ಕಲಬುರಗಿ; ಆಂಧ್ರಪ್ರದೇಶದ ಶ್ರೀಶೈಲಂನ ಸಾರಂಗÀ ಮಠದ ಜಗದ್ಗುರು ಶ್ರೀ ಸಾರಂಗಧÀರ ದೇಶಿಕೇಂದ್ರ ಮಹಾಸ್ವಾಮಿಗಳು, ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶರಣಬಸವಪ್ಪ ಅಪ್ಪಾಜಿಯವರಿಗೆ ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರು ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಕಲ್ಯಾಣ ಕರ್ನಾಟಕ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದರು.
ಕಲಬುರಗಿ ನಗರದ ಶರಣಬಸವೇಶ್ವರ ದಾಸೋಹ ಮಹಾಮನೆಯಲ್ಲಿ ಸೋಮವಾರ ನಡೆದ ಪೂಜ್ಯ ಡಾ. ಅಪ್ಪಾಜಿಯವರ 88ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀ ಸಾರಂಗಧÀರ ದೇಶಿಕೇಂದ್ರ ಮಹಾಸ್ವಾಮಿಗಳು, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಈ ಮಠಾಧೀಶರ ಕೊಡುಗೆಯನ್ನು ಪರಿಗಣಿಸಿದರೆ ಪೂಜ್ಯ ಡಾ.ಅಪ್ಪಾಜಿಯವರಿಗೆ ಪದ್ಮಭೂಷಣ ಮತ್ತು ಪದ್ಮ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಆದಾಗ್ಯೂ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ವಿಷಯ ತಿಳಿದಿದ್ದು ಈ ಗೌರವಗಳನ್ನು ಅವರಿಂದ ನೀರಾಕರಿಸಲಾಗಿದ್ದು ಈ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿದ್ದಾಗ ನಾನು ಆಯಾ ಮುಖ್ಯಮಂತ್ರಿಗಳಿಗೆ ಈ ವಿಷಯವಾಗಿ ಮನವಿ ಮಾಡಿದ್ದೆ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಡಾ.ಅಪ್ಪಾಜಿಯವರಿಗೆ ಪದ್ಮಶ್ರೀ ನೀಡಿ ಗೌರವಿಸಬೇಕೆಂದು ಮನವಿ ಮಾಡಿದ್ದೇನೆ.
ಸಮಾರಂಭದಲ್ಲಿ ಉಪಸ್ಥಿತರಿದ್ದ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‍ಡಿಬಿ) ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ್ ಅವರನ್ನು ಮನವಿ ಮಾಡಿದÀ ಮಹಾಸ್ವಾಮಿಗಳು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಸರ್ವಪಕ್ಷ ನಿಯೋಗ ಹಾಗೂ ಈ ಭಾಗದ ಸ್ವಾಮೀಜಿಗಳ ನಿಯೋಗ ಬೆಂಗಳೂರಿಗೆ ತೆರಳಬೇಕು ಹಾಗೂ ಪೂಜ್ಯ ಡಾ.ಅಪ್ಪಾಜಿಯವರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲು ಒಟ್ಟಾಗಿ ಮನವಿ ಮಾಡಬೇಕೆಂದು ತಿಳಿಸಿದರು.
ಪೂಜ್ಯ ಡಾ.ಅಪ್ಪಾಜಿಯವರ 88ನೇ ಜನ್ಮದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಮುಖಂಡರು, ರಾಜಕೀಯ ನಾಯಕರು ಹಾಗೂ ಭಕ್ತಾದಿಗಳು ಪೂಜ್ಯ ಡಾ.ಅಪ್ಪಾಜಿ ಅವರನ್ನು ಸನ್ಮಾನಿಸಿದರು. ಪೂಜ್ಯ ಅಪ್ಪಾಜಿ ಅವರ ಕುಟುಂಬದವರಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ, ಅವರ ಸಹೋದರಿಯರಾದ ಕು.ಭವಾನಿ, ಕು.ಶಿವಾನಿ ಮತ್ತು ಕು.ಮಹೇಶ್ವರಿ ಅವರು ಸೇರಿದಂತೆ ಇತರ ಕುಟುಂಬ ಸದಸ್ಯರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ಪೂಜ್ಯ ಡಾ ಅಪ್ಪಾಜಿಯವರ 88ನೇ ಜನ್ಮದಿನಾಚರಣೆಯ ಸಾಂಕೇತಿಕವಾಗಿ 88 ದೀಪಗಳಿಂದ ಕೂಡಿದ ಆರತಿಯನ್ನು ಕುಟುಂಬದವರೆಲ್ಲರೂ ಸೇರಿ ಪೂಜ್ಯ ಡಾ ಅಪ್ಪಾಜಿಯವರಿಗೆ ಬೆಳಗಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ನಿಷ್ಠಿ, ‘ರಾಜನು ತತ್ವಜ್ಞಾನಿಯಾಗಬೇಕು’ ಎಂಬ ಪ್ಲೂಟೊ ಹೇಳಿದ ಮಾತು ನಿಜವಾಗಲು ಪೂಜ್ಯ ಡಾ.ಅಪ್ಪಾಜಿ ಅವರು ಒಂದು ನಿದರ್ಶನ. ಕಲ್ಯಾಣ ಕರ್ನಾಟಕ ಭಾಗದ ಜನರ ನಾಡಿಮಿಡಿತ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಹು ಹಂತದ ಮಾರ್ಗಗಳನ್ನು ಒದಗಿಸುವ ದಿಕ್ಕಿನಲ್ಲಿ ಕೈಗೊಂಡ ಕೆಲಸ ಹಾಗೂ ಪೂಜ್ಯ ಡಾ.ಅಪ್ಪಾಜಿಯವರ ದೂರದೃಷ್ಟಿಯ ನಿರ್ಧಾರದಿಂದ ಶರಣಬಸವೇಶ್ವರ ರೆಸಿಡೆನ್ಶಿಯಲ್ ಪಬ್ಲಿಕ್ ಶಾಲೆಯನ್ನು ಸ್ಥಾಪಿಸಿದ್ದು, ಇಂದು ಅದು ಗುಣಮಟ್ಟದ ಶಿಕ್ಷಣ ನೀಡುವ ಹೆಗ್ಗುರುತಾಗಿದೆ ಈ ಭಾಗದ ಸಾವಿರಾರು ವಿದ್ಯಾರ್ಥಿಗಳು ವೈದ್ಯರು, ತಂತ್ರಜ್ಞರು ಮತ್ತು ಭಾರತದ ವಿವಿಧ ಕಂಪನಿಗಳಲ್ಲಿ ಪ್ರಪಂಚದ ಇತರ ಭಾಗಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ನಗರದ ಹೊರವಲಯದ ಶರಣಶಿರಸಗಿ ಗ್ರಾಮದಲ್ಲಿ ಶರಣಬಸವ ವಿಶ್ವವಿದ್ಯಾಲಯ ಸ್ಥಾಪನೆಗೆ ಉದ್ದೇಶಿಸಿರುವ ಜಾಗದಲ್ಲಿ ರಸ್ತೆ ನಿರ್ಮಿಸಲು ಕೆಕೆಆರ್‍ಡಿಬಿ ನಿಧಿಯಿಂದ 3 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಕ್ಕಾಗಿ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಅವರು ಅಧ್ಯಕ್ಷರಾದ ಶ್ರೀ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ಧನ್ಯವಾದ ಅರ್ಪಿಸಿದರು.
ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿಯವರು ಪೂಜ್ಯ ಅಪ್ಪಾಜಿಯವರಿಗೆ ನಮನ ಸಲ್ಲಿಸಿ ಡಾ.ಅಪ್ಪಾಜಿಯವರ 88ನೇ ಜನ್ಮದಿನಾಚರಣೆಯನ್ನು ಸ್ಮರಣೀಯವಾಗಿಸಿದ ಎಲ್ಲ ಗಣ್ಯರು, ರಾಜಕೀಯ ಮುಖಂಡರು ಹಾಗೂ ಶಿಕ್ಷಣಾಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಇದೇ ಸಂಧರ್ಭದಲ್ಲಿ ಶಾಲಾ-ಕಾಲೇಜುಗಳಲ್ಲಿ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಚೌಡಾಪುರಿ ಮಠದ ಡಾ.ರಾಜಶೇಖರ ಶಿವಾಚಾರ್ಯರು, ಮಾಜಿ ಎಂಎಲ್‍ಸಿ ಅಲ್ಲಮಪ್ರಭು ಪಾಟೀಲ, ಡಾ.ಉಮಾ ದೇಶಮುಖ, ಡಾ.ಶರಣಬಸಪ್ಪ ಕಾಮರೆಡ್ಡಿ, ವಿವಿಯ ಸಮಕುಲಪತಿ ಪೆÇ್ರ.ವಿ.ಡಿ.ಮೈತ್ರಿ, ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ, ಹಣಕಾಸು ಅಧಿಕಾರಿ ಪೆÇ್ರ.ಕಿರಣ ಮಾಕಾ ಸೇರಿದಂತೆ ಇತರರು ಉಪಸ್ಥಿತರಿದ್ದರು.