ಸರ್ವಧರ್ಮ ಸಮಾಭಾವ ಕಾರ್ಯಕ್ರಮ

0
12

ಕಲಬುರಗಿ: ಆಲ್ ಇಂಡಿಯಾ ಸೂಫಿ ಸಜಾದನಸಿನ ಕೌನ್ಸಿಲ್ ನ ಮುಖ್ಯಸ್ತರಾದ ಹಜರತ್ ಸೈಯದ್ ನಶಿರುದ್ದೀನ್ ಚಿಸ್ತಿ ದಿವಾನಸಾಬ ಅಜಮೀರ್ ರಾಜಸ್ತಾನ ಅವರ ನೇತೃತ್ವದಲ್ಲಿ ಮಹಾರಾಷ್ಟ್ರದ ಪುಣೆ ನಗರದಲ್ಲಿ ಆಯೋಜಿಸಲಾಗಿದ್ದ “ಸರ್ವಧರ್ಮ ಸಮಾಭಾವ ” ಕಾರ್ಯಕ್ರಮದಲ್ಲಿ ಜರುಗಿತು.

ಪರಮಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ್ ನೀರಗುಡಿ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಜೈ ಭಾರತ್ ಮಾತಾ ಸೇವಾ ಸಮಿತಿ ನವದೆಹಲಿ, ಜ್ಞಾನಿ ಗುರು ಪ್ರೀತ್ ಸಿಂಗ್ ಜಿ ಮುಖ್ಯಸ್ತರು ಗುರುದ್ವಾರ ಪುಣೆ, ಹಾಗು ಪಿ. ಸ್ಯಾಮುವಲ ಮುಖ್ಯಸ್ತರು ಹೋಲಿ ಮೇರಿ ಚರ್ಚ್ ಕ್ಯಾಂಪ್ ಪುಣೆ, ಗೌತಮ್ ಭುಜಂಗ ಬುದ್ಧಿಸ್ಟ್ ಇಂಟನ್ರ್ಯಾಷನಲ್ ಪುಣೆ ಮುಖ್ಯಸ್ಥರು, ಗುರು ಬಂಕೆ ಬಿಹಾರಿ ಇಸ್ಕಾನ್ ಇಂಟನ್ರ್ಯಾಷನಲ್ ಕ್ಯಾಂಪ ಪುಣೆಯ ಮುಖ್ಯಸ್ಥರು.

Contact Your\'s Advertisement; 9902492681

ಡಾ. ತಸನಿಮಾ ಪಟೇಲ ಜೈ ಭಾರತ್ ಮಾತಾ ಸೇವಾ ಸಮಿತಿ ನವದೆಹಲಿಯ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಅನೇಕ ಧರ್ಮ ಗುರುಗಳು, ಮುಖಂಡರು ಈ ಒಂದು ರಾಷ್ಟ್ರಮಟ್ಟದ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ದೇಶದ ಏಕತೆ, ಐಕತೆಯು ಎಲ್ಲಾ ಧರ್ಮ, ಜಾತಿ ಪಂಥ ಪಕ್ಷಗಳ ಸಿದ್ಧಾಂತಕಿಂತ ಬಹು ದೊಡ್ಡ ಸಿದ್ದಾಂತವಾಗಿದೆ ಎಂದು ಪ್ರತಿಪಾದಿಸಿ ದೇಶವೇ ನಮ್ಮ ದೇಶವೇ ನಮ್ಮ ಪರಿವಾರ ದೇಶ ಉಳಿದರೆ ನಾವು ನಮ್ಮ ಧರ್ಮಗಳು ಉಳಿಯುತ್ತವೆ, ಎಂಬ ಸಂದೇಶವನ್ನು ಸಮಸ್ತ ದೇಶ ಬಾಂಧವರಿಗೆ ಸರ್ವರು ನೀಡಿದರು ಹಾಗು ಸಮಸ್ತ ಧರ್ಮದವರು ಈ ದೇಶ ಭಕ್ತಿ ಸಿದ್ಧಾಂತ ಹಾಗು ತತ್ವಗಳನ್ನು ತಪ್ಪದೇ ಪಾಲಿಸಬೇಕೆಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಮಿತಿ ಪರವಾಗಿ ಕರ್ನಾಟಕ ರಾಜ್ಯದಿಂದ ಮುಖಂಡರಾದ ವೈಜನಾಥ ಎಸ್ ಝಳಕಿ ವಕ್ತಾರರು, ಗುರುಸಿದ್ದಪ್ಪಾ ಬೆನಕನಳ್ಳಿ, ಮಲ್ಲಿಕಾರ್ಜುನ ಸಾರವಾಡ ಹಾಗು ವಿಷ್ಣು ಬೀದರ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here