ಕಾಂಗ್ರೆಸ್ ಸೂರ್ಯ- ಚಂದ್ರ ಇರುವವರೆಗೂ ಪಕ್ಷ ಇರಲಿದೆ: ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್

ಕಲಬುರಗಿ: ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅದರ ಸ್ಟಿಯರಿಂಗ್ ಖರ್ಗೆ ಕೈಗೆ ಈಗ ಕೊಟ್ಟಿದ್ದಾರೆಂದು ಸಿಎಂ ಬಸವರಾಜ ಬೊಮ್ಮಾಯಿ ಮಾಡಿರುವ ಟೀಕೆ ಸರಿಯಲ್ಲ, ಯಾವಾಗಲೂ ಟೀಕೆಗೋಸ್ಕರ ಟೀಕೆ ಮಾಡದೆ ವಿಷಯ ಅರಿತು ಟೀಕೆ ಮಾಡಬೇಕು. ಡಾ. ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಫಿನಿಕ್ಸ್ ಪಕ್ಷಿಯಂತೆ ಮೇಲೆದ್ದು ಬರಲಿದೆ. ಪಕ್ಷದ ಪುನರುತ್ಥಾನವಾಗಿ ಭಾರತದಾದ್ಯಂತ ಪಕ್ಷ ಬಲಿಷ್ಠವಾಗಲಿದೆ ಎಂದು ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಡಾ. ಖರ್ಗೆ ಕಾರ್ಯವೈಖರಿ ಹತ್ತಿರದಿಂದ ಬಲ್ಲವರು ಅವರಿಗೆ ಕಾಂಗ್ರೆಸ್‍ನ ಬಹುದೊಡಡ ಹುದ್ದೆ ಸಿಕ್ಕಿದ್ದಕ್ಕೆ ಸಂತಸದಲ್ಲಿದ್ದಾರೆ. ಇಲ್ಲಿ ಪಕ್ಷಭೇದ ಮರೆತು ಕನ್ನಡಿಗನಿಗೆ ಇಇಂತಹ ರಾಷ್ಟ್ರೀ ಹುದ್ದೆ ಸಿಕಕಿರುವ ಬಗ್ಗೆ ಸಿಎ  ಬೊಮ್ಮಾಯಿ ಸ್ವಾಗತ ಮಾಡಬೇಕಿತತು. ಅದನ್ನು ಬಿಟ್ಟು ಇಲ್ಲಿಯೂ ರಾಜಕೀಯವಾಗಿ ಟೀಕೆ ಮಾಡಿರೋದು ಸರಿಯಲ್ಲ ಎಂದು ಹೇಳಿದ್ದಾರೆ.

ಕಲ್ಯಾಣ ನಾಡಿನವರು, ಕರ್ನಾಟಕದವರು ಯಾರೊಬ್ಬರೂ ಬೇಡಿಕೆ ಇಡದಿದ್ದರೂ ಪರವಾಗಿಲ್ಲ, ತಾವೆ ಈ ಬಾಗಕ್ಕೆ, ಈ ನಾಡಿಗೆ ಅದೇನು ಬೇಕೆಂಬುದನ್ನು ಅರಿತು, ರೇಲ್ವೆ ಸಚಿವರಾಗಿದ್ದಾಗ, ಕಾರ್ಮಿಕ ಸಚಿವರಾಗಿದ್ದಾಗ ಸಾಕಷ್ಟು ಕೊಡುಗೆ ಈ ಬಾಗಕ್ಕೆ ನೀಡಿದ್ದಾರೆ. ಕಲಬುರಗಿ ಹೊಸ ರೇಲ್ವೆ ಪಿಟ್‍ಲೈನ್, ವಿಭಾಗೀಯ ಕಚೇರಿ, ಬೀದರ್- ಕಲಬುರಗಿ ರೇಲ್ವೆ ಮಾರ್ಗ, ಇಎಸ್‍ಐಸಿ ಆಸ್ಪತ್ರೆ, ವಿಮಾನ ನಿಲ್ದಾಣ ಹೀಗೆ ಸಾಲುಸಾಲು ಪ್ರಗತಿ ಯೋಜನೆಗಳು ಡಾ. ಖರ್ಗೆಯವರ ಕೊಡುಗೆ ರೂಪದಲ್ಲಿ ದಕ್ಕಿವೆ.

ಕಲ್ಯಾಣ ನಾಡಿನ 7 ಜಿಲ್ಲೆಗಳಿಗೆ , ಹಿಂದುಳಿದ ಈ ಭಾಗಕ್ಕೆ ಲಂ 371 (ಜೆ) ರೂಪದಲ್ಲಿ ಉದ್ಯೋಗ, ಶಿಕ್ಷಣ, ಅಭಿವೃದ್ಧಿಯಲ್ಲಿ ಮೀಸಲಾತಿ, ಅನುದಾನ ರೂಪದಲ್ಲಿ ಭಾರಿ ಕೊಡುಗೆ ನೀಡಿದ್ದಾರೆ. ಇಂತಹ ಸಾಧನೆ ಮಾಡಿದವರು ಈಗ ದೇಶದ ಹಳೆಯ ಪಕ್ಷದ ಅಧ್ಯಕ್ಷರಾಗಿದ್ದಾರೆ. ಖರ್ಗೆಯವರು ತಮ್ಮ ಸಮರ್ಥ ಕಾರ್ಯದಕ್ಷೆಯಿಂದ ಇಲ್ಲಿಯೂ ತಮ್ಮ ಛಾಪು ಮೂಡಿಸುವ ಭರವಸೆ ದೇಶದ ಎಲ್ಲ ಕಾಂಗ್ರೆಸ್ಸಿಗರ, ಜನರ ಮನದಲ್ಲಿ ಮೂಡಿದೆ ಎಂದು ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಎಂದಿಗೂ ಮುಳುಗುವ ಹಡಗಲ್ಲ, ಪ್ರಜಾಪ್ರಭುತ್ವವಾದಿ ಪಕ್ಷ ನಮ್ಮದು. ಸೂರ್ಯ, ಚಂದ್ರ ಇರುವವರೆಗೂ ಈ ಪಕ್ಷ ಇರುತ್ತದೆ. ಬಲಗೊಂಡು ದೇಶವನ್ನಾಳುತ್ತದೆ. ಖರ್ಗೆ ಅವದಿಯಲ್ಲಿ ಪಕ್ಷ ಇನ್ನೂ ಬಲಗೊಂಡು ದೇಶಾದ್ಯಂತ ನಳನಳಿಸುತ್ತದೆ, ಸಿಎಂ ಬೊಮ್ಮಾಯಿಯವರೇ ಇದನ್ನೆಲ್ಲ ನೋಡಲಿದ್ದಾರೆಂದು ಅಲ್ಲಂಪ್ರಭು ಪಾಟೀಲ್ ಸಿಎಂ ಟೀಕಾ ಮಾತುಗಳಿಗೆ ಪ್ರತಿಯಾಗಿ ಟಾಂಗ್ ನೀಡಿದ್ದಾರೆ.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

39 mins ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

42 mins ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

44 mins ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

55 mins ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

1 hour ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420