Monday, July 15, 2024
ಮನೆಬಿಸಿ ಬಿಸಿ ಸುದ್ದಿಗುರಿ ಸಾಧನೆಗೆ ಉತ್ತಮ ನಡತೆ- ಕಠಿಣ ಪರಿಶ್ರಮ ಅಗತ್ಯ

ಗುರಿ ಸಾಧನೆಗೆ ಉತ್ತಮ ನಡತೆ- ಕಠಿಣ ಪರಿಶ್ರಮ ಅಗತ್ಯ

ಕಲಬುರಗಿ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿ ಸಾಧನೆ ಮಾಡಬೇಕಾಎದರೆ ಉತ್ತಮ ನಡತೆ ಮತ್ತು ಕಠಿಣ ಪರಿಶ್ರಮ ಅತ್ಯಂತ ಅಗತ್ಯವಾಗಿದೆ ಎಂದು ಗುರೂಜಿ ಡಿಗ್ರಿ ಕಾಲೇಜಿನ ಅಧ್ಯಕ್ಷ ಕಲ್ಯಾಣರಾವ ಶೀಲವಂತ ತಿಳಿಸಿದರು.

ಶ್ರೆಯಮ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉತ್ತರ ವಲಯ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮನೆ ಮನಗಳಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕನ್ನಡ ನಾಡು ವಿಶ್ವದಲ್ಲಿ ಶ್ರೇಷ್ಠವಾಗಬೇಕಾದರೆ ಉತ್ತಮ ನಡತೆ ಹೊಂದಿ ತಮ್ಮ ಗುರಿಯನ್ನು ಸಾಧಸುವಲ್ಲಿ ತುಂಬಾ ಪ್ರಯತ್ನಪಡಬೇಕೆಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪೆÇ್ರ. ಯಶ್ವಂತರಾಯ ಅಷ್ಟಗಿ ಮಾತನಾಡಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ಮಾಡಿದ ಮಹನೀಯರನ್ನು ನೇನೆಯುವದು ತುಂಬಾ ಅವಶ್ಯಕವಾಗಿದೆ. ನರ ನಾಡಿಗಳಲ್ಲಿ ಕನ್ನಡದ ಅಭಿಮಾನ ಇರಬೇಕೆಂದು ಹೇಳುತ್ತಾ ಕನ್ನಡ ಭಾಷೆಯನ್ನು ವಿಶೇಷವಾಗಿ ಯುವಕರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಉತ್ತರ ವಲಯ ಅಧ್ಯಕ್ಷ ಪ್ರಭುಲಿಂಗ ಮಾತನಾಡಿ, ಕನ್ನಡ ಭಾಷೆ ಉಳಿಸಿ ಬೆಳೆಸಬೇಕಾಗಿದ್ದು ತುಂಬ ಅಗತ್ಯವಾಗಿದ್ದು, ಅದರಲ್ಲಿ ಶೈಕ್ಷಣಿಕ ರಂಗದಲ್ಲಿ ನಾವು ಎತ್ತರಕ್ಕೆ ಬೆಳೆಯಬೇಕಾದರೆ ಮಾತೃ ಭಾಷಾ ಶಿಕ್ಷಣ ಅತ್ಯಗತ್ಯವಾಗಿದೆ ಎಂದು ನುಡಿದರು.

ಮುಖ್ಯ ಅತಥಿಗಳಾಗಿ ಕಾಲೇಜಿನ ಪ್ರಾಚಾರ್ಯ ಪಂಡರಿನಾಥ ಕುಂಬಾರ. ಹಾಗೂ ವಿಶ್ವನಾಥ ಕಟ್ಟಿಮನಿ, ರವಿಕುಮಾರ್ ಬಿರಾದಾರ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭುಲಿಂಗ ಮೂಲಗೆ ಮಾತನಾಡಿ ಕನ್ನಡ ಕಟ್ಟುವ ಕಾರ್ಯ ನಿರಂತರವಾಗಿ ಮಾಡುತ್ತನ್ನೆ ಎಂದು ಹೇಳಿದರು.

ಕಾರ್ಯಕ್ರಮದ ಕನ್ನಡ ಸಾಹಿತ್ಯ ಪರಿಷತ್ ಉತ್ತರ ವಲಯ ಸಂಚಾಲಕ ನವಾಬ ಖಾನ್ ಸ್ವಾಗತವನ್ನುನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದರ್, ಗೌರವ ಕಾರ್ಯದರ್ಶಿ ಹಣಮಂತರಾಯ ದಿಂಡೂರೆ, ನಾಗೇಶ ತಿಮ್ಮಾಜಿ, ಕೋಶಾಧ್ಯಕ್ಷರದ ಶ್ರೀಕಾಂತ್ ಪಾಟೀಲ್, ಶಿವರುದ್ರಯ್ಯ ಮಗಿ, ಕೃಷ್ಣಾ ನಾಯಕ್, ಶಿವಲಿಂಗಪ್ಪ ಟೆಂಗಳಿ, ಹೇಮಂತ್ ಸರದಾರ್, ಕವಿತಾ ದೆಗಾವ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular