ಯಾರೇ ಬಂದರೂ ನನ್ನನ್ನು ಸೋಲಿಸುವುದು ಅಸಾಧ್ಯ: ಶಾಸಕ ಪ್ರಿಯಾಂಕ್ ಖರ್ಗೆ ವಿಶ್ವಾಸದ ನುಡಿ

0
167

ಶಹಾಬಾದ: ಬಿಜೆಪಿಯ ಯಾವ ನಾಯಕರೂ ಬಂದರು ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ನಾವೇನು ಪಸೆಂಟೇಜ್ ತಗೋತಿವಾ, ಅಕ್ರಮ ಮರಳು ಸಾಗಾಣಿಕೆ ಮಾಡ್ತೀವಾ, ಅಟ್ರಾಸಿಟಿ ಕೇಸು ಹಾಕಿಸುತ್ತೇವಾ? ಯಾವ ಕಾರಣಕ್ಕೆ ಸೋಲಿಸುತ್ತಾರೆ ? ಬಿಜೆಪಿಯವರಿಗೆ ಒಂದೇ ಒಂದು ಅಭ್ಯರ್ಥಿ ಸಿಗುತ್ತಿಲ್ಲ ಅಂತವರು ನನಗೆ ಸೋಲಿಸುತ್ತಾರಾ? ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಅವರು ಮಂಗಳವಾರ ಶಂಕರವಾಡಿ ಗ್ರಾಮದಲ್ಲಿ ಅಂದಾಜು ರೂ ೧೨ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಡಾ ಬಿ.ಆರ್. ಅಂಬೇಡ್ಕರ್ ಭವನಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಕೆಪಿಟಿಸಿಎಲ್, ಶಿಕ್ಷಣ ಇಲಾಖೆಯಲ್ಲಿ ಹಾಗೂ ಪಿಎಸ್ ಐ ನೇಮಕಾತಿಯಲ್ಲಿ ನೌಕರಿಗಳನ್ನು ಲಕ್ಷ ಲಕ್ಷ ಹಣ ಪಡೆದುಕೊಂಡು ಮಾರಿಕೊಂಡಿದ್ದಾರೆ ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಿದ ಅವರು ಖಾಸಗಿ ಶಿಕ್ಷಣ ಸಂಸ್ಥೆಯವರು ಭ್ರ?ಚಾರದ ಬಗ್ಗೆ ಮೋದಿಗೆ ಪತ್ರ ಬರೆದಿದ್ದಾರೆ.

ಕೇವಲ ಒಂದು ವ?ದ ಅವಧಿಗೆ ಮಾತ್ರ ಎಂ ಎಲ್ ಸಿ ಮಾಡಿದ್ದಕ್ಕೆ ಮೆರವಣಿಗೆ ಮಾಡಿಸಿಕೊಂಡಿದ್ದಾರೆ ಎಂದು ಬಾಬುರಾವ ಚಿಂಚನಸೂರು ಅವರನ್ನು ಕುಟುಕಿದ ಪ್ರಿಯಾಂಕ್ ಅವರು ಇಬ್ರಾಹಿಂ ಅವರು ರಾಜೀನಾಮೆ ನೀಡಿದ್ದಕ್ಕೆ ಅಲ್ಪಾವಧಿಗೆ ಅವರನ್ನು ನೇಮಿಸಲಾಗಿದೆ ಎಂದು ಲೇವಡಿ ಮಾಡಿದರು.

ಬಸವಣ್ಣ, ಅಂಬೇಡ್ಕರ ಹಾಗೂ ನಿಜಶರಣ ಅಂಬಿಗೇರ ಚೌಡಯ್ಯನವರ ತತ್ತ್ವ ಪಾಲನೆ ಮಾಡುವಲ್ಲಿ ರಾಜಕಾರಣಿಗಳು ವಿಫಲರಾಗಿದ್ದಾರೆ ಎಂದು ವಿ?ದ ವ್ಯಕ್ತಪಡಿಸಿದ ಖರ್ಗೆ ಅವರು ರಾಜಕಾರಣಿಗಳನ್ನು ಸೇವಕರಂತೆ ನೋಡಿ ಹೊರತು ಅವರ ಗುಲಾಮರಂತೆ ವರ್ತಿಸಬೇಡಿ ಎಂದು ಮನವಿ ಮಾಡಿದರು.

ಬಿಜೆಪಿಗರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದಾರೆ. ಆದರೆ, ಬಡವರ ಮಕ್ಕಳ ಹೆಗಲಿಗೆ ಕೇಸರಿ ಶಾಲು ಹಾಕಿಸಿ ರಾಜಕೀಯ ಮಾಡಿಕೊಂಡು ಕೋಮು ವಿ? ಬೀಜ ಬಿತ್ತುತ್ತಿದ್ದಾರೆ. ನಾನು ನನ್ನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದೇನೆ. ಬುದ್ದ ಬಸವ ಅಂಬೇಡ್ಕರ್ ಚಿಂತನೆ ಕಲಿಸುತ್ತಿದ್ದೇನೆ.ನೀವು ಕೂಡಾ ನಿಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

ಬಿಜೆಪಿಗರು ಟಿಕೇಟನ್ನು ಹರಾಜಿಗಿಟ್ಟಿದ್ದಾರೆ. ಯಾರು ಜಾಸ್ತಿ ಹಣ ಕೊಡುತ್ತಾರೆ, ಬೆಂಗಳೂರಿಗೆ ಜಾಸ್ತಿ ಕರೆದುಕೊಂಡು ಹೋಗುತ್ತಾರೆ ಅವರಿಗೆ ಮಾತ್ರ ಟಿಕೇಟು ಕೊಡುತ್ತಾರೆ. ನಾನು ಇದೇ ತಾಲೂಕಿನ ಮೊಮ್ಮಗನಿದ್ದೇನೆ. ಕ್ಷೇತ್ರದ ಅಭಿವೃದ್ದಿ ನನ್ನಿಂದ ಮಾತ್ರ ಸಾಧ್ಯ ಆದರೆ, ಹೊರಗಿನಿಂದ ಬರುವ ಬಿಜೆಪಿಗರಿಂದ ಅಸಾಧ್ಯ ಎಂದು ಘೋಷಿಸಿದರು.

ಚಿತ್ತಾಪುರ ಕ್ಷೇತ್ರದ ೪೨ ಭವನಗಳನ್ನು ರಾಜಕೀಯ ಕ್ಷುಲ್ಲಕ ಕಾರಣಕ್ಕೆ ನಿಲ್ಲಿಸಲಾಗಿದೆ ಎಂದು ಆರೋಪಿಸಿದ ಖರ್ಗೆ ಆ ಎಲ್ಲ ಯೋಜನೆಗಳನ್ನು ಜಾರಿಗೊಳಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಹಲವರನ್ನು ಪ್ರಿಯಾಂಕ್ ಖರ್ಗೆ ಹೂಮಾಲೆ ಹಾಕುವ ಮೂಲಕ ಸ್ವಾಗತಿಸಿದರು. ವೇದಿಕೆಯ ಮೇಲೆ ಮಹೇಮೂದ್ ಸಾಹೇಬ, ರಮೇಶ ಮರಗೋಳ, ಸುನೀಲ್ ದೊಡ್ಡಮನಿ, ತಹಸೀಲ್ದಾರ ಉಮಾಕಾಂತ್ ಹಳ್ಳೆ, ಇಓ ನೀಲಗಂಗಾ ಸೇರಿದಂತೆ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here