ಲೋಕಾಯುಕ್ತ ದಾಳಿ: ಇಬ್ಬರು ಪೊಲೀಸ್ ಸಿಬ್ಬಂದಿ ವಶಕ್ಕೆ- ಸಿ.ಪಿ.ಐ ವಿಚಾರಣೆ

0
152

ಕಲಬುರಗಿ: ಜೇವರ್ಗಿ ಪೊಲೀಸ್ ವಸತಿ ನಿವಾದಲ್ಲಿ ಪೊಲೀಸ್ ಪೇದೆ ಮತ್ತು ವಾಹನ ಚಾಲಕನ ಲೋಕಾಯುಕ್ತ ಡಿ.ವೈ.ಎಸ್.ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಸಿಪಿಐಯನ್ನು ವಿಚಾರಣೆ ನಡೆಸಿದ್ದಾರೆ.

ಪೊಲೀಸ್ ವಸತಿ ನಿವಾದಲ್ಲಿ ಪೊಲೀಸ್ ಸ್ಟೇಷನ್ ಪೇದೆ ಶಿವರಾವ ಸೇರಿದಂತೆ ವಾಹನ ಚಾಲಕರಾದ ಅವಣ್ಣ ಇವರನ್ನು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣ ಸಮೇತ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಮರಳು ವಿಲೇವಾರಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಮಾಹಿತಿ ಮೇರೆಗೆ ಹಣ ಸಮೇತ ಇಲ್ಲಿನ ಪೊಲೀಸ್ ಠಾಣೆ ಹಿಂದುಗಡೆ ಪೆದಗಳನ್ನು ಬಂಧಿಸಿ ಹೊರವಲಯದ ಪ್ರವಾಸಿ ಮಂದಿರದಲ್ಲಿ ವಿಚಾರಣೆ ನಡೆಸಿದ್ದಾರೆ.

ಸಿನಿಮಿಯ ರೀತಿಯಲ್ಲಿ ಬಂಧನ: ಬಂಧಿತ ಜೇವರ್ಗಿ ಪೊಲೀಸ್ ಪೇದೆ ಶಿವರಾಯ ಹಣ ಸಮೇತ ಪರಾರಿಯಾಗಲು ಯತ್ನಿಸಿದ್ದು ಸಿನಿಮಾ ರೀತಿಯಲ್ಲಿ ಬೆನ್ನು ಹತ್ತಿ ಲೋಕಾಯುಕ್ತ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾಳಿಯಲ್ಲಿ ಸೇರಿದಂತೆ ಪಿ. ಐ. ದೃವತಾರೆ, ಅಕ್ಕಮಹಾದೇವಿ, ನಾನಾ ಗೌಡ ಸಿಬ್ಬಂದಿಗಳಾದ ಪ್ರದೀಪ್ ಮತ್ತು ಸಿದ್ದಲಿಂಗ ಈ ಕಾರ್ಯಾಚರಣೆಯ ವೇಳೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here