ಸುರಪುರ: ಹುಣಸಗಿ ಮತ್ತು ಸುರಪುರ ತಾಲೂಕಿನಲ್ಲಿ ಮೆದುಳು ಜ್ವರ ಕಾಯಿಲೆ ತಡೆಗಟ್ಟಲು ಇದೇ ಡಿಸೆಂಬರ್ 5 ಸೋಮವಾರದಿಂದ 1ರಿಂದ 15 ವಯಸ್ಸಿನ ಮಕ್ಕಳಿಗೆ ಜೆಇ ಲಸಿಕೆ ಹಾಕಿಸುವ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರಾಜಾ ವೆಂಕಪ್ಪ ನಾಯಕ ಅವರು ತಿಳಿಸಿದ್ದಾರೆ.
ಮೆದುಳು ಜ್ವರ ಕಾಯಿಲೆಗೆ ಜಪಾನೀಸ್ ಎನ್ ಸೆಫಲೈಟಿಸ್ ಒಂದು ಮುಖ್ಯ ಕಾರಣವೆನ್ನಲಾಗಿದೆ.ಕ್ಯೂಲೆಕ್ಸ್ ಸೊಳ್ಳೆಗಳು ಮೂಲಕ ಈ ಕಾಯಿಲೆ ಹರಡುತ್ತದೆ.ಈಗಾಗಲೇ ಸುರಪುರ ಕ್ಷೇತ್ರದಲ್ಲಿ ಇಬ್ಬರಿಗೆ ಈ ಮೆದುಳು ಜ್ವರ ಕಾಣಿಸಿಕೊಂಡಿದ್ದು ಇದು ಅಪಾಯಕಾರಿಯಾಗಿದೆ. 1 ವರ್ಷದಿಂದ 15 ವರ್ಷದ ವರೆಗಿನ ಮಕ್ಕಳ ಸಂಖ್ಯೆ ಒಟ್ಟು 136896 ಇದ್ದು ಅದರಲ್ಲಿ 1ರಿಂದ 6 ವರ್ಷದರೆಗೆ ನಗರದಲ್ಲಿ 4619 ಗ್ರಾಮೀಣ ಪ್ರದೇಶದಲ್ಲಿ 38250 ಸೇರಿ ಒಟ್ಟು 42869 ಮಕ್ಕಳು ಹಾಗೂ 6 ರಿಂದ 15 ವರ್ಷದವರೆಗೆ ನಗರದಲ್ಲಿ 10678 ಗ್ರಾಮೀಣ ಪ್ರದೇಶದಲ್ಲಿ 83349 ಸೇರಿ ಒಟ್ಟು 94027 ಮಕ್ಕಳು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳು ಒಟ್ಟು 652 ಇದ್ದಾರೆ.
ಒಟ್ಟು ಲಸಿಕೆ ಹಾಕುವ ಸೈಟ್ ಗಳ ಸಂಖ್ಯೆ 955 ಒಟ್ಟು ವ್ಯಾಕ್ಸಿನಟರ್ ಸಂಖ್ಯೆ 123 ಮೇಲ್ವಿಚಾರಕರ ಸಂಖ್ಯೆ 44 ಟ್ರಾಂಜಿಟ್ ಪಾಯಿಂಟ್ ಸಂಖ್ಯೆ 15 ಇವೆ.ಜೆ.ಇ.(ಮೆದುಳು ಜ್ವರ ) ತಡೆಗೆಟ್ಟಲು ಈ ಲಸಿಕೆ ಹಾಕಲಾಗುತ್ತದೆ. ನಮ್ಮ ಇಲಾಖೆ ಮತ್ತು ಐಸಿಡಿಎಸ್.ಶಿಕ್ಷಣ ಇಲಾಖೆಯೊಂದಿಗೆ ಅಭಿಯಾನ ಮಾಡಲಾಗುತ್ತದೆ ಆದ್ದರಿಂದ ಸಾರ್ವಜನಿಕರು ಯಶಸ್ವಿ ಗೊಳಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