ರಾಜ್ಯೋತ್ಸವ ಪ್ರಶಸ್ತಿ ನೀಡುವಲ್ಲಿ ಯಾದಗಿರಿ ಜಿಲ್ಲೆಗೆ ಅನ್ಯಾಯ

0
191

ಯಾದಗಿರಿ: ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಲಕ್ಕುಂಡಿ ಗ್ರಾಮದ ಶ್ರೀ ತಿಪ್ಪಣ್ಣ ಹೆಳವರ ಇವರಿಗೆ ಕರ್ನಾಟಕ ಸರ್ಕಾರ ಕೊಡುವ ಅತ್ಯುನ್ನತ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ ಯಾದಗಿರಿ ಜಿಲ್ಲೆಯಿಂದ ಕೊಟ್ಟಿದ್ದಾರೆ.ಇದು ನ್ಯಾಯವೆ.ಅವರಿಗೆ ಅವರ ಜಿಲ್ಲಾ ಮೂಲಕ ಕೊಡಬೇಕಿತ್ತು.ಅವರಿಗೆ‌ ಕೊಟ್ಟದ್ದಕ್ಕೆ ಬೇಜಾರಿಲ್ಲ.ಆದರೆ‌ ಯಾದಗಿರಿ ಜಿಲ್ಲೆಯಲ್ಲಿ ಯಾರು‌ ಅರ್ಹರು ಇಲ್ಲವೇ? ಯಾದಗಿರಿ ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಜನ‌ತೆಗೆ ಬೇಸರವಾಗಿದೆ ಎಂದು ಶಂಕರರೆಡ್ಡಿ ಪಾಟೀಲ ಟೊಣ್ಣುರು ತಿಳಿಸಿದ್ದಾರೆ.

ಇವರಿಗೆ ಯಾದಗಿರಿ ಜಿಲ್ಲೆಯ ಕೋಟಾದಲ್ಲಿ ಪುರಸ್ಕಾರ ನೀಡಿರುವದು ಅತ್ಯಂತ ಖಂಡನೀಯ. ಅವರಿಗೆ ಅವರ ಜಿಲ್ಲೆಯಲ್ಲಿ ಅರ್ಹತೆ ಇದ್ದರೆ ನೀಡಬೇಕಿತ್ತು. ಕಲಬುರ್ಗಿ ಜಿಲ್ಲೆಗೂ ಹೀಗೆ ಆಗಿದೆ. ಬೆಳಗಾವಿ ಜಿಲ್ಲೆಯ ಲೇಖಕನಿಗೆ ಕಲಬುರ್ಗಿ ಕೋಟಾದಲ್ಲಿ ನೀಡಿದ್ದಾರೆ.ಇದು‌ ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಜನರಿಗೆ ತೀವ್ರ ಬೇಸರವಾಗಿದೆ. ಆಡಳಿತ ಪಕ್ಷದ ಶಾಸಕರು ಇದನ್ನು ಖಂಡಿಸಿ ರದ್ದುಗೊಳಿಸಬೇಕು.

Contact Your\'s Advertisement; 9902492681

ಈ ಎರಡು ಜಿಲ್ಲೆಯ ಮೂಲಕ ಪುರಸ್ಕಾರ ಪಡೆದವರ ಆಧಾರ ಕಾರ್ಡ್ ಪರಿಶೀಲನೆ ಮಾಡಿದರೆ ಆಗ ಎಲ್ಲರಿಗೂ ಸತ್ಯ ತಿಳಿತದೆ.ನಮ್ಮ ಜಿಲ್ಲೆಯಲ್ಲಿ ಅರ್ಹರಿಲ್ಲವೆ ? ಎಂದು ಅನೇಕ ಗಣ್ಯರು ಬೇಸರ ವ್ಯಕ್ತಪಡಿಸಿದ್ದಾರೆಂದು ಲೇಖಕ ಸಿದ್ಧರಾಮ ಹೊನ್ಕಲ್, ಶಂಕರರೆಡ್ಡಿ ಪಾಟೀಲ, ನಿವೃತ್ತ ಎಸ್.ಪಿ. ಭಂಡಾರಿ ಪತ್ರಿಕಾ ಹೇಳಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಮತ್ತು ಆಯ್ಕೆ ಸಮಿತಿಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here