ಕಲಬುರಗಿ: ಆಡಳಿತಾರೂಢ ಬಿಜೆಪಿ ಸರ್ಕಾರಜನಪರ ಕೆಲಸ ಮಾಡುವುದನ್ನು ಕೈ ಬಿಟ್ಟುಜನಪರ ಕೆಲಸ ಮಾಡುವ, ಸರ್ಕಾರವನ್ನು ಪ್ರಶ್ನೆ ಮಾಡುವ ವಿರೋಧ ಪಕ್ಷದ ಶಾಸಕ ಪ್ರಿಯಾಂಕ್‌ಖರ್ಗೆ ವಿರುದ್ಧಇಲ್ಲ ಸಲ್ಲದ ಆರೋಪ ಹೊರಿಸುವುದನ್ನು ಖಂಡಿಸುತ್ತದೆ ಎಂದು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲತಾರವಿ ರಾಠೋಡ್ ತಿಳಿಸಿದರು.
ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ವಾಸ್ತವ ಘಟನೆಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನುಅಚ್ಚುಕಟ್ಟಾಗಿ ನಿರ್ವಹಿಸುತ್ತ ಬಂದಿರುವಖರ್ಗೆಯವರು, ಬಾಯಿ ತಪ್ಪಿ ಲಂಚ-ಮಂಚದ ಮಾತುಗಳನ್ನಾಡಿರಬಹುದು.ಈ ಬಗ್ಗೆ ಈಗಾಗಲೇ ಕ್ಷಮೆಕೂಡ ಕೇಳಿದ್ದಾರೆ.ಆದರೂ ಬಿಜೆಪಿ ಮಹಿಳಾ ಘಟಕದವರುಚಿತ್ತಾಪುರ ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸರಿಯಲ್ಲ.
ಕೆಲಸ ಕೇಳಿಕೊಂಡು ಬಂದ ಹುಡುಗಿಯೊಬ್ಬಳನ್ನು ದುರುಪಯೋಗ ಪಡಿಸಿಕೊಂಡಿರುವ ರಮೇಶ ಜಾರಕಿಹೊಳಿ, ಸಂಸದರಾದ ಸದಾನಂದಗೌಡರು ಹೆಣ್ಣೊಬ್ಬಳ ಜೊತೆಕೆಟ್ಟದಾಗಿ ವರ್ತಿಸುತ್ತಿರುವ ವಿಡಿಯೋ ವೈರಲ್‌ಆಗಿದ್ದು, ಪ್ರತಾಪ್ ಸಿಂಹ ಹುಡುಗಿಯೊಬ್ಬಳಿಗೆ ಕಳುಹಿಸಿರುವ ರಾಸಲೀಲೆ ಸಂದೇಶ ಹಾಗೂ ರೆಕಾಡಿಂಗ್ ವಾಟ್ಸ್‌ಪ್‌ನಲ್ಲಿ ಹರಿದಾಡುತ್ತಿದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅನೈತಿಕ ಸಂಬಂಧದಕುರಿತು ಪತ್ರಿಕೆಗಳಲ್ಲಿ ಮಾನ ಹರಾಜಾಗಿದೆ. ಎಫ್.ಐ.ಆರ್.ಕೂಡದಾಖಲಾಗಿದೆ. ಸದನದಲ್ಲಿ ಬ್ಲೂ ಫಿಲಂ ವೀಕ್ಷಿಸಿದ ಲಕ್ಷ್ಮಣ್ ಸವದಿ, ಸಿ.ಸಿ. ಪಾಟೇಲ್ ಹಾಗೂ ಕೃಷ್ಣ ಪಾಲೆಮಾರ್ ಅವರುಗಳಿಂದ ಕ್ಷಮೆ ಕೇಳಿದದ್ದೀರಾ?ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಶಾಸಕ ಪ್ರಿಯಾಂಕ್‌ಖರ್ಗೆಯವರುಏನನ್ನೇ ತಿಳಿಸಿದರೂ ಓದಿಕೊಂಡು, ಅಧ್ಯಯನ ಮಾಡಿ ವಿವರ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ. ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ಅನೈತಿಕ ಆಡಳಿತವನ್ನು ಬಯಲಿಗಿಡುತ್ತಿರುವ ಪ್ರಿಯಾಂಕ್‌ಖರ್ಗೆಯವರು “ಈ ಸರ್ಕಾರ ಬಂದ ಮೇಲೆ ಸರ್ಕಾರಿ ಕೆಲಸ ಪಡೆಯಲು ಹುಡುಗರು ಲಂಚ ಕೊಡುವ, ಹೆಣ್ಣು ಮಕ್ಕಳು ಮಂಚ ಹತ್ತುವ ಪರಿಸ್ಥಿತಿಯನ್ನು ಬಿಜೆಪಿ ಸೃಷ್ಟಿಸಿದೆ ಎಂದು ವಾಸ್ತವಕ್ಕೆ ಕನ್ನಡಿ ಹಿಡಿಯುವ ಕೆಲಸ ಮಾಡಿದ್ದು. ಆದರೂಕೂಡತಮ್ಮ ಹೇಳಿಕೆಯಿಂದ ನಾಡಿಗೆಯಾರಿಗೆ ನೋವುಂಟಾಗಿದ್ದರೆ.
ತಾವುಕ್ಷಮೆಯಾಚಿಸುತ್ತೇನೆಎಂದು ತಿಳಿಸಿದ್ದಾರೆ.ಈಗ ಇಲ್ಲದ್ದನ್ನು ವಿವಾದ ಸೃಷ್ಟಿಸಲು ಹೊರಟರೆ, ಕಾಂಗ್ರೆಸ್ ಪಕ್ಷ ಸುಮ್ಮನೆಕೂರುವುದಿಲ್ಲ. ನಾವೂ ಕೂಡ ಈ ಬಿಜೆಪಿ ಮುಖಂಡರ ಮನೆಗೆ ಮುತ್ತಿಗೆ ಹಾಕಬೇಕಾಗುತ್ತದೆಎಂದು ಎಚ್ಚರಿಸಿದರು.ಚಂದ್ರಿಕಾ ಪರಮೇಶ್ವರ, ಪ್ರಭಾವತಿ ಪಾಟೀಲ, ರೇಣುಕಾ ಸಿಂಗೆ, ಶೀಲಾ ಕಾಶಿ, ಗೀತಾ ಮುದಗಲ್, ವಾಣಿರ್ಶರೀ, ಶೋಭಾ ಕಾಳೆ, ಮಂಗಳಾ ಪಾಟೀಲ ಇತರರಿದ್ದರು.