಕರ ವಿರಚಿತ “ನೂರೊಂದು ನೆನಪು ಹೃದಯಾಳದಿಂದ” ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಸುರಪುರ:ಜಾಗೃತಿ ಸಮಾಜ ಸೇವಾ ಸಂಘದ ವತಿಯಿಂದ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಅಗಲಿತ ಚೇತನರ ದಿವ್ಯ ಸ್ಮರಣೆ ಹಾಗೂ ಸಗರನಾಡ ಸಿರಿ ಪ್ರಶಸ್ತಿ ಪ್ರದಾನ ಮತ್ತು ಸಾಹಿತಿ ಈಶ್ವರ ದೇವರಗೋನಾಲ ಅವರ ನೂರೊಂದು ನೆನಪು ಹೃದಯಾಳದಿಂದ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಪಬ್ಲಿಕ್ ರಿಕ್ರಿಯೇಷನ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಮಾತನಾಡಿ, ಕನ್ನಡ ಸಾಹಿತ್ಯ ಸಂಘ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರವರು ಸಾಹಿತ್ಯ ಕ್ಷೇತ್ರದ ಮೂಲಕ ಸಾಕಷ್ಟು ಹೆಸರು ಮಾಡಿದ್ದು ಇದಕ್ಕೆ ಈ ಭಾಗದ ಸಾಹಿತಿಗಳು ನೀಡಿದ ಸಹಕಾರವೇ ಕಾರಣ ಎಂದು ಹೇಳಿದರು, ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ನೂರನೇ ವರ್ಷ ಆಚರಿಸಿಕೊಳ್ಳುತ್ತಿದ್ದು ಸವಿ ನೆನಪಿಗಾಗಿ ಗರುಡಾದ್ರಿ ಕಲಾ ಮಂದಿರವನ್ನು ನಿರ್ಮಿಸಲು ಕೊಡುಗೆ ನೀಡಿದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರವರ ಪುತ್ಥಳಿಯನ್ನು ಸ್ಥಾಪಿಸಲಾಗುವುದು,ಇನ್ನೂ ಕೆಲವು ದಿನಗಳಲ್ಲಿ ಪುತ್ಥಳಿ ಆಗಮಿಸಲಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿದ್ದ ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ ಮಾತನಾಡಿ, ಮಾತನಾಡಿ ವೀರತ್ವ, ಶೂರತನಕ್ಕೆ ಪ್ರಸಿದ್ಧಿಯಾಗಿರುವ ಐತಿಹಾಸಿಕ ಸುರಪುರ ಸಂಸ್ಥಾನ ನಗರಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಹಿರಿಮೆ ಹೊಂದಿದ್ದು ಇಲ್ಲಿನ ವಾತಾವರಣ ಹಾಗೂ ಮಣ್ಣಿನ ಕಣ ಕಣದಲ್ಲಿ ಸಾಹಿತ್ಯ ಉಳಿದುಕೊಂಡಿದೆ, ಈ ಭಾಗದಲ್ಲಿ ಅನೇಕ ಜನ ಪ್ರತಿಭಾವಂತ ಸಾಹಿತಿಗಳು ಆಗಿ ಹೋಗಿದ್ದಾರೆ ಅವರ‍್ಯಾರೂ ಪ್ರಶಸ್ತಿಗಾಗಿ ಬರೆಯಲಿಲ್ಲ ಇಂದಿಗೂ ತಮ್ಮ ಕೃತಿಗಳ ಮೂಲಕ ಈ ಭಾಗದಲ್ಲಿ ಜೀವಂತವಾಗಿದ್ದಾರೆ ಎಂದು ಹೇಳಿದರು.

