ಕುಡಿಯುವ ನೀರಿನ ಕಾಮಗಾರಿ ತ್ವರಿತಗತಿಯಲ್ಲಿ ಕೈಗೊಳ್ಳಲು ಸೂಚನೆ

0
3

ಆಳಂದ: ಮುಂಬರುವ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೆತ್ತಿಕೊಂಡ ಜಲಜೀವನ ಮೀಷನ್ ಅಡಿಯಲ್ಲಿ ಕಾಮಗಾರಿಗಳು ತ್ವರಿತಗತಿಯಲ್ಲಿ ಕೈಗೊಂಡು ಜನರಿಗೆ ಅನುಕೂಲ ಒದಗಿಸಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ಚಿತಲಿ ಗ್ರಾಮದಲ್ಲಿ ಜಲಜೀವನ ಮಿಷನ್ ಅಡಿಯಲ್ಲಿ 1.22 ಕೋಟಿ ವೆಚ್ಚದಲ್ಲಿ ಗ್ರಾಮದ 286 ಮನೆಗಳಿಗೆ ನಲ್ಲಿ ನೀರು ಪೂರೈಕೆ ಕಾಮಗಾರಿ ಮತ್ತು ಕೋಳಿ ಸಮಾಜಕ್ಕೆ ಕೆಕೆಆರ್‍ಡಿಬಿ 25 ಲಕ್ಷ ವೆಚ್ಚದ ಅನುದಾನದಲ್ಲಿ ಭವನ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಶಾಶ್ವತ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ಗ್ರಾಮಗಳಲ್ಲಿ ಜಲಜೀವನ ಮೀಷನ್ ಅಡಿಯಲ್ಲಿ ಕಾಮಗಾರಿ ಮೂಲಕ ಪ್ರತಿಮನೆಗೆ ನಲ್ಲಿ ನೀರು ಒದಗಿಸುವುದು ಮತ್ತು ಶಾಶ್ವತ ನೀರು ದೊರೆಯುವ ಸ್ಥಳದಿಂದ ಪೈಪಲೈನ್ ಸಂಪರ್ಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ಹವಲಡೆ ಪೂರ್ಣಗೊಂಡಿದ್ದು ಇನ್ನೂ ಬಾಕಿ ಉಳಿದ ಕಾಮಗಾರಿಗಳನ್ನು ನಿಗದತಿ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಹಾಜರಿದ್ದ ಅಧಿಕಾರಿಗಳಿಗೆ ಶಾಸಕರು ಹೇಳಿದರು.

ತಾಲೂಕಿನ ಕೋಳಿ ಸಮಾಜದ ಜನರಿರುವ 15 ಗ್ರಾಮಗಳಲ್ಲಿ ಕೋಳಿ ಸಮಾಜ ಭವನ ನಿರ್ಮಾಣಕ್ಕೆ ಅನುದಾನ ನೀಡಿ ಭವನ ನಿರ್ಮಿಸಲಾಗುತ್ತಿದೆ. ಗ್ರಾಮಕ್ಕೆ ಬರುವ ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳನ್ನು ಸಾರ್ವಜನಿಕರು ಪಕ್ಷಭೇದ ಮಾಡದೆ ಸರ್ವರು ಕೂಡಿ ಉತ್ತಮ ಕಾಮಗಾರಿಗಳನ್ನು ಕೈಗೊಳ್ಳಬೇಕು. ಅಗತ್ಯ ಬೇಡಿಕೆಗಳಿಗೆ ಅನುದಾನ ನೀಡಲು ಸದಾ ಬದ್ಧವಾಗಿದ್ದೇನೆ ಎಂದು ಅವರು ಹೇಳಿದರು.
ಕೋಳಿ ಸಮಾಜದ ತಾಲೂಕು ಅಧ್ಯಕ್ಷ ಶರಣಪ್ಪ ನಾಟಿಕಾರ್, ಸೀತಾರಾಮ ಜಮಾದಾರ ಶಾಸಕರು ಕೋಳಿ ಸಮಾಜಕ್ಕೆ ಸಾಗಷ್ಟು ಅನುದಾನ ನೀಡಿ ಸಹಕಾರಿದ್ದು ಸದಾ ಶಾಸಕರ ಬೆನ್ನಲುಬಾಗಿ ಸಮಾಜ ನಿಲ್ಲುವುದು ಎಂದರು.

ವೇದಿಕೆಯಲ್ಲಿ ಜೆಜೆಎಂ ಎಇಇ ಚಂದ್ರಮೌಳಿ, ಪಿಆರ್‍ಇ ಜೆಇ ಸಂದೀಪ ಪಾಟೀಲ, ಸಂಪತಕುಮಾರ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಶ್ರೀಮಂತ ನಾಮಣೆ, ಬಸವರಾಜ ಕೇರೂರ, ಪಂಡಿತರಾವ್ ಪಾಟೀಲ, ಅಲ್ಪಸಂಖ್ಯಾತ ಘಟಕದ ಬಿಜೆಪಿ ಉಪಾಧ್ಯಕ್ಷ ಮಹಿಬೂಬ ಶೇಖ, ಅಶೋಕ ಕೋತನಹಿಪ್ಪರಗಾ ಅಶೋಕ ಕೋರೆ, ಕಿಶನರಾವ್ ಪಾಟೀಲ, ಸಿದ್ಧಣ್ಣಾ ಉಜಳಂಬೆ, ಮಾರುತಿ ಜಮಾದಾರ, ಗ್ರಾಪಂ ಸದಸ್ಯ ವಿಠ್ಠಲ ಚನ್ನಶೆಟ್ಟಿ, ಚನ್ನಬಸಪ್ಪ ಕೋಟೆ, ಮುಖಂಡ ಶಿವುಪುತ್ರ ಕವಲಗಾ, ಅಣ್ಣಾರಾವ್ ಕವಲಗಾ, ಬಸವರಾಜ ಕವಲಗಾ, ರವಿಂದ್ರ ಜಮಾದಾರ, ವಾಮನ್ ಪಾಟೀಲ, ಮನೋಹರ ಪಾಟೀಲ, ಬಸವರಾಜ ಕೋರೆ, ಶರಣಪ್ಪ ಕೋರೆ, ರಾಜೇಂದ್ರ ಹಸೂರೆ, ನಾಗೇಂದ್ರಪ್ಪ ಚನಶೆಟ್ಟಿ, ಶಿವಲಿಂಗ ಜಮಾದಾರ, ರಾಮಲಿಂಗ ಜಮಾದಾರ ಮತ್ತಿತರು ಉಪಸ್ಥಿತರಿದ್ದರು.

ಹಿರಿಯ ಮಾರುತಿ ಜಮಾದಾರ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಕಾಂಗ್ರೆಸ್ ತೊರೆದು ಅಂಬಾರಾಯ ಜಮಾದಾರ ಚಿತಲಿ ಅವರು ಬಿಜೆಪಿ ಸೇರ್ಪಡೆಗೊಂಡ ಪ್ರಯುಕ್ತ ಶಾಸಕರು ಸ್ವಾಗತಿಸಿಕೊಂಡರು. ನಾಮದೇವ ಶಖಾಪೂರೆ ನಿರೂಪಿಸಿದರು. ಅಂಬಾರಾಯ ಜಮಾದಾರ ಸ್ವಾಗತಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here