ಜಯ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ 67 ನೇ ಕರ್ನಾಟಕ ರಾಜ್ಯೋತ್ಸವ 

0
9

ಕಲಬುರಗಿ: ತಾಲೂಕಿನ ಖಾಜಾ ಕೊಟನೂರ ಗ್ರಾಮದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಘಟಕದ ವತಿಯಿಂದ 67 ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಉತ್ಸವ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪುನೀತ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀನಿವಾಸ ಸರಡಗಿಯ ಶಕ್ತಿಪೀಠದ ಪರಮ ಪೂಜ್ಯ ಶ್ರೀ ಡಾ ಅಪ್ಪಾರಾವ್ ದೇವಿ ಮುತ್ಯಾ ಅವರು ವಹಿಸಿದ್ದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಶೇಖರ್ ಮಡಿವಾಳ ವಹಿಸಿದ್ದರು. ಜಯ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಕೆ.ಸಿ ರಾಜಪ್ಪ ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ, ಬಿಜೆಪಿ ಮುಖಂಡ ಶಿವು ಗುತ್ತೇದಾರ, ಸೇನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಸ್.ಕಿಳ್ಳಿ, ಕಾರ್ಯಕ್ರಮ ಆಯೋಜಕ ಹಾಗೂ ಸೇನೆಯ ಉಪಾಧ್ಯಕ್ಷ ಅಂಬರೀಷ ನೂಲಕರ್, ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜೆಲ್ಲಪ್ಪ, ಬ್ರಹ್ಮಪೂರ ಪೆÇಲೀಸ್ ಠಾಣೆ ಪಿ.ಎಸ್.ಐ ಯಶೋದಾ ಕಟಕೆ, ಹೋರಾಟಗಾರರಾದ ಸಚಿನ ಪರಹತಾಬಾದ, ಮಂಜುನಾಥ ನಾಲವಾರಕರ, ಗೋಪಾಲ ನಾಟೇಕಾರ, ವಿಕ್ರಮ ಸಿದ್ದಾರೆಡ್ಡಿ, ದಾವೂದ್ ಅಲಿ, ಅಭಿಷೇಕ ಬಾಲಾಜಿ, ರವಿ ದೇಗಾವ ಹಾಗೂ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನೇತೃತ್ವವನ್ನು ಅಂಬರೀಷ್ ನೂಲಕರ್, ಶಾಮರಾವ ದೋಡಮನಿ, ಪೀರಪ್ಪ ಕಟ್ಟಮನಿ, ಚನ್ನವೀರ ಬೆಳಗುಂಪಾ, ಜಯಶ್ರೀ ನಾರಾಯಣಕರ್ ಸೇರಿದಂತೆ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here