ಬಿಸಿಯೂಟ ತಯ್ಯಾರಕ ಬಾಕಿ ವೇತನ ಬೀಡುಗಡೆಗೆ ಒತ್ತಾಯಿಸಿ ಮನವಿ

0
18

ಕಲಬುರಗಿ: ರಾಜ್ಯ ಸರಕಾರದ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿಯಲ್ಲಿ ಅಡುಗೆಯವರಾಗಿ ಕೆಲಸ ನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರಿಗೆ ಮತ್ತು ಸಹಾಯಕ ಅಡುಗೆಯವರಿಗೆ ಕಳೆದ 6 ತಿಂಗಳುಗಳ ವೇತನ ಪಾವತಿಸಿಲ್ಲ. ವೇತನ ದೊರೆಯದೆ ಬಿಸಿಯೂಟ ತಯ್ಯಾರಕರು ಸಂಕಷ್ಟಕ್ಕೊಳಗಾಗಿದ್ದು,  ಕೂಡಲೇ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ತಿಂಗಳುಗಳ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕ್ಕೆಗೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡೆರೇಷನ್ ಮನವಿ ಸಲ್ಲಿಸಿದರು.

ಸಂಘಟನೆ ನಿಯೋಗ ಮಂಗಳವಾರ ಶಿಕ್ಷಣ ಅಕ್ಷರ ದಾಸೋಹ ಯೋಜನಾ ಅಧಿಕಾರಿಗಳಿಗೆ ಭೇಟಿ ನೀಡಿದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

Contact Your\'s Advertisement; 9902492681

ಬಿ.ಟಿ ಮೂಲಕ ವೇತನ ಪಾವತಿಸುವ ವಿಧಾನದಲ್ಲಿ ಆಗುತ್ತಿರುವ ತೊಂದರೆಗಳನ್ನು ಸರಳ ರೀತಿಯಲ್ಲಿ ವೇತನ ಪಾವತಿಯಾಗುವಂತೆ ಕ್ರಮ ಜರುಗಿಸುವುದು, ಬಾಕಿ ಉಳಿದಿರುವ ಅಡುಗೆ ಸಾಮಗ್ರಿ ಮತ್ತು ತರಕಾರಿ ವೇತನ ಪಾವತಿ, ಬಿಸಿಯೂಟ ತಯಾರಿಕರಿಗೆ ರೂ.2.00 ಲಕ್ಷ ರೂ. ಅಪಘಾತ ಪರಿಹಾರ ಜಾರಿ, ಬಿಸಿಯೂಟ ತಯಾರಿಕರಿಗೆ ಕೆಲಸದ ಸಂದರ್ಭದಲ್ಲಿ ಆಗುವ ಅಪಘಾತ ಪರಿಹಾರ ಹಣ ಪಡೆಯಲು ಇಲಾಖೆ ಕಡ್ಡಾಯಗೊಳಿಸಿರುವ ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್ ಮಾಡುವುದನ್ನು ರದ್ದುಗೊಳಿಸಿ, ಪರಿಹಾರ ಹಣ ಪಡೆಯಲು ಸರಳೀಕರಣಗೊಳಿಸಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಪ್ರಭುದೇವ ಯಳಸಂಗಿ ಒತ್ತಾಯಿಸಿದ್ದಾರೆ.

ಬಿಸಿಯೂಟ ತಯ್ಯಾರಕರಿಗೆ ದಸರಾ ರಜೆ, ಬೇಸಿಗೆ ರಜೆ ಸೇರಿದಂತೆ ಒಟ್ಟು 12 ತಿಂಗಳುಗಳ ಸಂಬಳ, ಹಾಲಿ ಇರುವ ನಿಯದಂತೆ ಬಿಸಿಯೂಟ ತಯ್ಯಾರಕರಿಗೆ ಪ್ರತಿ ತಿಂಗಳು 5ನೇ ತಾರಿಖಿನಂದು ಸಂಬಳ ಪಾವತಿ, 60 ವರ್ಷ ಆದ ನಂತರ ಬಿಸಿಯೂಟದಿಂದ ನಿವೃತ್ತಿ ಆಗುತ್ತಿರುವ ಬಿಸಿಯೂಟ ತಯ್ಯಾರಕರು ಮತ್ತು ಸಹಾಯಕರಿಗೆ ಇಡುಗಂಟು 2.00 ಲಕ್ಷ ರೂಪಾಯಿ ಸಹಾಯಧನವನ್ನು ಪಾವತಿಗೆ ಸರಕಾರ ಮುಂದಾಗಬೇಕೆಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಈ ವೇಳೆಯಲ್ಲಿ ಮಹಾದೇವಿ ಜಾಧವ್, ಯಶೋದಾ ರಾಠೋಡ, ಅಂಬಿಕಾ.ಪಿ.ಶ್ರೀಗಣಿ, ಸುಜಾತಾ ದೊಡ್ಡಮನಿ, ಜಗದೇವಿ ಕಮಲಾಪೂರ, ಅನೀತಾ ಗೋಪಾಲ ಜಾಧವ,ಅಂಬಿಕಾ ಅಷ್ಟಗಿ, ಅಂಬಿಕಾ ರೇವೂರಕರ್, ಶಿವಲಿಂಗಮ್ಮ ನಾಗನಹಳ್ಳಿ, ಶಿವಲಿಂಗಮ್ಮ ಸಾವಳಗಿ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here