ಕಲಬುರಗಿ: ಪಿ.ಎಂ.-ಕಿಸಾನ್ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆರ್ಥಿಕ ಸೌಲಭ್ಯ ಪಡೆಯಲು ಬಯೋಮೆಟ್ರಿಕ್ ಆಧಾರಿತ ಇ-ಕೆ.ವೈ.ಸಿ . ಆಗಸ್ಟ್ 31ರೊಳಗೆ . ಮಾಡಿಸುವಂತೆ ಜಿಲ್ಲೆಯ ರೈತ ಬಾಂಧವರಲ್ಲಿ ಡಿ.ಸಿ. ಯಶವಂತ ವಿ. ಗುರುಕರ್ ಅವರು ತಿಳಿಸಿದ್ದು ಇ-ಕೆ.ವೈ.ಸಿ. ಮಾಡಿಸಲು ರೈತರು ಹೊದಾಗ ಸರ್ವರ ಬ್ಯುಸಿ ಇರುತ್ತಿದೆ ಆದಕಾರಾಣ ಇ-ಕೆ.ವೈ.ಸಿ. ಮಾಡಿಸಲು ರೈತರಿಗೆ ಇನ್ನು 15 ದಿನ ಸಮಯ ನೀಡಲು ಸೇಡಂ ಮತಕ್ಷೇತ್ರದ ಜೆಡಿಎಸ್ ಪಕ್ಷದ ಮುಖಂಡ ಬಾಲರಾಜ್ ಗುತ್ತೇದಾರ ಆಗ್ರಹಿಸಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಅಂಗಡಿಗಳು ಇರುವುದು ಬಹಳ ಕಡಿಮೆ ರೈತರು ಇ-ಕೆ.ವೈ.ಸಿ.. ಮಾಡಿಸಲು ಪಟ್ಟಣಗಳಿಗೆ ಹೋದಾಗ ಸರ್ವರ ಬೀಜಿ ಇರುವುದರಿಂದ ರೈತರು ಕಳೆದ 1 ವಾರದಿಂದ ಪರದಾಡುತ್ತಿದ್ದಾರೆ
ಆಗಸ್ಟ್ 31ರೊಳಗೆ ಕೆ.ವೈ.ಸಿ. ಮಾಡಿಸುವಂತೆ ಜಿಲ್ಲೆಯ ರೈತ ಬಾಂಧವರಲ್ಲಿ ಡಿ.ಸಿ. ಯಶವಂತ ವಿ. ಗುರುಕರ್ ಅವರು ತಿಳಿಸಿದ್ದು ಇದರಿಂದ ರೈತರಿಗೆ ದಿಕ್ಕು ದೊಚದಂತಾಗಿದೆ ಆದಕಾರಣ ಇ-ಕೆ.ವೈ.ಸಿ. ಮಾಡಿಸಲು ರೈತರಿಗೆ ಇನ್ನು 15 ದಿನ ಸಮಯ ನೀಡುವ ಮೂಲಕ ರೈತರಿಗೆ ಅನೂಕುಲ ಮಾಡಿಕೊಡಬೇಕು ಎಂದು ಬಾಲರಾಜ್ ಗುತ್ತೇದಾರ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.