ಕಲಬುರಗಿ: ಕಬ್ಬು ನುಸಿರುವ ಹಂಗಾಮು ಆರಂಭವಾಗುವ ಸಂದರ್ಭದಲ್ಲೇ ಆಳಂದ ತಾಲೂಕಿನ ಭೂಸನೂರ್ ಸಕ್ಕರೆಕಾರ್ಖಾನೆ ಬಾಗಿಲು ಮಚ್ಚಿಕೊಂಡಿರೋದು ಸರಿಯಾದ ಬೆಳವಮಿಗೆಯಲ್ಲ. ರೈತರಿಗೆ ಅನುಕೂಲವಗುವಂತೆ, ಟನ್‍ಗೆ 3, 600 ಬೆಲೆ ನೀಡುವ ಮೂಲಕ ಬೇಗ ಕಬ್ಬು ಖರೀದಿ ಶುರು ಮಾಡಲಿ ಎಂದು ಕೆಪಿಸಿಸಿ ಮಾಜಿ ಸದಸ್ಯ ಹಾಗೂ ಪ್ರಗತಿಪರ ರೈತ ಹಣಮಂತ ಭೂಸನೂರ್ ಆಗ್ರಹಿಸಿದ್ದಾರೆ.
ಹೇಳಿಕೆ ನೀಡಿರುವಅವರುಕಾರ್ಖಾನೆ ಮುಂದೆಕಬ್ಬು ಬೆಳೆಗಾರರು ಒಂದೆಡೆಧರಣಿ ನಡೆಸುತ್ತಿದ್ದರೆ, ಇನ್ನೊಂದಡರೈತರ ಪರವಾಗಿಯೇ ಸಂಘಟನೆಯವರುಧರಣಿ ಮಾಡುತ್ತಿದ್ದಾರೆ. ರೈತರ ಸಮಸ್ಯೆಯಗಂಭೀರತೆಗೆಇದುಕನ್ನಡಿ. ಹೀಗಾಗಿ ಕ್ಷೇತ್ರದ ಶಾಸಕರು ಈ ಸಮಸ್ಯೆಗಂಭೀರವಾಗಿ ಪರಿಗಣಿಸಿ ಬೇಗ ಪರಿಹಾರಕ್ಕೆ ಮುಂದಾಗಬೇಕುಎಂದು ಆಗ್ರಹಿಸಿದ್ದಾರೆ.
ಅತಿಯಾದ ಮಳೆಗೆ ಈ ಬಾರಿ ಆಳಂದ ಸೇರಿದಂತೆಎಲ್ಲಾಕಡೆ ಬೆಳೆಗಳು ಹಾಳಾಗಿವೆ. ಕಬ್ಬು ಪರವಾಗಿಲ್ಲಎಂಬಂತೆ ಬೆಳೆದಿದೆ. ಈಗ ಬೆಲೆ ಸಮಸ್ಯೆ, ಖರಿದಿ ವಿಳಂಬವಾದಲ್ಲಿರೈತರುಇನ್ನೂತೊಂದರೆ ಸಿಲುಕುತ್ತಾರೆ. ತಕ್ಷಣ ಜಿಲ್ಲಾಡಳಿತ ಗಮನ ಹಸಿಸಬೇಕು. ಶಾಸಕರುತಕ್ಷಣ ಮದ್ಯಪ್ರವೇಶ ಮಾಡಿ ಸಮಯ ಹಾಳು ಮಾಡದೆರೈತರೊಂದಿಗೆಇದ್ದುಅವರ ಬೇಡಿಕೆಗೆಅನುಗುಣವಾಗಿಎಲ್ಲವನ್ನು ಪರಿಹರಿಸಬೇಕುಎಂದು ಹಣಮಂತ ಭೂಸನೂರ್ ಒತ್ತಾಯಿಸಿದ್ದಾರೆ.