ಜನರಲ್ಲಿ ಜಾಗೃತಿ ಮೂಡಿಸುವುದೇ ಆತ್ಮಹತ್ಯೆ ತಡೆಗೆ ಮದ್ದು: ಪ್ರೊ. ಶಿವಕುಮಾರ ಚೆಂಗಟಿ

0
16

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿವಸದ ಕಾರ್ಯಕ್ರಮ ಜರುಗಿತು.

ಗುಲಬರ್ಗಾ ವಿಶ್ವವಿದ್ಯಾಲಯದ ಮನೋಶಾಸ್ರ್ತವಿಭಾಗದ ವಿಶ್ರಾಂತ ಮುಖ್ಯಸ್ಥರಾದ ಪ್ರೊ. ಶಿವಕುಮಾರ ಚೆಂಗಟಿಯವರು ಇತ್ತಿಚಿಗೆ ವಿಶ್ವದಲ್ಲಿ ಆತ್ಮಹತ್ಯೆ ಏರುಗತಿಯಲ್ಲಿ ಸಾಗಿದೆ ಅದಕ್ಕೆ ಕಾರಣ ಕೌಟಂಬಿಕ ಕಲಹ,ಪ್ರೀತಿ ವಿವಾಹ,ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ವಿಫಲರಾಗುವುದು,ಮಾನಸಿಕ ರೋಗದಿಂದ ಬಳಲುವಿಕೆ,ಆರ್ಥಿಕ ಕುಸಿತ ಹೀಗೆ ಆತ್ಮ ಹತ್ಯೆಗೆ ಹಲವು ಕಾರಣಗಳುಂಟು,ಆದರೆ ಆತ್ಮಹತ್ಯೆಯೇ ಸಮಸ್ಯೆಗೆ ಪರಿಹಾರ ಅಲ್ಲ.ಆದ್ದರಿಂದ  ಅಂತಹ ಜನರು ಕಂಡರೆ ಅವರಿಗೆ ಧೈರ್ಯ ಹೇಳಬೇಕು,ಪರಿಹಾರ ಕಂಡು ಹಿಡಿಯಬೇಕು,ಉಚಿತ ಮಾರ್ಗದರ್ಶನ ಮಾಡಬೇಕು ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳನು ಉದ್ದೇಶಿಸಿ ಹೇಳಿದರು.

Contact Your\'s Advertisement; 9902492681

ಪಲ್ಲವಿ ಮತ್ತು ಪವಿತ್ರ ಪ್ರಾರ್ಥನೆ ಗೀತೆ ಹಾಡಿದರು. ಉಪನ್ಯಾಸಕ ಶಿವಲೀಲಾ ಬೊಮ್ಮನ್ ಸ್ವಾಗತ ಮಾಡುತ್ತ ಅತಿಥಿಗಳನ್ನು ಪರಿಚಯಿಸಿದರು. ಡಾ. ವಿಜಯ ಕುಮಾರ ಪರುತೆಯವರು ಪ್ರಾಸ್ತವಿಕ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿ ಹೇಝಲ್ ಹಾಗೂ ಅಶ್ವಿನಿಯರು ಆತ್ಮಹತ್ಯೆ ಕುರಿತು ಭಾಷಣ ಮಾತನಾಡಿದರು.

ಕಾರ್ಯಕ್ರಮದ ಮೊದಲು “ಆತ್ಮಹತ್ಯೆಗೆ ಕಾರಣಗಳು,ಅರಿವು ಮತ್ತು ತಡೆಗಟ್ಟುವಿಕೆ” ಕುರಿತು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಕು.ಐಶ್ಯಾ ತಹಸೀನ್ ,ಕು.ಹೇಝಲ್,ಕು.ಅನಾಮಿಕಾ, ಅಂಜಲಿ ಕುಮಾರಿ, ಸೃಷ್ಟಿ ಕುಲ್ಕರ್ಣಿಯವರಿಗೆ ಮುಖ್ಯಅತಿಥಿಗಳಿಂದ ಬಹುಮಾನ ವಿತರಿಸಲಾಯಿತು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ರಾಜೇಂದ್ರ ಕೊಂಡಾ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಛಾಯಾ ಪಾಟೀಲ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here