ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೇಶದ ವಿವಿಧ ರಾಜ್ಯದಿಂದ ವೈದ್ಯರು ಪಾಲ್ಗೊಂಡಿದ್ದರು. ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗದಿಂದ ಕಲಬುರಗಿಯ ಮನ್ನೂರ್ ಆಸ್ಪತ್ರೆ ಈ ಪ್ರಶಸ್ತಿ ಸ್ವಿಕರಿಸಿದ್ದು ನಮ್ಮ ಭಾಗ ಆರೋಗ್ಯ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಎರುತ್ತಿದೆ ಎಂಬುವುದಕ್ಕೆ ಉದಾಹರಣೆ. ಈ ಪ್ರಶಸ್ತಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅರ್ಪಿಸಿದ್ದೇನೆ.- ಡಾ. ಫಾರುಕ್ ಮನ್ನೂರ, ಮನ್ನೂರ ಆಸ್ಪತ್ರೆಯ ನಿರ್ದೆಶಕರು.
ಕಲಬುರಗಿ : ನಗರದ ಪ್ರತಿಷ್ಠಿತ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗೆ ಗ್ಲೊಬಲ್ ಹೆಲ್ಥ್ ಕೇರ್ & ವೆಲ್ ನೇಸ್ ಅವಾರ್ಡ 2022 ಕಾನಫೀರೇನ್ಸ್ ವತಿಯಿಂದ ರಾಷ್ಟ್ರ ಮಟ್ಟದ (Excellence Award in Accident and Emergency Care) ಪ್ರಶ್ತಸ್ತಿಯನ್ನು ನವೆಂಬರ 19 ರಂದು ಚೇನೈನ ಬೈ ಐಟಿಸಿ ಹೋಟೆಲ್ ನಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ವಿಜಯಕುಮಾರ ಶಾ , ಆಂದ್ರಪ್ರದೇಶದ ಮಾಜಿ ಸಚಿವೆ ಕೆ.ಪುಷ್ಪಲಿಲಾ ಅವರು ಮನ್ನೂರ ಆಸ್ಪತ್ರೆಯ ನಿರ್ದೆಶಕರಾದ ಡಾ. ಫಾರುಕ್ ಮನ್ನೂರಗೆ ಪ್ರಶಸ್ತಿ ಪ್ರಾದಾನ ಮಾಡಿದ್ದರು.
ಈ ವೇಳೆ ಗ್ಲೋಬಲ್ ಹೆಲ್ತ್‌ಕೇರ್ – ವೆಲ್‌ನೆಸ್ ಅವಾರ್ಡ್ಸ್ ಮತ್ತು ಕಾನ್ಫರೆನ್ಸ್ 2022 ಥೀಮ್ – ಉತ್ತಮ ಆಸ್ಪತ್ರೆ ಆರೋಗ್ಯ ರಕ್ಷಣೆಗಾಗಿ ಹೊಸ ಸವಾಲುಗಳನ್ನು ಅನ್ವೇಷಿಸುವುದರ ಕುರಿತು ಡಾ. ಫಾರೂಕ್ ಮನ್ನೂರ ಅವರು ನವೀನ, ರೋಗಿ ಕೇಂದ್ರಿತ ಆರೋಗ್ಯ ರಕ್ಷಣೆ, ಮೂಲಸೌಕರ್ಯವನ್ನು ವಿನ್ಯಾಸಗೊಳಿಸುವ ಕುರಿತು ಪ್ಯಾನಲ್ ಚರ್ಚೆಯ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳ ಮುಖ್ಯಸ್ಥರು ಮತ್ತು ವೈದ್ಯರು ಪಾಲ್ಗೊಂಡಿದ್ದರು.