ಸಾಂಸ್ಕೃತಿಕ ರಾಯಭಾರಿ ಎಂದು ಕರೆಯಿಸಿಕೊಂಡ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಸೇರಿದಂತೆ ತಾಲೂಕಿನ ಹಿರಿಯ ಸಾಹಿತಿಗಳ ಅಗಲಿಕೆಯಿಂದ ಈ ಭಾಗದ ಸಾಹಿತ್ಯ ಕ್ಷೇತ್ರದಲ್ಲಿ ಒಂದು ರೀತಿಯಲ್ಲಿ ಶೂನ್ಯ ಆವರಿಸಿದ್ದು ಸಾಹಿತ್ಯ ಕ್ಷೇತ್ರ ಖಜಾನೆ ಖಾಲಿಗೊಂಡ ಅನುಭವವಾಗುತ್ತಿದೆ. ಸಾಹಿತಿಗಳಾದ ಎ.ಕೃಷ್ಣಾ, ಬಸವರಾಜ ರುಮಾಲ, ಪಾಂಡುರಂಗ ಚಿನ್ನಾಕಾರ, ಕೆ.ವೀರಪ್ಪ, ಕಾಶೀನಾಥ ಬಣಗಾರ, ಬಸವೇಶ್ವರನಾಥ ಸೂಗುರುಮಠ, ಈಶ್ವರಯ್ಯ ಮಠ, ಕೆ.ಬೀರಣ್ಣ, ಲಕ್ಷ್ಮೀಕಾಂತ ಕುಲಕರ್ಣಿ ಏವೂರು, ಶರಣಪ್ಪ ಕೋನಾಳ ಮುಂತಾದವರನ್ನು ಕಳೆದ ೨ವರ್ಷಗಳಲ್ಲಿ ಹಾಗೂ ಕೋವಿಡ್ ಸಂದರ್ಭದಲ್ಲಿ ನಾವೆಲ್ಲರೂ ಕಳೆದುಕೊಂಡಿದ್ದು ಇದರಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸ್ಮರಿಸಿಕೊಂಡರು.

ಅತಿಥಿಗಳಾಗಿ ಭಾಗವಹಿಸಿದ್ದ ಹೈಕೋರ್ಟ ನ್ಯಾಯವಾದಿ ಜೆ.ಅಗಸ್ಟಿನ್, ಕಲಬುರಗಿಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ,ಹಿರಿಯ ಪತ್ರಕರ್ತ ಸುಭಾಸ ಬಣಗಾರ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಬಸವ ಯಾಳವಾರ,ಕೆಂಭಾವಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಮಡಿವಾಳಪ್ಪ ಪಾಟೀಲ್, ಪುಸ್ತಕ ಲೇಖಕರಾದ ಈಶ್ವರ ಶಹಾಪುರಕರ, ಪರಮಣ್ಣಗೌಡ ಕೋನಾಳ ಮಾತನಾಡಿದರು ಹಾಗೂ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಮಾತನಾಡಿದರು,

ಪ್ರಮುಖರಾದ ರಾಜಾ ಹರ್ಷವರ್ಧನ ನಾಯಕ, ಆನಂದದಾಸ ವಂಶಸ್ಥರಾದ ರಾಘವೇಂದ್ರಾಚಾರ್ಯ ದಾಸಪ್ಪ ರಾಯಚೂರು, ಹಿರಿಯ ಸಾಹಿತಿಗಳಾಗದ ನಾಗಲಿಂಗಪ್ಪ ಶಹಾಪುರಕರ, ಶಾಂತಪ್ಪ ಬೂದಿಹಾಳ, ಶಿವಕುಮಾರ ಮಸ್ಕಿ, ಜಯಲಲಿತಾ ಪಾಟೀಲ, ಶರಣಗೌಡ ಪಾಟೀಲ ಜೈನಾಪುರ, ಕುತುಬುದ್ದಿನ್ ಅಮ್ಮಾಪುರ, ಶಿವರಾಜ ಅಂಡಗಿ ಇತರರು ವೇದಿಕೆಯಲ್ಲಿದ್ದರು.

ಎ.ಕಮಲಾಕರ ಸ್ವಾಗತಿಸಿದರು ಶ್ರೀಹರಿರಾವ ಆದವಾನಿ ನಾಡಗೀತೆ ಹಾಡಿದರು ದೊಡ್ಡಮಲ್ಲಿಕಾರ್ಜುನ ಉದ್ದಾರ ಪ್ರಾಸ್ತಾವಿಕವಾಗಿ ಮಾತನಾಡಿದರು ದೇವು ಹೆಬ್ಬಾಳ ನಿರೂಪಿಸಿದರು ವಿಜಯಕುಮಾರ ಬಣಗಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here